ಸರ್ವ ಶಿಕ್ಷಣ ಅಭಿಯಾನಕ್ಕೆ ೨೩.೧೧ ಕೋ. ರೂ.

ಹಾಸನ : ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿ ಸರ್ವ ಶಿಕ್ಷ ಅಭಿಯಾನ ಯೋಜನೆಯಡಿ ವಿವಿಧ ಕಾರ್ಯ ಕ್ರಮ ಅನುಷ್ಠಾನಗೊಳಿಸಲು ಒಟ್ಟು ೨೩.೧೧ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಅನುಷ್ಟಾನ ಸಮಿತಿ ಸಭೆಯಲ್ಲಿ ಯೋಜನೆ ಪರಿಶೀಲಿಸಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಜಾರಿಗೊಳಿಸಲು ಸೂಚಿಸ ಲಾಯಿತು. ಜಿಲ್ಲೆಗೆ ಅಗತ್ಯವಾದ ೫೦ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚಿಸಿದರಲ್ಲದೆ, ಸರ್ಕಾರಿ ಶಾಲೆಗಳಿಗೆ ದಾನಿಗಳಿಂದ ಸವಲತ್ತುಗಳನ್ನು ಕಲ್ಪಿಸಿಕೊಳ್ಳಲು ಮುಂದಾಗುವಂತೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ತಿಳಿಸಿದರು. ಸರ್ವ ಶಿಕ್ಷಣ ಅಭಿಯಾನ ಯೋಜನೆ ೨೨.೭೭ ಕೋಟಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ೧೪.೭೦ ಲಕ್ಷ ಮತ್ತು ಕಸ್ತೂಬಾಗಾಂದಿ ಬಾಲಿಕಾ ವಸತಿ ಶಾಲೆಗೆ ೧೮.೭೫ ಲಕ್ಷ ರೂ. ನಿಗದಿಪಡಿಸಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಚಿಣ್ಣರ ಅಂಗಳ ಕಾರ್ಯ ಕ್ರಮಕ್ಕೆ ೩೭ ಲಕ್ಷ ರೂ., ಮಕ್ಕಳಿಗೆ ಬೇಸಿಗೆ ಕಾಲದ ಪರಿಹಾರ ಬೋಧನೆಗೆ ೧೪ ಲಕ್ಷ ರೂ., ಮಕ್ಕಳ ಪರಿಹಾರ ಬೋಧನೆಗೆ ೭೭ ಲಕ್ಷ ರೂ., ಶಿಕ್ಷಕರ ತರಬೇತಿಗೆ ೧೨೩ ಲಕ್ಷ ರೂ. ಹಾಗೂ ಜಿಲ್ಲಾ ಆಡಳಿತಾತ್ಮಕ ವೆಚ್ಚಕ್ಕಾಗಿ ೧೨೧ ಲಕ್ಷ ರೂ., ಸೇತು ಬಂಧ ಕಾರ್ಯಕ್ರಮಕ್ಕೆ ೩.೬೩ ಲಕ್ಷ ರೂ., ಮಕ್ಕಳ ಟೆಂಟ್ ಶಾಲೆಗೆ ೮.೫೫ ಲಕ್ಷ ರೂ., ಮಕ್ಕಳಿಗೆ ಉಚಿತ ಪಠ್ಯಪುಸ್ತಕಕ್ಕೆ ೧೮.೫೩ ಲಕ್ಷ ರೂ., ಒದಗಿಸಲಾಗಿದೆ. ಪ್ರತಿ ಕಟ್ಟಡಕ್ಕೆ ೯ ಲಕ್ಷ ರೂ.ನಂತೆ ೧೫ ಹೊಸ ಶಾಲಾ ಕಟ್ಟಡಗಳಿಗೆ ೧.೩೫ ಕೋಟಿ, ೪೮ ಹೆಚ್ಚುವರಿ ಕೊಠಡಿಗೆ ೧.೮೨ ಕೋಟಿ ರೂ., ೧೩೦ ಶಾಲೆಗಳ ದುರಸ್ತಿಗೆ ೪೮.೫೦ ಲಕ್ಷ ರೂ. ಮತ್ತು ೧೩೭೨ ಶಾಲೆಗಳಿಗೆ ವಿದ್ಯುತ್ ಸೌಲಭ್ಯಕ್ಕೆ ೬೮.೬ ಲಕ್ಷ ರೂ. ಒದಗಿಸಲಾಗಿದೆ. ಇದಲ್ಲದೆ ಜಿಲ್ಲೆಯ ಎಲ್ಲ ಶಿಕ್ಷಣಾಧಿಕಾರಿ ಕಛೇರಿಗಳಿಗೆ ಕಂಪ್ಯೂಟರ್ ಮತ್ತು ಫ್ಯಾಕ್್ಸ ಖರೀದಿ ಸಲು ಒಪ್ಪಿಗೆ ನೀಡಲಾಯಿತು. ಶಾಸಕ ಹೆಚ್.ಎಸ್. ಪ್ರಕಾಶ್ ಮಾತನಾಡಿ, ಎಲ್ಲಾ ಸರ್ಕಾರಿ ಶಾಲೆಗಳು ನಿವೇಶನ ಕಟ್ಟದ ಮೊದಲಾದ ವಿವರಗಳ ದಾಖಲೆ ಇಟ್ಟುಕೊಳ್ಳಬೇಕೆಂದರು. ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ತರಬೇತಿ ನೀಡುವುದಕ್ಕೆ ವೆಚ್ಚ ಮಾಡುವ ಹಣವನ್ನು ಶಾಲೆಗಳ ಅಭಿವೃದ್ಧಿಗೆ ವೆಚ್ಚ ಮಾಡುವುದು ಸೂಕ್ತ ಎಂದರು. ಜಿಲ್ಲಾ ಪಂಚಾಯಿತಿ ಅದ್ಯಕ್ಷ ಸಿ.ಎನ್. ಬಾಲಕೃಷ್ಣ, ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಶಂಕರನಾರಾಯಣ, ಸಾರ್ವಜನಿಕ ಇಲಾಖೆ ಉಪ ನಿರ್ದೇಶಕ ಪದ್ಮಮ್ಮ ಉಪಸ್ಥಿತರಿದ್ದರು.

No Comments to “ಸರ್ವ ಶಿಕ್ಷಣ ಅಭಿಯಾನಕ್ಕೆ ೨೩.೧೧ ಕೋ. ರೂ.”

add a comment.

Leave a Reply

You must be logged in to post a comment.