ಶಿಕ್ಷಕನ ವಿರುದ್ಧ ಅತ್ಯಾಚಾರ ಆರೋಪ

ಹೊಳೆನರಸೀಪುರ : ೬ನೇ ತರಗತಿ ವಿದ್ಯಾರ್ಥಿ ಮೇಲೆ ಆಕೆ ಶಿಕ್ಷಕರೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ವಿವರಣೆ ನೀಡುವಂತೆ ತಾಲ್ಲೂಕು ಶಿಕ್ಷಣಾಧಿಕಾರಿಗಳು ಆರೋಪಿ ಶಿಕ್ಷಕ ನಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಇದು ಹುಸಿ ಆರೋಪ ವಾಗಿದ್ದು, ಶಾಲಾ ಶಿಕ್ಷಕರ ನಡುವಿನ ಹಗೆತನ ಈ ಪ್ರಕರಣ ಸೃಷ್ಟಿಗೆ ಕಾರಣ ಎನ್ನಲಾಗಿದೆ. ಚಿಕ್ಕಬ್ಯಾಗತವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಕೆ.ಪಿ.ಕುಮಾರ್ ವಿರುದ್ಧ ಅತ್ಯಾಚಾರ ಆರೋಪ ಮಾಡಲಾಗಿದ್ದು, ಬಾಲಕಿಯ ಪೋಷಕರು ಗ್ರಾಮಾಂತರ ಪೊಲೀಸ ರಿಗೆ ದೂರು ನೀಡಿದ್ದಾರೆ. ಆದರೆ ದೂರು ದಾಖಲಾಗಿಲ್ಲ. ಅತ್ಯಾಚಾರ ಪ್ರಕರಣ ಆ.೨೨ ರಂದು ನಡೆದಿದೆ ಎನ್ನಲಾಗಿದ್ದು, ಶಾಲೆಯ ಶಿಕ್ಷಕರಾದ ರವಿಕುಮಾರ್ ಹಾಗೂ ವೆಂಕಟಮ್ಮ ಮಂಗಳವಾರ ಈ ವಿಷಯವನ್ನು ಬಹಿರಂಗಪಡಿಸಿ ಬಾಲಕಿಯ ಪೋಷಕರಿಗೆ ತಿಳಿಸಿದರು ಎಂದು ವರದಿಯಾಗಿದೆ. ಶಿಕ್ಷಕ ಕುಮಾರ್ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಬಾಲಕಿಯು ಪ್ರಕರಣ ನಡೆದ ದಿನವೇ ತಮಗೆ ತಿಳಿಸಿದಳೆಂದು ಶಿಕ್ಷಕಿ ವೆಂಕಟಮ್ಮ ಹೇಳಿದ್ದು, ಶನಿವಾರ ಶಾಲೆಯ ತನಿಖೆಗೆ ಬಂದಿದ್ದ ಬಿ.ಇ.ಓ. ಹಾಗೂ ಶಿಕ್ಷಣ ಸಂಯೋಜಕರಿಗೂ ಈ ವಿಷಯ ತಿಳಿಸದ ವೆಂಕಟಮ್ಮ, ಮಂಗಳವಾರ ಬಹಿರಂಗಪಡಿಸಿದ್ದು, ಅನುಮಾನಕ್ಕೆ ಎಡೆ ಮಾಡಿದೆ. ಆರೋಪಿ ಶಿಕ್ಷಕ ಕೆ.ಪಿ.ಕುಮಾರ್ ಬಗ್ಗೆ ಶಾಲೆ ಮತ್ತು ಗ್ರಾಮದಲ್ಲಿ ಸದಭಿಪ್ರಾಯವಿದ್ದು, ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಪತ್ರ ಕರ್ತರು ಸದರಿ ಬಾಲಕಿಯನ್ನು ಪ್ರಶ್ನಿಸಿ ದಾಗ, ಮೇಸ್ಟ್ರು ತನ್ನನ್ನು ಅಡುಗೆ ಮನೆಗೆ ಕರೆದೊಯ್ದು ಮುದ್ದಿಸಿದ ರೆಂದು ಮಾತ್ರ ಹೇಳುತ್ತಾಳೆ. ಆದರೆ ಆಕೆಯ ಪೋಷಕರು ಅತ್ಯಾಚಾರವನ್ನು ಖಚಿತಪಡಿಸುತ್ತಾರೆ. ಈ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸುವ ಪ್ರಯತ್ನಗಳು ನಡೆಯುತ್ತಿವೆ.

No Comments to “ಶಿಕ್ಷಕನ ವಿರುದ್ಧ ಅತ್ಯಾಚಾರ ಆರೋಪ”

add a comment.

Leave a Reply

You must be logged in to post a comment.