ಮಣ್ಣಿನ ಗಣಪತಿ ತಯಾರಿಗೆ ಸಿದ್ಧ ಹಸ್ತರು..

ಅರಸೀಕೆರೆ: ಗಣೇಶ ಚತುರ್ಥಿ ಹಬ್ಬ ಬಂತೆಂದರೆ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆ ಹೆಚ್ಚು. ಇಂತಹ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಗೆ ಹೆಸರು ವಾಸಿಯಾದವರು ಹಾರನಹಳ್ಳಿ ಗಣಪತಿ ಮಹಾ ದೇವ್. ಇವರು ಸುಮಾರು ೫ ದಶಕಗಳಿಂದಲೂ ಇವರ ತಂದೆ ಬಸಪ್ಪನವರು ಅರಸೀಕೆರೆ ಗಣಪತಿ ಹಾಗೂ ನಾಡಿನ ವಿವಿಧ ಭಾಗಗಳಿಗೂ ಇವರೇ ಗಣಪತಿ ನಿರ್ಮಿಸಿ ಕೊಡುತ್ತಿದ್ದರು. ಬಸಪ್ಪನವರ ನಿಧನದ ನಂತರ ಅವರ ಮಗ ಮಹಾದೇವ್ ಅವರು ಮಣ್ಣಿನ ಗಣಪತಿಯನ್ನು ತಯಾರಿಸಲು ಸಿದ್ಧಹಸ್ತರು. ತಂದೆಯ ಮಾರ್ಗ ದರ್ಶನ ದಲ್ಲಿಯೇ ಈ ಕಲೆಯನ್ನು ರೂಢಿಸಿಕೊಂಡು ಹತ್ತು ಅಡಿ ಎತ್ತರದ ಜೇಡಿ ಮಣ್ಣಿನ ಗಣಪತಿಯನ್ನು ನಿರ್ಮಿಸಿ ಹಾಗೂ ವಿವಿಧ ಭಂಗಿಯ ಗಣಪತಿ ಮೂರ್ತಿಯನ್ನು ಮಣ್ಣಿನಿಂದ ಮಾಡಿ ಮಾರಾಟ ಮಾಡುತ್ತಾರೆ. ಇವರು ಮಾಡಿದ ಗಣಪತಿಯೂ ಶಿವಮೊಗ್ಗ, ಪಾಂಡುಪುರ, ಜಾವಗಲ್, ಅರಸೀ ಕೆರೆ, ತರೀಕೆರೆ, ಹಾರನಹಳ್ಳಿ, ಹಾಸನ -ಹೀಗೆ ನಾನಾ ಪ್ರಮುಖ ಊರು ಗಳಿಗೆ ತಯಾರಿಸಿದ ಗಣಪತಿಯನ್ನು ವಿನಾಯಕ ಚೌತಿಯಂದು ಪ್ರತಿ ಷ್ಟಾಪಿಸಿ ಪೂಜಿಸುತ್ತಾರೆ.ಗಣಪತಿ ಮಹದೇವ್ ