ಶಿಕ್ಷಣ ಕ್ಷೇತ್ರದ ಸಮಸ್ಯೆ ಹತ್ತು ದಿವಸ ಗಡುವು

ಹಾಸನ : ಶಿಕ್ಷಣ ಕ್ಷೇತ್ರದ ಸಮಸ್ಯೆಗೆ ಸಂಬಂಧಿಸಿದಂತೆ ಹತ್ತು ದಿನದಲ್ಲಿ ಸಭೆ ಕರೆಯದಿದ್ದರೆ ಪ್ರಾಥಮಿಕ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರ ಕಛೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಎಚ್ಚರಿಕೆ ನೀಡಿದರು. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರ, ವಿಧಾನ ಪರಿಷತ್ ಸದಸ್ಯರು ನೀಡಿ ರುವ ೩೨ ಸಮಸ್ಯೆಗಳ ಪಟ್ಟಿಗೆ ಬಿ.ಜೆ.ಪಿ. ಶಾಸಕರು ಸಹಿ ಮಾಡಿದ್ದಾರೆ. ಹಾಗಾಗಿ ಪಕ್ಷಾತೀತ ಧರಣಿ ನಡೆಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ಶಿಕ್ಷಣ ಇಲಾಖೆಯು ಪರಿಹಾರ ಭೋಧನೆ ಕುರಿತು ಪೂರ್ವಭಾವಿ ಯಾಗಿ ಚಿಂತನೆ ನಡೆಸದೆ ಏಕಾಏಕಿಜಾರಿಗೆ ತಂದಿರುವ ಯೋಜನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರ ಲ್ಲದೆ, ಈ ಯೋಜನೆ ಶೈಕ್ಷಣಿಕವಾಗಿ ಹಿಂದು ಳಿದಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲಾಗಿ ವ್ಯಾಸಂಗ ಮಾಡುವ ಕುರಿತು ರಾಜ್ಯ ವ್ಯಾಪಿ ಚರ್ಚೆ ನಡೆಯಲಿ ಎಂದು ಪ್ರತಿಕ್ರಿಯಿಸಿದರಲ್ಲದೆ, ಸರ್ಕಾರ ಈ ಸಂಬಂಧ ವಿಶೇಷ ಕಾಯ್ದೆಯೊಂದನ್ನು ಜಾರಿಗೆ ತರಲೆಂದು ಒತ್ತಾಯಿಸಿದರು. ಹಾಸನ ಜಿಲ್ಲೆಯ ಹಲವೆಡೆ ಅಂಗಮಾರಿ ರೋಗದಿಂದ ಆಲೂಗೆಡ್ಡೆ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸರ್ಕಾರ ಎಕರೆಗೆ ೩೩ ಸಾವಿರ ರೂ. ಪರಿಹಾರ ನೀಡು ವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಲ್.ಆರ್. ವೆಂಕಟೇಶ್ ಹಾಜರಿದ್ದರು.

No Comments to “ಶಿಕ್ಷಣ ಕ್ಷೇತ್ರದ ಸಮಸ್ಯೆ ಹತ್ತು ದಿವಸ ಗಡುವು”

add a comment.

Leave a Reply

You must be logged in to post a comment.