ಹೊಸ ಅವಕಾಶಗಳ ಸಂತಸದಲ್ಲಿ ಸಂಜನ

ನಾನು ತಮಾಷೆಗೆಂದು ಅಭಿನಯಿಸಲು ಬಂದವಳು. ಆದರೆ ಈಗ ಎಲ್ಲವೂ ಅರ್ಥ ಆಗುತ್ತಿದೆ. ನಟನೆಯನ್ನು ಸೀರಿಯಸ್ ಆಗಿ ಪರಿಗಣಿಸಿದ್ದೀನಿ, ಇಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಸ್ಪರ್ಧೆಯಿದೆ, ಹೊಸತನವಿದೆ ಇದನ್ನೆಲ್ಲ ಎದುರಿಸಿ ಉಳಿಯೋದು ಸುಲಭಸಾಧ್ಯ ಏನಲ್ಲ ಎಂಬುದು ತಿಳಿದೆಫಫಂಜನ, ಗಂಡ ಹೆಂಡತಿ ಚಿತ್ರದ ಮೂಲಕಸ ಕನ್ನಡ ಚಿತ್ರ ರಸಿಕರಿಗೆ ಪರಿಚಯವಾದ ಅಭಿನೇತ್ರಿ. ತನ್ನ ೧೬-೧೭ ನೇ ವಯಸ್ಸಿಗೆ ಬಿಂದಾಸ್ ಬೆಡಗಿಯಾಗಿ, ಸೆಕ್ಸಿಯಾಗಿ ನಟಿಸುವ ಮೂಲಕ ಹದಿಹರೆಯದ ಪಡ್ಡೆಗಳಿಗೆ ಹುಚ್ಚು-ಕಿಚ್ಚು ಎರಡನ್ನು ಹತ್ತಿಸಿದವಳು ಸಂಜನ. ನಿರ್ದೇಶಕ ರವಿಶ್ರೀವತ್ಸ, ಹಾಲಿವುಡ್ನಲ್ಲಿ ಮಲ್ಲಿಕಾಶೆರಾವತ್ ನಾಯಕಿಯಾಗಿ ನಟಿಸಿದ್ದ ಮರ್ಡರ್ ಸಿನಿಮಾವನ್ನು ಕನ್ನಡಕ್ಕೆ ರೀಮೇಕ್ ಮಾಡಲು ಹೊರಟಾಗ ಕಣ್ಣಿಗೆ ಬಿದ್ದದ್ದೇ ಈ ಘಿಫಸಂಜನಫ. ನಂತರ ಗಂಡ-ಹೆಂಡತಿ ಚಿತ್ರದ ಚಿತ್ರೀಕರಣ ಹಾಂಕಾಂಗ್ನಲ್ಲಿ ನಡೆದಾಗ ಅಂಜಿಕೆ ಅಳುಕಿಲ್ಲದೆ ಕನಿಷ್ಟ ಉಡುಗೆ ತೊಟ್ಟು ಹಸಿಬಿಸಿ ಭಂಗಿಗಳಲ್ಲಿ ಕಾಣಿಸಿಕೊಂಡ ಸಂಜನ ಕನ್ನಡಿಗರ ಪಾಲಿಗೆ ಹಾಟ್ ಫೇವರಿಟ್ ನಾಯಕಿಯಾದಳು. ಆದರೆ ಅವಕಾಶಗಳೇನು ಹುಡುಕಿಕೊಂಡು ಬರಲಿಲ್ಲ. ತಮಿಳು, ತೆಲುಗು ಚಿತ್ರರಂಗದತ್ತ ಮುಖಮಾಡಿದಾಗ ಸಿಕ್ಕಿದ್ದು ಐಟಂ ಗಲ್ರ್ ಪಾತ್ರ. ಇತ್ತೀಚೆಗೊಮ್ಮೆ ಕನ್ನಡದ ಪತ್ರಕರ್ತರು ಭೇಟಿಯಾದಾಗ ಘಿಫಗಂಡ ಹೆಂಡತಿಫ ಚಿತ್ರದ ಪಾತ್ರ ಬಗ್ಗೆ ಮಾತು ಬಂತು. ಆಗ ಈಕೆ ಹೇಳಿದ್ದೇನು ಗೊತ್ತೆ, ಘಿಫಅಯ್ಯೋ ಆಗ ನನಗೇನು ಗೊತ್ತಾಗ್ತಿರ್ಲಿಲ್ಲಾ ರೀ, ತುಂಬಾ ಚಿಕ್ಕವಳು ನೋಡಿ, ನಿರ್ದೇಶಕರು ಹೇಳಿದಂತೆ ಮಾಡ್ದೆ ಅಷ್ಟೇ. ಇನ್ಮುಂದೆ ಇಂತಹದ್ದೆಲ್ಲ ಇಲ್ಲಪ್ಪ ಫ ಎಂದಳು. ಚಿತ್ರರಂಗದಲ್ಲಿಅವಕಾಶಗಳಿಗಾಗಿ ಅರಸುತ್ತಾ ಆಗೀಗ ಮಾಡೆಲಿಂಗ್ಮತ್ತು ಜಾಹೀರಾತುಗಳಲ್ಲಿ ಸಿ. ಜಯಕುಮಾರ್ ಕಾಣಿಸಿಕೊಳ್ಳುತ್ತಿದ್ದ ಸಂಜನಗೆ ನಿಜವಾದ ಬ್ರೇಕ್ ಸಿಕ್ಕಿದ್ದು ತೆಲುಗು ಚಿತ್ರ ಘಿಫಬುಜ್ಜಿಗಾಡುಫವಿನಿಂದ. ಬುಜ್ಜಿಗಾಡು ಚಿತ್ರ ಯಶಸ್ಸು ತಂದುಕೊಟ್ಟಿತಲ್ಲದೆ ಹೊಸ ಅವಕಾಶಗಳ ಬಾಗಿಲನ್ನು