ಸಕಲೇಶಪುರದಲ್ಲಿ ಕೋಮು ಸೌಹಾರ್ದ ಸಭೆ

ಸಕಲೇಶಪುರ : ಕೋಮು ಸೌಹಾರ್ದ ಸಭೆಯಲ್ಲಿ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಪಾಕಿಸ್ತಾನ, ಇಸ್ಲಾಂ ಹಾಗೂ ಭಗವತ್ ಧ್ವಜಗಳನ್ನು ಪ್ರದರ್ಶಿಸಿ ದರೆ, ಮತ್ತೊಬ್ಬ ಶಾಸಕ ಬಿ.ಬಿ. ಶಿವಪ್ಪ ಹಿಂದಿನ ಘಟನೆಯೊಂದನ್ನು ಬಿಚ್ಚಿ ತನ್ನದೇ ಆದ ರೀತಿಯಲ್ಲಿ ಸೌಹಾರ್ದ ಸಭೆಗೆ ಮೆರುಗು ನೀಡಿದರು. ತಮ್ಮ ಭಾಷಣದ ಮಧ್ಯೆ ಪಾಕಿಸ್ತಾನದ ಧ್ವಜವನ್ನು ತೆಗೆದು ಪ್ರದರ್ಶಿಸಿ ಪೊಲೀಸರು, ಸಾರ್ವ ಜನಿಕರು ಮತ್ತು ಸಂಘ-ಸಂಸ್ಥೆ ಯವರು ಮೊದಲು ಧ್ವಜಗಳನ್ನು ಗುರುತಿಸಿ, ಪಾಕಿಸ್ತಾನದ ಧ್ವಜದಲ್ಲಿ ಚೌಕಾಕಾರದಲ್ಲಿ ಶೇ. ೨೫ ಭಾಗ ಬಿಳಿ ಬಣ್ಣ ಇರುತ್ತದೆ. ಶೇ. ೭೫ ಹಸಿರು ಬಣ್ಣ ಮಧ್ಯದಲ್ಲಿ ಚಂದ್ರ ನಕ್ಷತ್ರ ಇರುತ್ತದೆ. ಇಸ್ಲಾಂ ಧರ್ಮದ ನಂಬಿಕೆಯ ಧ್ವಜ ಹಸಿರು ಬಣ್ಣ ಇಂಗ್ಲಿಷ್ ಪದದ ಗ ಆಕಾರದಲ್ಲಿ ಇರುತ್ತದೆ. ಮೇಲೆ ಅಥವಾ ಕೆಳಗೆ ಚಂದ್ರ ಮತ್ತು ನಕ್ಷತ್ರ ಇರುತ್ತದೆ. ಭಗವತ್ ಧ್ವಜ ಅಗ್ನಿ ಕುಂಡದಿಂದ ಏಳುವ ಜ್ವಾಲೆಯಂತೆ ಇರುತ್ತದೆ. ಇಂತಹ ಸಾಮಾನ್ಯ ಜ್ಞಾನವನ್ನು ಅರಿತು ನಂತರ ಬೀದಿಗಿಳಿಯಬೇಕು ಎಂದು ಸಲಹೆ ಮಾಡಿ, ಇಂತಹ ವಿವಾದಗಳು ರಾಜ್ಯದ ಇತರೆ ಪ್ರದೇಶದಲ್ಲೂ ನಡೆದ ಬಗ್ಗೆ ವರದಿಗಳು ಬಂದಿವೆ. ಆದುದರಿಂದ ವಿಶೇಷವಾಗಿ ಪೊಲೀಸ್ ಅಧಿ ಕಾರಿಗಳು ಸಹ ಧ್ವಜ ಪರಿಚಯ ಮಾಡಿಕೊಳ್ಳಬೇಕು ಎನ್ನುತ್ತಾ ಧ್ವಜಳನ್ನು ಎಸ್.ಪಿ. ಶರತ್ಚಂದ್ರ ಅವರಿಗೆ ನೀಡಿ ಪೊಲೀಸರಿಗೆ ಧ್ವಜದ ಮಾಹಿತಿ ನೀಡುವಂತೆ ಮನವಿ ಮಾಡಿದರು. ಮಾಜಿ ಶಾಸಕ ಬಿ.ಬಿ. ಶಿವಪ್ಪ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಒಬ್ಬ ಮುಸ್ಲಿಂ ಯುವಕ ಗಣಪತಿ ವಿಗ್ರಹವನ್ನು ಒಡೆದು ಹಾಕಿದ ಘಟನೆ ಯನ್ನು ತೆರೆದಿಟ್ಟರು. ಒಂದು ಮುಸ್ಲಿಂ ಕುಟುಂಬದ ಹೆಣ್ಣುಮಗಳನ್ನು ಪಟ್ಟಣದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದರು. ಆ ಹೆಣ್ಣು ಮಗಳು ಹೇಮಾವತಿ ನದಿ ಯಲ್ಲಿ ಗೋಣಿಚೀಲ ಒಗೆಯು ತ್ತಿದ್ದಳು. ವಾಹನದಲ್ಲಿ ಹೋಗುತ್ತಿದ್ದ ಹೆಣ್ಣಿನ ಕುಟುಂಬದ ಸದಸ್ಯ ರೊಬ್ಬರು ಇದನ್ನು ನೋಡಿ ನೊಂದು ಹುಡುಗನ ಕುಟುಂಬದ ವರನ್ನು ಹೊಳೆಯ ಸಮೀಪಕ್ಕೆ ಕರೆದು ತರಾಟೆಗೆ ತೆಗೆದು ಕೊಂಡರು. ರಾಜಿ ಪಂಚಾಯಿತಿ ನಂತರ ಮಸೀದಿಗೆ ತೆರಳಿ ಆಣೆ ಮಾಡುವುದಿತ್ತು. ದೇವಸ್ಥಾನದ ಬಳಿ ಬಂದಾಗ ಮರದ ಕೆಳಗೆ ಇದ್ದ ವಿಗ್ರಹವನ್ನು ನೋಡಿ, ಇಲ್ಲೇ ಆಣೆ ಮಾಡುವು ದಾಗಿ ಹೇಳಿದ. ವಿಗ್ರಹವನ್ನು ತಲೆಯ ಮೇಲೆ ಎತ್ತಿಕೊಳ್ಳುವಾಗ ಆಯತಪ್ಪಿ ವಿಗ್ರಹ ಕೆಳಗೆ ಬಿದ್ದು ಒಡೆದು ಹೋಯಿತು. ಈ ಘಟನೆಗೆ ಕೋಮು ಬಣ್ಣ ಬಳಿಯಲು ಕೆಲವು ವ್ಯಕ್ತಿಗಳು ಯತ್ನಿಸಿದರು. ಆದರೆ ಘಟನೆಯ ಪರಾಮರ್ಶೆ ಮಾಡಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ದೇವರ ಮೇಲೆ ನಂಬಿಕೆ ಇಟ್ಟು ಪ್ರಮಾಣ ಮಾಡಲು ಮುಂದಾಗಿರುವ ಅಂಶವನ್ನೇ ಗಣನೆಗೆ ತೆಗೆದು ಕೊಂಡು ಶಾಂತಿ ಸಭೆ ನಡೆಸಿ ಪ್ರಕರಣವನ್ನು ಕೈಬಿಡಲಾಯಿತು ಎಂದು ಹೇಳಿದರು.

No Comments to “ಸಕಲೇಶಪುರದಲ್ಲಿ ಕೋಮು ಸೌಹಾರ್ದ ಸಭೆ”

add a comment.

Leave a Reply

You must be logged in to post a comment.