ಶೆರ್ಲಿನ್ಳ ದದ್ರ್ಫಏನೂಂತಾ ?

ಬಾಲಿವುಡ್ ಹಾಟ್ ಬಾಂಬ್ ಶೆರ್ಲಿನ್ ಛೋಪ್ರಾಳ ದದ್ರ್-ಇ-ಶೆರ್ಲಿನ್ ಎಂಬ ವೀಡಿಯೋ ಆಲ್ಬಂ ಬಿಡುಗಡೆಯಾಗಿದ್ದು ಪಡ್ಡೆಗಳ ಎದೆಯಲ್ಲಿ ಸಂಚಲನ ಹುಟ್ಟಿಹಾಕಿದೆ. ಜೊತೆಯಲ್ಲೆ ಅನಗತ್ಯ ವಿವಾದಕ್ಕೂ ದಾರಿಮಾಡಿದೆ. ವಿಷ್ಯ ಏನಪಾ ಅಂದ್ರೆ, ಬಾಲಿವುಡ್ನ ಕನಸಿನ ಕನ್ಯೆ ಎಂದೇ ಹೆಸರಾಗಿರುವ ಹೇಮಾಮಾಲಿನಿಯವರಿಗೆ ಈ ವೀಡಿಯೋ ಆಲ್ಬಂನ್ನು ಅರ್ಪಿಸಲಾಗಿದೆ. ಆದರೆ ಈ ವಿಚಾರ ಹೇಮಾಮಾಲಿನಿ ಗಮನಕ್ಕೆ ಬಂದಂತಿಲ್ಲ . ಬೆತ್ತಲಾಗಿ, ಬಿಂದಾಸ್ ಆಗಿ ಮೈಕುಣಿಸಿರುವ ಶೆರ್ಲಿನ್ ಸದರಿ ಆಲ್ಬಂನ್ನು ಹೇಮಾಮಾಲಿನಿಗೆ ಅರ್ಪಿಸಿದ್ದೇಕೋ ತಿಳಿಯದು. ಆಲ್ಬಂ ವೀಕ್ಷಿಸಿದ ಹೇಮಾಮಾಲಿನಿ ಗರಬಡಿದಂತಾಗಿದ್ದಾರೆ. ನಾನು ಶೆರ್ಲಿನ್ಳ ಹಸಿಬಿಸಿ ಆಲ್ಬಂ ನೋಡಿದ್ದೀನಿ, ನನಗೆ ಈ ಆಲ್ಬಂನ್ನು ಯಾಕೆ ಅರ್ಪಿಸಿದ್ದಾರೋ ತಿಳಿಯುತ್ತಿಲ್ಲ, ಬಹುಶ ಆಕೆಗಂಟಿರುವ ಸೆಕ್ಸಿ ಇಮೇಜ್ನ್ನು ತೊರೆಯಲು ನನ್ನ ಹೆಸರು ಬಳಸಿದ್ದಾಳಾ ತಿಳಿಯುತ್ತಿಲ್ಲ. ಆದರೆ ಯಾರು ಏನೇ ಸರ್ಕಸ್ ಮಾಡಿದ್ರು ನನ್ ಇಮೇಜ್ಗೆ ಧಕ್ಕೆ ಬರಲ್ಲ. ದೇವ್ರೂ ಅವ್ರಿಗೆ ಒಳ್ಳೆ ಬುದ್ದಿಕೊಡ್ಲಿ ಎಂದಿದ್ದಾಳೆ.

No Comments to “ಶೆರ್ಲಿನ್ಳ ದದ್ರ್ಫಏನೂಂತಾ ?”

add a comment.

Leave a Reply

You must be logged in to post a comment.