ಸ್ಥಳ ಪರಿಶೀಲಿಸಿದ ಸಚಿವ

ಹಾಸನ : ಪಶು ವೈದ್ಯಕೀಯ ಕಾಲೇಜು ನಿರ್ಮಿಸುವ ಸಂಬಂಧ ಬುಧವಾರ ರಾಜ್ಯದ ಪಶು ಸಂಗೋಪನಾ ಸಚಿವ ರೇವು ನಾಯಕ ಬೆಳಮಗಿ ಸ್ಥಳ ಪರಿಶೀಲನೆ ನಡೆಸಿದರು. ಮಧ್ಯಾಹ್ನ ೩ ಗಂಟೆಯ ವೇಳೆಯಲ್ಲಿ ಚಿಕ್ಕಹೊನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಲೇಜು ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಲಾಗಿರುವ ಜಮೀನನ್ನು ಖುದ್ದುಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಭೂ ಸ್ವಾಧಿ ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಂತರ ಸಚಿವರು ಕೋರವಂಗಲಕ್ಕೆ ತೆರಳಿ ಪಶು ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಹೆಚ್.ಎಸ್.ಪ್ರಕಾಶ್ ಹಾಜರಿದ್ದರು.

No Comments to “ಸ್ಥಳ ಪರಿಶೀಲಿಸಿದ ಸಚಿವ”

add a comment.

Leave a Reply

You must be logged in to post a comment.