ಮಳೆಯ ಆರ್ಭಟಕ್ಕೆ ೨ ಬಲಿ: ಕೋಟ್ಯಾಂತರ ರೂ. ಬೆಳೆ ನಷ್ಟ

aug-29-page-no-1-11.jpg
ಹಾಸನ : ನಗರವೂ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಇಬ್ಬರು ವ್ಯಕ್ತಿ ಗಳು ಬಲಿಯಾಗಿದ್ದಾರೆ. ೬ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹತ್ತಕ್ಕೂ ಹೆಚ್ಚು ಕೆರೆಗಳು ಒಡೆದಿವೆ. ಹಲವು ಗ್ರಾಮ ಗಳು ಸಂಪರ್ಕವನ್ನು ಕಡಿದು ಕೊಂಡಿವೆ. ನೂರಾರು ಎಕರೆ ಜಮೀನು ಗಳು ಜಲಾವೃತಗೊಂಡಿವೆ. ಮಳೆಯ ರುದ್ರನರ್ತನಕ್ಕೆ ಜನ ಜೀವನ ಬೆಚ್ಚಿ ಬಿದ್ದಿದೆ. ಜನ-ಜಾನು ವಾರುಗಳಿಗೆ ಪ್ರಾಣಹಾನಿಯಾಗಿದೆ. ಕೋಟ್ಯಾಂತರ ರೂ. ಬೆಳೆ ನಷ್ಟ ವಾಗಿದೆ. ಹಾಸನ ತಾಲ್ಲೂಕಿನ ಕಿತ್ತಾನೆ ಗ್ರಾಮದ ನಾಗರಾಜಶೆಟ್ಟಿ ಹಾಗೂ ಸ್ವಾಮಿಗೌಡ ಬುಧವಾರ ರಾತ್ರಿ ೯-೩೦ರ ವೇಳೆಯಲ್ಲಿ ತಮ್ಮ ಜಮೀನಿ ನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರು ಗುವಾಗ ವಿಪರೀತ ಮಳೆಗೆ ಸಿಲುಕಿ ಕೊಂಡು ಕೊಚ್ಚಿ ಹೋಗಿದ್ದಾರೆ. ಕಿತ್ತಾನೆ ಕೆರೆಯಲ್ಲಿ ಕೊಚ್ಚಿ ಹೋದ ಇವರು, ಮೊಸಳೆ ಹೊಸಹಳ್ಳಿ ಕೆರೆ ಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಾಸನ, ಕಸಬಾದ ಹರಳಹಳ್ಳಿ ಕೆರೆ ಕೋಡಿ ಬಿದ್ದಿದೆ. ಇದರಿಂದ ಹೂವಿನ ಹಳ್ಳಿ ಕಾವಲು, ಮಣಚನಹಳ್ಳಿ, ಎರೆ ಹಳ್ಳಿಯಲ್ಲಿನ ಜಮೀನು ಜಲಾವೃತ ಗೊಂಡು ಫಸಲು ನಾಶವಾಗಿದೆ. ಗ್ಯಾರಳ್ಳಿ ಕೆರೆ, ತಟ್ಟೇಕೆರೆ ಒಡೆದು ಹೋಗಿದೆ. ಇದರಿಂದ ೬೦ ಎಕರೆ ಜಮೀನು ಜಲಾವೃತವಾಗಿವೆ. ಹಂದಿನಕೆರೆ ಒಡೆದ ಪರಿಣಾಮ ಈ ಭಾಗದ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳು ಸಂಪರ್ಕವನ್ನೇ ಕಳೆದುಕೊಂಡಿವೆ. ಈ ಭಾಗದಲ್ಲಿನ ನಾಲ್ಕೈದು ಕಿ.ಮೀ. ರಸ್ತೆ ಕೊಚ್ಚಿ ಹೋಗಿದೆ. ಈ ಮಧ್ಯೆ ಹರಳಹಳ್ಳಿ, ಬೈಲ ಹಳ್ಳಿ, ಅಗಿಲೆಹಳ್ಳ ಕೊಪ್ಪಲು, ಈಚಲ ಹಳ್ಳಿ ಸಂಪರ್ಕವನ್ನೇ ಕಡಿದುಕೊಂಡಿವೆ. ಹಾಸನ ನಗರದಲ್ಲಿ ಆದರ್ಶನಗರ ಹಾಗೂ ಶಿವಜ್ಯೋತಿನಗರದಲ್ಲಿ ಎರಡು ಮನೆಗಳು ಮಳೆಗೆ ಆಹುತಿ ಯಾಗಿದೆ. ತೇಜೂರು, ಹಾಲು ವಾಗಿಲು, ಮಾರಿಗುಡಿಕೊಪ್ಪಲಿನಲ್ಲಿ ಮನೆ ಬಿದ್ದಿದೆ. ಆದರೆ ಯಾವ ಪ್ರಾಣ ಹಾನಿಯೂ ಆಗಿಲ್ಲ. ಮೊಸಳೆಹೊಸಹಳ್ಳಿಯ ಮೊಸಳೆ ಕೆರೆಗೆ ಅತಿಯಾದ ನೀರು ನುಗ್ಗಿದ್ದರಿಂದ ಕೆರೆ ಕೋಡಿ ಬಿದ್ದಿದೆ. ಇದರಿಂದ ನೂರಾರು ಎಕರೆ ಬೆಳೆ ನಾಶವಾಗಿದೆ. ಶುಂಠಿ, ಅಡಿಕೆ, ವೀಳ್ಯೆದೆಲೆ ಹಾಗೂ ಭತ್ತ ಬಿತ್ತನೆ ನೀರಿಗೆ ಕೊಚ್ಚಿ ಹೋಗಿದೆ. ಸತ್ತಿಗರ ಹಳ್ಳಿ, ಕಾಚನಾಯಕನಹಳ್ಳಿ ಕೆರೆ ಒಡೆದಿರುವುದರಿಂದ ವಿಪರೀತ ನಷ್ಟ ವಾಗಿದೆ.

No Comments to “ಮಳೆಯ ಆರ್ಭಟಕ್ಕೆ ೨ ಬಲಿ: ಕೋಟ್ಯಾಂತರ ರೂ. ಬೆಳೆ ನಷ್ಟ”

add a comment.

Leave a Reply

You must be logged in to post a comment.