ಅಮೃತ ಯೋಜನೆ : ಚಾಲನೆಗೆ ಚಿಂತನೆ

ಹಾಸನ : ರೈತಾಪಿ ವರ್ಗದ ಹೈನುಗಾರಿಕೆಗೆ ಉತ್ತೇಜನ ನೀಡುವ ಸಂಬಂಧ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಅಮೃತ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ಬಜೆಟ್ನಲ್ಲಿ ಅಮೃತ ಯೋಜನೆಗೆ ಚಾಲ್ತಿ ಒದಗಿಸಲಾಗುವುದು. ಇದಕ್ಕಾಗಿಹಣ ಕಾಯ್ದಿರಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದರು. ಕೆ.ಎಂ.ಎಫ್.ಅನ್ನು ರಾಷ್ಟ್ರೀಕರಣ ಮಾಡಬೇಕೆಂಬ ಆಲೋಚನೆ ಹೊಂದಿಲ್ಲ. ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕೆ.ಎಂ.ಎಫ್. ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕಾಗಿ ಅನುಮತಿ ನೀಡಿಲ್ಲ. ಡಿಸೆಂಬರ್ನಲ್ಲಿ ಹಾಲಿನ ದರ ಹೆಚ್ಚಿಸ ಲಾಗಿದೆ. ಪುನಃ ೨ ರೂ. ದರ ಹೆಚ್ಚಿಸು ವುದರ ಬಗ್ಗೆ ಕೆ.ಎಂ.ಎಫ್. ಪುನರ್ ಪರಿಶೀಲಿಸಬೇಕೆಂದು ಸೂಚನೆ ನೀಡಿ ದರು. ಸ್ತ್ರೀ ಶಕ್ತಿ, ಪರಿಶಿಷ್ಟ ಜಾತಿ ಹಾಗೂ ವರ್ಗದ ಸಂಘಗಳಿಗೆ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರತಿ ಸಂಘಕ್ಕೆ ೧೦ ಕುರಿ, ೧ ಟಗರು ನೀಡುವ ಆಲೋಚನೆ ಇದೆ. ಇದಕ್ಕಾಗಿ ೭೦ ಸಾವಿರ ಕುರಿ ಅಗತ್ಯ. ಈ ಯೋಜನೆಗೆ ೪ ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು. ಪ್ರಸಕ್ತ ಸಾಲಿನಲ್ಲ ೨೦೦ ಪಶು ವೈದ್ಯರ ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭವಾಗಿದೆ. ೩೦೦ ಪಶು ವೈದ್ಯಕೀಯ ಪರೀಕ್ಷಕರ ನೇಮಕವೂ ಆಗಲಿದೆ. ಇದಕ್ಕಾಗಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕ್ರಿಯೆ ಆರಂಭಿಸಿದೆ ಎಂದರು. ರಾಜ್ಯದಲ್ಲಿ ಪಶು ವೈದ್ಯರ ಕೊರತೆ ಇದೆ. ಬೀದರ್ ಹಾಗೂ ಬೆಂಗಳೂರು ಪಶು ವೈದ್ಯಕೀಯ ಮಹಾ ವಿದ್ಯಾ ಲಯದಲ್ಲಿ ಶೇ.೪೦ರಷ್ಟು ವೈದ್ಯ ಉಪ ನ್ಯಾಸಕರ ಕೊರತೆ ಇದೆ. ಉಳಿದೆಡೆ ಶೇ.೬೦ರಷ್ಟು ಕೊರತೆ ಇದೆ ಎಂದು ಹೇಳಿದರು. ಆಸ್ಪತ್ರೆ ಘಟಕಗಳಲ್ಲಿ ಲಸಿಕೆ ಕೊರತೆ ಇಲ್ಲ. ಬೆಂಗಳೂರಿನಲ್ಲಿ ಲಸಿಕೆ ಉತ್ಪಾದನೆ ಘಟಕವೇ ಇದೆ. ಈ ಸಂಬಂಧ ಕೊರತೆ ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿಯೇ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳ ಬಳಿ ಪ್ರತ್ಯೇಕ ಹಣ ಕಾಯ್ದಿರಿಸಲಾಗಿದೆ. ಲಸಿಕೆ ವಿತರಿಸದಿರುವ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

No Comments to “ಅಮೃತ ಯೋಜನೆ : ಚಾಲನೆಗೆ ಚಿಂತನೆ”

add a comment.

Leave a Reply

You must be logged in to post a comment.