ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ

ಹಾಸನ : ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್.ನ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದರು. ಲೋಕಸಭೆ ಅಧಿವೇಶನವು ಸೆ.೧೭ರಿಂದ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಮುಂದಿನ ವರ್ಷ ಫೆಬ್ರವರಿ ಅಥವಾ ಮಾಚ್ರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಬುಧವಾರ ಪತ್ರಕರ್ತರಿಗೆ ತಿಳಿಸಿದರು. ತೃತೀಯ ರಂಗವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖಂಡರು ಈಗಾಗಲೇ ಚಿಂತನೆ ನಡೆಸಿದ್ದಾರೆ. ಕೇಂದ್ರದ ವೈಫಲ್ಯಗಳನ್ನು ಜನರ ಮುಂದಿಡಲು ತೀರ್ಮಾನಿಸಿದ್ದೇವೆಎಂದು ಹೇಳಿದರು. ಆಪರೇಷನ್ ಕಮಲ ಸ್ಥಗಿತ ಗೊಳಿಸಿರುವ ಕ್ರಮದ ಬಗ್ಗೆ ಪ್ರತಿ ಕ್ರಿಯಿಸಿದ ದೇವೇಗೌಡ ಅವರು, ಆ ಪಕ್ಷದಲ್ಲಿ ಆಂತರಿಕ ಭಿನ್ನಮತದ ಪರಿ ಣಾಮ ಸ್ಥಗಿತಗೊಳಿಸಬಹುದು ಎಂದು ಸಂಶಯ ವ್ಯಕ್ತಪಡಿಸಿದರು. ಜೆ.ಡಿ.ಎಸ್.ನಿಂದ ಹೊರ ಹೋಗಿರುವವರನ್ನು ಪುನಃ ಪಕ್ಷಕ್ಕೆ ಕರೆ ತರುವುದಿಲ್ಲ. ಪಕ್ಷಾಂತರಿಗಳನ್ನು ಸೆಳೆ ಯುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕರು ರಾಜೀನಾಮೆ ನೀಡಿ ಪಕ್ಷಾಂತರಗೊಂಡಿರುವುದರಿಂದ ರಾಜ್ಯದ ೭ನೇ ವಿಧಾನಸಭಾ ಕ್ಷೇತ್ರ ಗಳಿಗೆ ಶಾಸಕರನ್ನು ಆಯ್ಕೆ ಮಾಡ ಬೇಕಿದೆ. ಈ ಉಪ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿ ಕೊಳ್ಳುವುದಿಲ್ಲ. ಸಮರ್ಥ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ನಿರ್ಧರಿಸ ಲಾಗಿದೆ. ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ೧೦೦ ದಿವಸದ ಸಾಧನೆಯನ್ನು ವಿವರಿಸಲಿ. ಆಗ ಸಮಸ್ಯೆಯನ್ನು ಜನರ ಮುಂದಿಡು ತ್ತೇವೆ. ವಸ್ತು ಸ್ಥಿತಿಯನ್ನು ಜನರಿಗೆ ವಿವರಿಸಲಾಗುವುದು ಎಂದರು.

No Comments to “ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ”

add a comment.

Leave a Reply

You must be logged in to post a comment.