ಕನ್ನಡ ಭಾಷಾ ಬಳಕೆ ಕಾರ್ಯಾಗಾರ

ಹಾಸನ : ಕನ್ನಡ ಅಭಿವೃದ್ಧಿ ಪ್ರಾಧಿ ಕಾರ, ಹಾಸನ ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ನೌಕರರ ಸಂಘ, ಜಿಲ್ಲಾ ವಕೀಲರ ಸಂಘ ಹಾಗು ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತಾ ಶ್ರಯದಲ್ಲಿ ಗುರುವಾರ ನಗರದ ಕಲಾಭವನ ದಲ್ಲಿ ಕನ್ನಡ ಭಾಷಾ ಬಳಕೆ ಕಾರ್ಯಾಗಾರ ಏರ್ಪಡಿಸ ಲಾಗಿತ್ತು. ಜಿಲ್ಲಾಧಿಕಾರಿ ನವೀರ್ನರಾಜ್ ಸಿಂಗ್ ಕಾರ್ಯಾಗಾರವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಂ. ಆನಂದ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಾಚೀನ ಭಾಷೆಯಾದ ಕನ್ನಡವನ್ನು ಇಂದಿಗೂಕಲಿಯಿರಿ ಮತ್ತು ಆಡಳಿದಲ್ಲಿ ಕನ್ನಡವನ್ನು ಬಳಕೆ ಮಾಡಿ ಎಂಬುದೇ ಒಂದು ರೀತಿಯ ಇರುಸುಮುರುಸೆನಿಸುತ್ತದೆ. ಆದಾಗ್ಯೂ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕನ್ನಡದ ಬಗ್ಗೆ ಕಾಳಜಿ ವಹಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸು ತ್ತಿದ್ದಾರೆ. ಆಡಳಿತದಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಕೆಗೆ ತರುವಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕನ್ನಡ ಭಾಷಾ ತಜ್ಞರಿಂದ ಮನವರಿಕೆ ಮಾಡಿ ಕೊಡುತ್ತಿರುವುದು ಒಳ್ಳೆಯ ಪ್ರಯತ್ನವಾಗಿದೆ ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಎಂ. ಶಾಂತರಾಜು ಪ್ರಾಸ್ತಾವಿಕ ಭಾಷಣ ಮಾಡಿ, ಪ್ರಾಧಿಕಾರವು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿದ್ದ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಿ ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದಕ್ಕೆ ಅಭಿನಂದನೆ ವ್ಯಕ್ತಪಡಿಸಿದರು. ವಿಶೇಷವಾಗಿ ಅಲ್ಪ ಸಂಖ್ಯಾತರು ಹೆಚ್ಚು ನೆಲೆಸಿರುವ ಕಡೆಗಳಲ್ಲಿ ಸವಿಗನ್ನಡ ಕಲಿಕೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಏರ್ಪಡಿಸಿದೆ ಎಂದರು. ವಿಧಾನಸಭಾ ಸದಸ್ಯ ಹೆಚ್. ಎಸ್. ಪ್ರಕಾಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಯಲುಪ್ರೋತ್ಸಾಹಿಸಬೇಕೆಂದರಲ್ಲದೆ, ಕನ್ನಡ ಸಾಹಿತ್ಯಪರಿಷತ್ನೊಡನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆ ಗೂಡಿ ಕೆಲಸ ಮಾಡುವುದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಒತ್ತು ಕೊಡಬಹುದಾಗಿದೆ ಎಂದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್. ಚಂದ್ರಪ್ಪ ಸ್ವಾಗತಿಸಿದರು. ಕೃಷ್ಣ ಸ್ವರೂಪ್ ಕಾರ್ಯಕ್ರಮ ನಿರೂಪಿಸಿದರು.

No Comments to “ಕನ್ನಡ ಭಾಷಾ ಬಳಕೆ ಕಾರ್ಯಾಗಾರ”

add a comment.

Leave a Reply

You must be logged in to post a comment.