ಹೈನುಗಾರಿಕೆಯಿಂದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಿ

ಉಚ್ಚಂಗಿ: ಕಾವೇರಿ ಗ್ರಾಮೀಣ ಬ್ಯಾಂಕ್ನಿಂದ ಮಲೆನಾಡಿನಲ್ಲಿ ಹೈನುಗಾರಿಕೆಗೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದು, ಇದರ ಉಪಯೋಗ ವನ್ನು ಪಡೆದುಕೊಂಡು ನಿರಂತರ ಆದಾಯದ ಜೊತೆಗೆ ತಮ್ಮ ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳ ಬೇಕು ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ನ ವಲಯ ವ್ಯವಸ್ಥಾಪಕ ಉದಯ ಕುಮಾರ್ ಸಲಹೆ ನೀಡಿ ದರು. ಅವರು ಇತ್ತೀಚೆಗೆ ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ನಾಗ ದೇವತಾ ರೈತಕೂಟ ಇವರ ಸಂಯುಕ್ತಾ ಶ್ರಯದಲ್ಲಿ ಹೈನುಗಾರಿಕೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತ ನಾಡಿದರು. ಶಿಬಿರದಲ್ಲಿ ಭಾಗವಹಿಸಿದ್ದ ತಜ್ಞ ರಾದ ಹಾಸನ ಪಶು ಪಾಲನಾ ಇಲಾಖೆ ಸಹನಿರ್ದೇಶಕಿ ಡಾ।। ಜಾನಕಿ ಸುಂದರೇಶ್, ಪಶು ವೈದ್ಯಾಧಿಕಾರಿ ಡಾ।। ಅಂಬುಜಾಕ್ಷಿ, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ।। ಕೆ.ಹೆಚ್. ನಾಗ ರಾಜ್ ಅವರುಗಳು ಕೊಟ್ಟಿಗೆ ನಿರ್ಮಾಣ ಮತ್ತು ನೈರ್ಮಲ್ಯತೆ, ಆರೋಗ್ಯವಂತ ರಾಸುಗಳನ್ನು ಕೊಳ್ಳಲು ಆಯ್ಕೆ ವಿಧಾನ, ಕಾಲು ಬಾಯಿಜ್ವರ, ಕೆಚ್ಚಲು ಬಾಹು, ಗಂಟಲು ಬೇನೆ, ಚಪ್ಪೆರೋಗ ಗಳ ಬಗ್ಗೆ ಮುಂಜಾಗ್ರತೆ ಯಾಗಿ ಲಸಿಕೆ ಹಾಕಿಸುವ ಬಗ್ಗೆ ಮತ್ತು ಜಾನುವಾರು ಗಳ ಆಹಾರ, ಹಸಿ, ಒಣ ಮೇವುಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಉಚ್ಚಂಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುತ್ತೇ ಗೌಡ, ಪಶು ಆರೋಗ್ಯ ಕೇಂದ್ರದ ರವಿ ಉಪಸ್ಥಿತರಿದ್ದರು. ಜಿಲ್ಲಾ ಪರಿಷತ್ ಸದಸ್ಯೆ ಸಾಧನ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಅಮೃತ ಪ್ರಾರ್ಥನೆ ಮಾಡಿ ದರು. ಕಾವೇರಿ ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ಸುರೇಂದ್ರ ಸ್ವಾಗತಿಸಿದರು. ರೈತ ಕೂಟದ ಮುಖ್ಯ ಸಂಯೋಜಕ ಆರ್.ಚನ್ನಕೇಶವ ವಂದಿಸಿದರು.

No Comments to “ಹೈನುಗಾರಿಕೆಯಿಂದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಿ”

add a comment.

Leave a Reply

You must be logged in to post a comment.