ಬೆಳೆ ನಷ್ಟ : ವಿಮಾ ಕಂಪನಿ ಗಮನಕ್ಕೆ ತರಲು ಸೂಚನೆ

ಹಾಸನ : ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ೨೦೦೮ರ ಮುಂಗಾರು ಹಂಗಾಮಿನಲ್ಲಿ ೧೬ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸ ಲಾಗಿದೆ. ಈ ಬೆಳೆಗಳು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಪ್ರವಾಹ, ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಚಂಡಮಾರುತ ಇವುಗಳಿಂದ ನಾಶವಾದಲ್ಲಿ ವೈಯಕ್ತಿಕ ನಷ್ಟ ನಿರ್ಧರಣೆ ಗಾಗಿ ಒಳಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರಲ್ ಇನ್ಸ್ಯೂರೆನ್್ಸ ಕಂಪೆನಿ ಆಫ್ ಇಂಡಿಯಾ, ಬೆಂಗಳೂರು ಈ ಕಛೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು ೪೮ ಗಂಟೆಗಳೊಳಗಾಗಿ ತಿಳಿಸಬೇಕು. ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಅಗ್ರಿಕಲ್ಚರಲ್ ಇನ್ಸ್ಯೂರೆನ್್ಸ ಕಂಪೆನಿ ಆಫ್ ಇಂಡಿಯಾ, ಬೆಂಗಳೂರು ಇವರು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟ ನಿರ್ಧಾರಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ ನಿಯೋಜಿಸು ತ್ತದೆ. ಜಿಲ್ಲಾ ಕಂದಾಯ ಆಡಳಿತವು ಬೆಳೆ ನಷ್ಟದ ಪ್ರಮಾಣವನ್ನು ನಿರ್ಧರಿಸುವಲ್ಲಿ ಅಗ್ರಿಕಲ್ಚರಲ್ ಇನ್ಸ್ಯೂರೆನ್್ಸ ಕಂಪೆನಿ ಆಫ್ ಇಂಡಿಯಾ, ಬೆಂಗಳೂರು ಇವರಿಗೆ ನೆರವು ನೀಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. ೨೦೦೮ರ ಮುಂಗಾರು ಹಂಗಾಮಿ ನಲ್ಲಿ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಿಂದ ನದಿಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿ ನಷ್ಟವಾಗಿರುವುದು ತಿಳಿದುಬಂದಿರು ತ್ತದೆ. ಅಧಿಸೂಚಿತ ಬೆಳೆಗಳು ನಷ್ಟವಾಗಿದ್ದಲ್ಲಿ ಆ ಬೆಳೆಗಳಿಗೆ ವಿಮೆ ಮಾಡಿಸಿದ ರೈತರು ಸಂಬಂಧಪಟ್ಟ ಬ್ಯಾಂಕುಗಳಿಗೆ ಅರ್ಜಿಯನ್ನು ಬೆಳೆ ನಷ್ಟ ಸಂಭವಿಸಿದ ೪೮ ಗಂಟೆಗಳೊಳಗೆ ನೀಡಿದರೆ ವಿಮಾ ಸಂಸ್ಥೆಯು ಇವರಿಗೆ ವೈಯಕ್ತಿಕವಾಗಿ ನಷ್ಟ ನಿರ್ಧರಿಸಿ ತ್ವರಿತವಾಗಿ ಬೆಳೆ ವಿಮಾ ನಷ್ಟ ಪರಿಹಾರ ವನ್ನು ಇತ್ಯರ್ಥಪಡಿಸುತ್ತದೆ. ಅರ್ಜಿಯಲ್ಲಿ ವಿಮೆ ಮಾಡಿಸಿದ ಬೆಳೆ, ಬ್ಯಾಂಕು, ಗ್ರಾಮ, ಹೋಬಳಿ, ತಾಲ್ಲೂಕು, ಸರ್ವೆ ನಂಬರ್, ವಿಸ್ತೀರ್ಣ, ಕಟ್ಟಿದ ವಿಮಾ ಕಂತು, ವಿಮಾ ಮೊತ್ತ ಇತರೆ ವಿವರಗಳೊಂದಿಗೆ ಹಾನಿಯ ಕಾರಣ ಹಾಗೂ ಅಂದಾಜು ನಷ್ಟವನ್ನು ನಮೂದಿಸಬೇಕಾಗುತ್ತದೆ ಎಂದಿದ್ದಾರೆ.

No Comments to “ಬೆಳೆ ನಷ್ಟ : ವಿಮಾ ಕಂಪನಿ ಗಮನಕ್ಕೆ ತರಲು ಸೂಚನೆ”

add a comment.

Leave a Reply

You must be logged in to post a comment.