ಪ್ರತಿಭಾ ಕಾರಂಜಿ: ಮಾನಸಿಕ ಬೆಳವಣಿಗೆ ವೃದ್ಧಿ

ಬೇಲೂರು: ಮಕ್ಕಳಲ್ಲಿ ಅಡಗಿರುವ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಹೊರಹೊಮ್ಮಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉತ್ತಮ ವೇದಿಕೆ ಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಅಣ್ಣಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲ್ಲೂಕು ಕಡೇಗರ್ಜೆ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಬಿಕ್ಕೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಮಟ್ಟದಲ್ಲಿ ಪ್ರತಿಭಾ ವಂತ ಮಕ್ಕಳಿದ್ದು, ಅವರಲ್ಲಿ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸದತ್ತ ಪೋಷಕರು, ಶಿಕ್ಷಕರು ಹೆಚ್ಚು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಿಕ್ಕೋಡು ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಈ ಪುಟ್ಟ ಗ್ರಾಮದಲ್ಲಿ ಎಸ್.ಡಿ.ಎಂ.ಸಿ. ಶಾಲಾ ಶಿಕ್ಷಕರ ಪ್ರಯತ್ನ ಮೆಚ್ಚು ವಂತಹದ್ದು ಎಂದು ಪ್ರಶಂಸಿಸಿದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಚನ್ನಪ್ಪ, ಪ್ರತಿಭಾ ಕಾರಂಜಿಯಂತಹ ಕಾರ್ಯ ಕ್ರಮಗಳು ಹಳ್ಳಿ-ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಯುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರಲ್ಲದೆ, ಇಂತಹ ಕಾರ್ಯಕ್ರಮಗಳು ಪೋಷಕರಿಗೂ ಹೆಚ್ಚಿನ ಸಂತಸ ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ. ಎಂ.ಸಿ. ಅಧ್ಯಕ್ಷ ಪಾಪಣ್ಣ, ಲಕ್ಕುಂದಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ, ಸಾವಿತ್ರಿ ಪುಟ್ಟರಾಜ್, ಪೂಜ, ರತ್ನಮ್ಮ, ಕೇಶವೇಗೌಡ, ಮಾಜಿ ಅಧ್ಯಕ್ಷ ಬಿ.ಎಂ. ಶೇಖಬ್ಬ, ಎಸ್.ಡಿ.ಎಂ.ಸಿ. ಸದಸ್ಯರಾದ ಚಾಮರಾಜ್, ಚಿಕ್ಕಯ್ಯ, ಕುಮಾರ್, ಲತಾ, ಲೋಕೇಶ್, ರುದ್ರಪ್ಪ, ಈರಯ್ಯ ಹಾಗೂ ಕಾಫಿಬೆಳೆಗಾರರಾದ ಸಾಲ್ಡಾನ, ವೈ.ಡಿ. ಮಲ್ಲೇಶ್ಗೌಡ, ಸಿರಾಜ್, ಪೃಥ್ವಿ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಯಲ್ಲಯ್ಯ ಕೆ.ಎಂ. ಷಡಾಕ್ಷರಿ ಹಾಜರಿ ದ್ದರು.ಮುಖ್ಯ ಶಿಕ್ಷಕಿ ವೇದಾ ಸ್ವಾಗತಿಸಿ ದರು. ಶಿಕ್ಷಕಿ ಕನ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ರಕ್ಷಾ ವಂದಿಸಿದರು.

No Comments to “ಪ್ರತಿಭಾ ಕಾರಂಜಿ: ಮಾನಸಿಕ ಬೆಳವಣಿಗೆ ವೃದ್ಧಿ”

add a comment.

Leave a Reply

You must be logged in to post a comment.