ಅಂಗನವಾಡಿ ನೌಕರರ ಸಭೆ

ಹಾಸನ : ಅಂಗನವಾಡಿ ಕೇಂದ್ರ ಗಳ ಖಾಸಗೀಕರಣ ವಿರೋಧಿಸಿ ಖಾಯಮಾತಿ, ಪೆನ್ಷನ್ಗಾಗಿ ಒತ್ತಾ ಯಿಸಿ ಅಂಗನವಾಡಿ ನೌಕರರ ಸಮ್ಮೇ ಳನದ ಬಹಿರಂಗ ಸಭೆಯು ನಗರದ ವಸ್ತು ಪ್ರದರ್ಶನ ಮೈದಾನದ ಹರ್ಕಿಶನ್ ಸುರ್ಜಿತ್ ವೇದಿಕೆಯಲ್ಲಿ ಆ.೨೮ರಂದು ನಡೆಯಲಿದೆ. ಕರ್ನಾಟಕ ರಾಜ್ಯ ಅಂಗನವಾಡಿ ನೌರ್ಕರ ಸಂಘದ ಪ್ರಧಾನ ಕಾರ್ಯ ದರ್ಶಿ ವರಲಕ್ಷ್ಮಿ ಉದ್ಘಾಟನೆ ನೆರ ವೇರಿಸಲಿದ್ದು, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಂಚಾಲಕ ವೈ. ಆರ್.ಮಂಜಮ್ಮ ಅಧ್ಯಕ್ಷತೆ ವಹಿಸು ವರು. ಮುಖ್ಯ ಅತಿಥಿಗಳಾಗಿ ಸಿ.ಐ.ಟಿ.ಯು. ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ವಿ.ಸುಕುಮಾರ್, ಮೈಸೂರು ವಿಭಾಗದ ಎ.ಐ.ಐ.ಇ.ಎ. ಪ್ರಧಾನ ಕಾರ್ಯದರ್ಶಿ ಎಸ್.ಎಸ್. ನಾಗೇಶ್, ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಎಫ್.ಎಂ.ಆರ್.ಎ.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಣ್ಣ ಎಸ್.ಹಳ್ಳಿ ಆಗಮಿಸುವರು.

No Comments to “ಅಂಗನವಾಡಿ ನೌಕರರ ಸಭೆ”

add a comment.

Leave a Reply

You must be logged in to post a comment.