ಸುಧಾರಣೆಯ ನೆಪದಲ್ಲಿ ಖಾಸಗೀಕರಣ – ನಯ ವಂಚನೆಯ ಕ್ರಮ

ಹಾಸನ : ದೇಶದ ಆರ್ಥಿಕತೆ ಯನ್ನು ಸುಧಾರಿಸುವ ನೆಪದಿಂದ ಉದಾರೀಕತೆಯನ್ನು ಜಾರಿಗೊಳಿಸಿ ಸಾವಿರಾರು ರೈತರ ಆತ್ಮಹತ್ಯೆಗೆ ಕಾರಣವಾದಂತೆ ಅಂಗನವಾಡಿ ಗಳನ್ನು ಸುಧಾರಿಸುವ ನೆಪದಲ್ಲಿ ಖಾಸಗೀಕರಿಸಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐ.ಸಿ. ಡಿ.ಎಸ್.) ಹಾಳು ಮಾಡುವ ನಯವಂಚಕತನವನ್ನು ಜನ ಚಳವಳಿಗಳ ಮೂಲಕ ಬಯಲು ಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಕಾಂ. ಎಸ್. ವರಲಕ್ಷ್ಮಿ ಹೇಳಿದರು. ಭಾನುವಾರ ನಡೆದ ಅಂಗನ ವಾಡಿ ನೌಕರರ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದರು. ಐ.ಸಿ.ಡಿ.ಎಸ್.ನ ಆರು ಪ್ರಮುಖ ಕಾರ್ಯಗಳನ್ನು ಮಾತ್ರವೇ ಅಂಗನವಾಡಿ ನೌಕರರು ಮಾಡ ಬೇಕೆಂದಿದ್ದರೂ, ಇಲಾಖೆಯೇತರ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಿ ನಂತರ ನೌಕರಿಗೆ ಕೆಲಸಗಳ ಒತ್ತಡವನ್ನು ಕಡಿಮೆ ಮಾಡುವ ನೆಪ ನೀಡಿ, ಅಂಗನವಾಡಿ ಕೇಂದ್ರಗಳನ್ನು ಖಾಸಗಿಯವರಿಗೆ ಮಾರಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು. ತಿನ್ನುವ ಅನ್ನದ ಬೆಲೆ ಗಗನಕ್ಕೇರಿದೆ. ಜನ ವಿರೋಧಿ ಆರ್ಥಿಕ ನೀತಿಗಳು ಜಾರಿಯಾಗಿ ರೈತರು, ಕಾರ್ಮಿಕರು ಆತ್ಮಹತ್ಯೆಗೆ ಕಾರಣವಾಗುತ್ತಿದ್ದರೆ, ವಿರೋಧ ಪಕ್ಷವಾದ ಬಿಜೆಪಿಯು ಕ್ಷುಲ್ಲಕ ಕಾರಣಗಳಿಗಾಗಿ ಜಮ್ಮು-ಕಾಶ್ಮೀರ, ಒರಿಸ್ಸಾ ಹಾಗೂ ಸಕಲೇಶಪುರದಲ್ಲಿ ಜನರ ನೆಮ್ಮದಿಯನ್ನು ಕೆಡಿಸುತ್ತಿದೆ. ಈ ಬಿಜೆಪಿಗೆ ಜನರು ಬಾಧೆಯಿಂದ ನರಳುತ್ತಿರುವಾಗಲೇ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಈ ಕೋಮು ದಳ್ಳುರಿಯನ್ನು ಹಚ್ಚುತ್ತಿದೆ ಎಂದು ವರಲಕ್ಷ್ಮಿ ಹೇಳಿದರು. ಎಐಟಿಯುಸಿ ಮೈಸೂರು ವಿಭಾಗ ಕಾರ್ಯದರ್ಶಿ ಕಾಂ. ನಾಗೇಶ್ ಮಾತನಾಡಿ, ಉದಾರೀ ಕರಣ ಪ್ರೇರಿತ ನೀತಿಗಳು ಜನರನ್ನು ದುಸ್ಥಿತಿಗೆ ತಳ್ಳುತ್ತಿವೆ. ೨೦೦೬ರ ಆಗಸ್್ಟ ಭಾರತ ಬಂದ್ ನಲ್ಲಿ ೪ ಕೋಟಿ ಜನ ಭಾಗವಹಿ ಸಿದ್ದರು. ಸಿ.ಐ.ಟಿ.ಯು ಹೇಳಿದಂತೆ ಆರ್ಥಿಕ ನೀತಿಯು ಜನ ವಿರೋಧಿಯಾಗಿದೆ ಎಂದರು. ಹೇಮಾವತಿ ಪ್ರತಿಮೆ ಬಳಿ ಯಿಂದ ಬೃಹತ್ ರ್ಯಾಲಿ ಸಂಘಟಿಸ ಲಾಗಿತ್ತು. ವೇದಿಕೆಯಲ್ಲಿ ಸಿ.ಐ. ಟಿ.ಯು. ಜಿಲ್ಲಾಧ್ಯಕ್ಷ ವಿ. ಸುಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಎಫ್.ಎಂ.ಆರ್.ಎ.ಐ. ನ ವೀರಣ್ಣ ಎಸ್.ಹಳ್ಳಿ… ಇದ್ದರು. ಅಧ್ಯಕ್ಷತೆ ಯನ್ನು ಜಿಲ್ಲಾ ಸಂಚಾಲಕರಾದ ವೈ.ಆರ್. ಮಂಜಮ್ಮ ವಹಿಸಿದ್ದರು.

No Comments to “ಸುಧಾರಣೆಯ ನೆಪದಲ್ಲಿ ಖಾಸಗೀಕರಣ – ನಯ ವಂಚನೆಯ ಕ್ರಮ”

add a comment.

Leave a Reply

You must be logged in to post a comment.