ನಾಗರಿಕ ಸೇವಾ ಕಾಯ್ದೆಗೆ ತಿದ್ದುಪಡಿ ಲೋಕಾಯುಕ್ತಕ್ಕೆ ಅಮಾನತ್ತು ಅಧಿಕಾರ

ಬೆಂಗಳೂರು : ಕರ್ನಾಟಕ ನಾಗ ರಿಕ ಸೇವಾ ಕಾಯ್ದೆಗೆ ಸರ್ಕಾರ ತಿದ್ದು ಪಡಿ ತಂದಿದ್ದು, ಅಕ್ರಮ ಆಸ್ತಿ ಹೊಂದಿದ ಭ್ರಷ್ಟಾಚಾರ ಅಧಿಕಾರಿ ಗಳನ್ನು ಅಮಾನತ್ತಿನಲ್ಲಿಡುವ ಅಧಿ ಕಾರವನ್ನು ಲೋಕಾಯುಕ್ತಕ್ಕೆ ನೀಡ ಲಾಗಿದೆ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ದಲ್ಲಿ ಹಣ ಸಮೇತ ಸಿಕ್ಕಿ ಬೀಳುವ ಅಧಿ ಕಾರಿಗಳನ್ನು ಅಮಾನತ್ತು ಗೊಳಿಸುವ ಅಧಿಕಾರ ಮಾತ್ರ ಲೋಕಾಯುಕ್ತಕ್ಕೆ ಇತ್ತು. ಆದರೆ ಅಕ್ರಮ ಆಸ್ತಿ ಹೊಂದಿದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಇರಲಿಲ್ಲ. ಅವರ ವಿರುದ್ಧ ಕೇವಲ ಆರೋಪ ಪಟ್ಟಿಯನ್ನು ಮಾತ್ರ ಸಲ್ಲಿಸಬಹುದಾಗಿತ್ತು. ಕರ್ನಾಟಕ ನಾಗರಿಕ ಸೇವಾ ಕಾಯ್ದೆ-೧೯೫೭ರ ೧೦ನೇ ಅಧಿನಿಯಮ ೧೦(೧)ನೇ ನಿಯಮಕ್ಕೆ ಸರ್ಕಾರ ಈಗ ತಿದ್ದುಪಡಿ ತಂದು ವರಮಾನಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಭ್ರಷ್ಟ ಅಧಿ ಕಾರಿಗಳನ್ನು ಅಮಾನತ್ತಿನಲ್ಲಿಡುವ ಅಧಿ ಕಾರವನ್ನು ಲೋಕಾಯುಕ್ತಕ್ಕೆ ಈಗ ನೀಡಿದೆ. ಕಾಯ್ದೆ ತಿದ್ದುಪಡಿಯು ಸದ್ಯದಲ್ಲೇ ರಾಜ್ಯ ಪತ್ರದಲ್ಲಿ ಪ್ರಕಟಗೊಳ್ಳಲಿದ್ದು, ಅಂದಿನಿಂದಲೇ ಜಾರಿಗೆ ಬರಲಿದೆ. ಸರ್ಕಾರದ ಈ ಕ್ರಮವನ್ನು ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಸ್ವಾಗತಿಸಿದ್ದು, ಭ್ರಷ್ಟ ಅಧಿ ಕಾರಿಗಳಿಗೆ ಇದು ಎಚ್ಚರಿಕೆ ಗಂಟೆ ಯಾಗಿದೆ ಎಂದಿದ್ದಾರೆ.

No Comments to “ನಾಗರಿಕ ಸೇವಾ ಕಾಯ್ದೆಗೆ ತಿದ್ದುಪಡಿ ಲೋಕಾಯುಕ್ತಕ್ಕೆ ಅಮಾನತ್ತು ಅಧಿಕಾರ”

add a comment.

Leave a Reply

You must be logged in to post a comment.