ತೆರೆಯಿತು. ತೆಲುಗಿನ ಹೆಸರಾಂತ ನಿರ್ದೇಶಕ ಪೂರಿ ಜಗನ್ನಾಥ್ ಆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯ ಒಂದು ಕನ್ನಡ ಹಾಗೂ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿರುವ ಸಂಜನ ತಮಿಳು ಚಿತ್ರಗಳಿಂದಲೂ ಆಫರ್ ಪಡೆದಿದ್ದಾಳೆ. ಇದೀಗ ಕನ್ನಡದಲ್ಲಿ ಸುದೀಪ್ನ ಸಂಬಂಧಿಆರ್ಯ ನಟಿಸುತ್ತಿರುವ ಘಿಫಈ ಸಂಜೆಫ ಹಾಗೂ ದರ್ಶನ್ ನಾಯಕರಾಗಿರುವ ಘಿಫಬಾಸ್ಫ ಚಿತ್ರದಲ್ಲಿ ಸಂಜನ ನಾಯಕಿಯಾಗಿದ್ದಾಳೆ. ಈ ಸಂದರ್ಭ ಮಾತಿಗೆ ಸಿಕ್ಕಳು ಸಂಜನ. ಘಿಫಈ ಸಂಜೆಫ ಚಿತ್ರದ ಕಥೆ ಟಿಪಿಕಲ್ ಶೈಲಿಯಲ್ಲಿದೆ, ಇದೊಂದು ಸವಾಲಿನ ಪಾತ್ರ ಚಿತ್ರದ ಸಂಗೀತ ಸಂಯೋಜನೆ ಚೆನ್ನಾಗಿದೆ, ಸಂಗೀತ ನಿರ್ದೇಶಕ ಶಂಕರ್ ಸಂಯೋಜಿಸಿರುವ ಘಿಫಯಾಕೋ . . . . ಫ ಎಂಬ ಗೀತೆ ಹೆಚ್ಚು ಜನಪ್ರಿಯವಾಗುತ್ತಿದೆ. ಚಿತ್ರದ ಯುವ ನಿರ್ದೇಶಕ ಶ್ರೀಯವರೇ ಚಿತ್ರಕಥೆ ಬರೆದಿದ್ದಾರೆ. ಘಿಫಗಂಡ ಹೆಂಡತಿಫ ಚಿತ್ರದ ಮೂಲಕ ನನಗೆ ಸಿಕ್ಕಿದ್ದೆ ಸೆಕ್ಸಿ ಇಮೇಜನ್ನು ಮರೆಸುವಂತಹ ಪಾತ್ರವಿದೆ. ನನಗೆಅಭಿನಯ ಬದುಕಿಗೆ ಇದು ಮುನ್ನುಡಿಯಾಗಲಿದೆಎಂದು ತುಂಟನಗೆ ನಕ್ಕಳು ಸಂಜನ. ನಾನು ಅಭಿನಯಿಸುತ್ತಿರುವ ಮತ್ತೊಂದು ಕನ್ನಡ ಚಿತ್ರ ಘಿಫಬಾಸ್ಫ ಇದರಲ್ಲಿ ದರ್ಶನ್ರ ಎದುರು ನಾಯಕಿಯಾಗಿದ್ದೇನೆ. ನಗರ ಪರಿಸರದ ಹುಡುಗಿಯಾಗಿ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ಬಹುತೇಕ ಘಿಫರೇಸ್ಫ ಚಿತ್ರದಲ್ಲಿ ಕತ್ರಿನಾಕೈಫ್ ನಿರ್ವಹಿಸಿದ ಪಾತ್ರವನ್ನು ಹೋಲುವಂತ ಹುದ್ದೆ ಪಾತ್ರವಿದೆ. ರಮೇಶ್ಯಾದವ್ ಈ ಚಿತ್ರದ ನಿರ್ಮಾಪಕರು, ರಘುರಾಜ್ ನಿರ್ದೇಶಕರು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಧ್ಯದಲ್ಲೇ ಜರ್ಮನಿ ಹಾಗೂ ಫುಕೆಟ್ಗೆ ಹಾರಲಿದ್ದೇವೆ. ಮೊದಲ ಬಾರಿಗೆ ಇಂತಹ ಅವಕಾಶ ಸಿಕ್ಕಿದೆ. ಇದು ನನಗೆ ಖುಷಿಉಂಟುಮಾಡಿದೆ ಎಂದರು. ಇನ್ನು ತೆಲುಗಿನಲ್ಲಿ ಡಾ।। ರಾಜಶೇಖರ್ ಜೊತೆ ನಟಿಸಲು ಸಹಿ ಹಾಕಿದ್ದೇನೆ, ಬಾಲಿವುಡ್ನ ಘಿಫಖಾಕಿಫ ಚಿತ್ರ. ತೆಲುಗಿನಲ್ಲಿ ಸತ್ಯಮೇವ ಜಯತೇ ಹೆಸರಿನಲ್ಲಿ ರೀಮೇಕ್ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಸೌಂದರ್ಯ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ನಾನು ಮಾಡುತ್ತೇನೆ ಜೀವಿತಾ ರಾಜಶೇಖರ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಹೋಮ್ಲಿ ಫೀಲಿಂಗ್ ಇದೆ. ಆ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು ಸಂಜನ. ಪ್ರಶಸ್ತಿ, ಪುರಸ್ಕಾರ ನಿರೀಕ್ಷಿಸುತ್ತಿರಾ ? ಎಂಬ ಪ್ರಶ್ನೆಗೆ ಉತ್ತರಿಸಿ ಎಲ್ಲ ಕಲಾವಿದರಿಗೆ ಇರುವಂತೆ ನನಗೂ ಅಂತಹ ಹಂಬಲಇದೆ. ಅದಕ್ಕೆ ಸಾಧನೆ ಬೇಕಲ್ವಾ ? ನಂಗೀಗ ಇನ್ನೂ ೧೯ ವರ್ಷ, ಮುಂದಿನ ದಿನಗಳಲ್ಲಿ ಸಾಧನೆ ಮಾಡ್ತಿನಿ ಆಗ ಪ್ರಶಸ್ತಿ ಸಿಗಬಹುದೇನೋ … ಜೀವಿತಾ ಮೇಡಂರಂತಹವರ ನಿರ್ದೇಶನ ದಲ್ಲಿ ನಟನೆಗೆ ಪುರಸ್ಕಾರ ಪಡೆಯಬಹುದು. ಅದೊಂದು ಕನಸು ನನಗಿದೆ ಎಂದು ನುಡಿದ ಸಂಜನಾ, ಪ್ರಶಸ್ತಿ, ಪುರಸ್ಕಾರ ಅಂದ್ರೇನು ಅನ್ನೋದು ನನಗೊತ್ತು. ಪುರಸ್ಕಾರಕ್ಕಾಗಿ ನಟನೆ ಅಲ್ಲ, ನಟನೆಗೆ ಪುರಸ್ಕಾರ ಮೀರಿದ ಸಾಮರ್ಥ್ಯವಿರುತ್ತೆ ಗೌರವಿರುತ್ತೆ ಎಂದರು. ನಿಮಗೆ ಗೊತ್ತ, ನಾನು ತಮಾಷೆಗೆಂದು ಅಭಿನಯಿಸಲು ಬಂದವಳು. ಆದರೆ ಈಗ ಎಲ್ಲವೂ ಅರ್ಥ ಆಗುತ್ತಿದೆ. ನಟನೆಯನ್ನು ಸೀರಿಯಸ್ ಆಗಿ ಪರಿಗಣಿಸಿದ್ದೀನಿ, ಇಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಸ್ಪರ್ಧೆಯಿದೆ, ಹೊಸತನವಿದೆ ಇದನ್ನೆಲ್ಲ ಎದುರಿಸಿ ಉಳಿಯೋದು ಸುಲಭಸಾಧ್ಯ ಏನಲ್ಲ ಎಂಬ ಪ್ರಬುದ್ಧ ನಿಲುವನ್ನು ಹೊರಹಾಕುತ್ತಾರೆ. ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಆಕೆ ಖ್ಯಾತ ನಿರ್ದೇಶಕರು ಮತ್ತು ನಟರ ಜೊತೆ ನಟಿಸುವ ಇರಾದೆ ಇದೆ. ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡ್ತಿದೀನಿ ಇನ್ನು ಏನೇನಾಗುತ್ತೋ ಕಾಲಾನೆ ಹೇಳುತ್ತೆ, ಯಾಕೆಂದ್ರೇ ನಾವೇನು ಅಂದ್ಕೋಡಿರ್ತೀರೋ ಅದಕ್ಕೆಲ್ಲ ಕಾಲ ಕೂಡಿಬರಬೇಕಲ್ವಾ ಎಂದು ಮುಗುಳ್ನಿಕ್ಕಿ ಬೀಳ್ಕೊಟ್ಟರು.

No Comments to “ಹೊಸ ಅವಕಾಶಗಳ ಸಂತಸದಲ್ಲಿ ಸಂಜನ”

add a comment.

Leave a Reply

You must be logged in to post a comment.