ಅರಕಲಗೂಡು : ಅಪರಿಚಿತ ವ್ಯಕ್ತಿ ಶವ ಪತ್ತೆ

ಅರಕಲಗೂಡು : ಇಲ್ಲಿನ ಕಣಿವೆ ಬಸಪ್ಪ ಅರಣ್ಯದ ಬಳಿ ಇರುವ ಬಾವಿಯೊಂದರಲ್ಲಿ ಅಪರಿಚಿತ ಗಂಡಸಿಯ ಶವ ಪತ್ತೆಯಾಗಿದ್ದು , ಕೊಲೆ ಶಂಕೆ ವ್ಯಕ್ತವಾಗಿದೆ. ಸುಮಾರು ೪೦ ವರ್ಷ ವಯಸ್ಸಿನ ಮೃತ ವ್ಯಕ್ತಿ, ಖಾಕಿ ಫ್ಯಾಂಟ್ ಧರಿಸಿದ್ದು, ಬಿಳಿ-ನೀಲಿಗೆರ ಶರ್ಟು ತೊಟ್ಟಿದ್ದಾರೆ. ಶವದ ಸೊಂಟದಲ್ಲಿ ಸುತ್ತಲಿ ದಾರದಿಂದ ಬಿಗಿಯಲ್ಪಟ್ಟಿರುವುದು ಕಂಡು ಬಂದಿದೆ. ೩ ತಿಂಗಳ ಹಿಂದೆ ಶವವಾಗಿರುವ ಲಕ್ಷಣ ಇದ್ದು, ವಿರೂಪಗೊಂಡಿದೆ. ಅರಕಲಗೂಡು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

No Comments to “ಅರಕಲಗೂಡು : ಅಪರಿಚಿತ ವ್ಯಕ್ತಿ ಶವ ಪತ್ತೆ”

add a comment.

Leave a Reply

You must be logged in to post a comment.