ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

ಹಾಸನ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಸಿ.ಎಸ್.ಐ. ಮಿಷನ್ ಆಸ್ಪತ್ರೆ, ದಿ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇವರ ಸಂಯುಕ್ತಾಶ್ರಯ ದಲ್ಲಿ ಆ-೩೧ ರಂದು ಬೆಳಿಗ್ಗೆ ೯ ಗಂಟೆಗೆ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಸಿ.ಎಸ್.ಐ. ಮಿಷನ್ ಆಸ್ಪತ್ರೆಯ ನುರಿತ ನೇತ್ರ ತಜ್ಞರು ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆಗೆ ಅರ್ಹರಾದವರನ್ನು ಅದೇ ದಿನ ಸಿ.ಎಸ್.ಐ. ಮಿಷನ್ ಆಸ್ಪತ್ರೆಗೆ ಕರೆತಂದು ಕಣ್ಣಿನ ಪೊರೆ ತೆಗೆದು ಐ.ಒ.ಎಲ್. ಅಳವಡಿಸುವರು. ನಂತರ ಅವರನ್ನು ಹಿರೀಸಾವೆಗೆ ವಾಪಸ್ಸು ಕರೆತರಲಾಗುವುದು.ಹೆಚ್ಚಿನ ವಿವರಗಳಿಗೆ ಮೊ: ೯೪೪೮೯೯೬೫೦೫ ಸಂಪರ್ಕಿಸಲು ಕೋರ ಲಾಗಿದೆ.

No Comments to “ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ”

add a comment.

Leave a Reply

You must be logged in to post a comment.