ಸ್ನೇಹ ಗೀತೆಯಲ್ಲಿ ನ್ಯಾನೋ ಪುರಾಣ

ಇದು ನ್ಯಾನೋ ಕಾರುಗಳ ಯುಗ, ನ್ಯಾನೋ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಎರಡನ್ನು ಬಳಸಿಕೊಂಡು ಚಿತ್ರ ಮೊದಲು ಹೊರಟವರು ನಿರ್ಮಾಪಕ ಆರ್.ಆರ್. ಬಾಬು. ಸ್ನೇಹಗೀತೆ ಶೀರ್ಷಿಕೆಯ ಚಿತ್ರದಲ್ಲಿ ಆಕ್ಷನ್, ರೋಮಾನ್್ಸ ಎಲ್ಲವೂ ಇರುತ್ತದಂತೆ. ಆರ್.ಆರ್. ಬಾಬು ಈಗಾಗಲೇ ಎರಡು ತೆಲುಗು ಚಿತ್ರಗಳನ್ನು ನಿರ್ದೇಶಿಸಿದವರು ಮತ್ತು ಪ್ರತಿಷ್ಟಿತ ನಂದಿ ಪ್ರಶಸ್ತಿ ಪುರಸ್ಕೃತರು ಕನ್ನಡದಲ್ಲಿ ಸ್ನೇಹಗೀತೆ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಚಿತ್ರದ ಕಥೆ ಏನಪ್ಪಾ ಅಂದ್ರೆ.ಸ್ನೇಹ ಮತ್ತು ಗೀತೆಬೆಂಗಳೂರಿನ ಕಾಲೇಜಿನಲ್ಲಿ ಪತ್ರಿಕೋದ್ಯಮ ಓದುವ ಪ್ರಥಮ ವರ್ಷದ ವಿದ್ಯಾರ್ಥಿಗಳು. ಈ ಪೈಕಿ ಸ್ನೇಹ ತನ್ನ ಸಹಪಾಠಿಗಳೊಂದಿಗೆ ನ್ಯಾನೋ ತಂತ್ರಜ್ಞಾನದ ಅಭಿವೃದ್ಧಿ ಯನ್ನು ಬಳಸಿಕೊಂಡು ಕಾನೂನಿನ ಕಣ್ಣಿಗೆ ಮಣ್ಣೆರಚುವವರ ವಿರುದ್ಧ ಹೋರಾಡುತ್ತಾರೆ ಎಂಬುದು ಕಥೆಯ ಮುಖ್ಯಸಾರಾಂಶ. ಅಷ್ಟೇ ಅಲ್ಲ ರಾಜ್ಯದ ಗೃಹಮಂತ್ರಿಯ ಪುತ್ರ ಎಸಗುವ ಅಪರಾಧಗಳಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಒಟ್ಟಿನಲ್ಲಿ ಇದು ಹೀರೋಯಿನ್ ಓರಿಯಂಟೆಡ್ ಸಿನಿಮಾ.ತ ೆ ಲ ು ಗ ು ಚಿತ್ರರಂಗದ ಜನಪ್ರಿಯ ಕಥೆಗಾರ ದಿವಾಕರ ಬಾಬು ಪುತ್ರ ಶ್ರೀ ಚೈತನ್ಯ ಮೊದಲಬಾರಿಗೆ ಈ ಚಿತ್ರದ ಮೂಲಕ ತೆರೆಗೆ ಪರಿಚಯವಾಗುತ್ತಿ ದ್ದಾರೆ. ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ನಿರ್ದೇಶಕ ಚೈತನ್ಯ ಸಹ ಘಿಫಸ್ನೇಹಗೀತೆಫ ಯಲ್ಲಿ ಅಭಿನಯಿ ಸುತ್ತಿದ್ದಾರೆ. ಚಿತ್ರದ ಘಿಫಸ್ನೇಹಫ ಪಾತ್ರದಲ್ಲಿ ನಿಶಾಶೆಟ್ಟಿ ಅಭಿನಯಿಸುವರು. ಉಳಿದ ತಾರಾಗಣದಲ್ಲಿ ಲಕ್ಷ್ಮಿಶರ್ಮ,ಸುಧೀರ, ಕಾರ್ತಿಕ್ ತಿವಾರಿ, ಅಗರ್ ವಾಲ್, ಗಿರೀಶ್ ರೈ, ರಮೇಶ್ ಭಟ್, ಪದ್ಮಾವಾಸಂತಿ, ಬ್ಯಾಂಕ್ ಜನಾರ್ಧನ್, ರಾಮರೆಡ್ಡಿ, ತೆಲಂಗಾಣ ಶಕುಂತಲ, ಸುಮನ್, ಮಂದಿಪ್ರೈ ಉಮೇಶ್ ಗಿರಿಜಾಲೋಕೇಶ್, ಡಿಂಗ್ರಿನಾಗರಾಜ್ ಇದ್ದಾರೆ.

No Comments to “ಸ್ನೇಹ ಗೀತೆಯಲ್ಲಿ ನ್ಯಾನೋ ಪುರಾಣ”

add a comment.

Leave a Reply

You must be logged in to post a comment.