ಕೃಷಿ ಪ್ರಶಸ್ತಿಗೆ ಆಹ್ವಾನ

ಹಾಸನ : ಅಧಿಕ ಇಳುವರಿಗೆ ನೀಡ ಲಾಗುವ ಕೃಷಿ ಪ್ರಶಸ್ತಿಗೆ ರೈತರಿಂದ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆ-೩೧ ಕೊನೆ ದಿನ. ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಸಲಿದ್ದು, ಬೆಳೆ ಯೊಂದರಲ್ಲಿ ಹೆಚ್ಚು ಇಳುವರಿ ಪಡೆದ ವರಿಗೆ ಬಹುಮಾನ ನೀಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ ೩೦೦ ರೂ, ಪರಿಶಿಷ್ಟ ರೈತರಿಗೆ ೭೫ ರೂ,ಜಿಲ್ಲಾ ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ ೧೫೦ ರೂ, ಪರಿಶಿಷ್ಟ ರೈತರಿಗೆ ೪೦ ರೂ, ತಾಲ್ಲೂಕು ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ ೧೦೦ ರೂ, ಪರಿಶಿಷ್ಟ ರೈತರಿಗೆ ೨೫ ರೂ. ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ೩೦೦೦೦ರೂ. ಪ್ರಥಮ, ೧೫೦೦೦ ರೂ. ದ್ವಿತೀಯ, ೧೦೦೦೦ ರೂ. ತೃತೀಯ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ೧೫೦೦೦ರೂ ಪ್ರಥಮ, ೧೦೦೦೦ ರೂ. ದ್ವಿತೀಯ, ೫೦೦೦ರೂ. ತೃತೀಯ. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ೧೦೦೦೦ರೂ. ಪ್ರಥಮ, ೫೦೦೦ ರೂ. ದ್ವಿತೀಯ, ೩೦೦೦ರೂ. ತೃತೀಯ ಬಹುಮಾನ ನೀಡಲಾಗುವುದು.

No Comments to “ಕೃಷಿ ಪ್ರಶಸ್ತಿಗೆ ಆಹ್ವಾನ”

add a comment.

Leave a Reply

You must be logged in to post a comment.