ಅಕ್ರಮ ಮರಳು ಸಾಗಣೆ ಲಾರಿ ವಶ

ಹಾಸನ : ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿ ಯೊಂದನ್ನು ಆಲೂರು ತಹಸೀಲ್ದಾರ್ ಮುಟ್ಟುಗೋಲು ಹಾಕಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಮರಳು ತುಂಬಿಕೊಂಡು ಹೋಗುತ್ತಿದ್ದ ಕೆ.ಎ.೦೨-ಎ.೭೩೫೧ ನಂಬರಿನ ಲಾರಿಯನ್ನು ತಹಸೀಲ್ದಾರ್ ಪ್ರಸಾದ್ಅವರು ಮಂಚೇನಹಳ್ಳಿ ಬಳಿ ತಡೆದು ಪರಿಶೀಲಿಸಿದಾಗ, ಯಾವುದೇ ಪರವಾನಗಿ ಹಾಗೂ ದಾಖಲಾತಿಗಳು ಇರಲಿಲ್ಲ. ಲಾರಿಯನ್ನು ವಶಕ್ಕೆ ತೆಗೆದು ಕೊಂಡ ಅವರು, ಚಾಲಕ ಮುಕುಂದೂರು ಹೊಸಳ್ಳಿಯ ದಿನೇಶ್ ಎಂಬಾತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು.

No Comments to “ಅಕ್ರಮ ಮರಳು ಸಾಗಣೆ ಲಾರಿ ವಶ”

add a comment.

Leave a Reply

You must be logged in to post a comment.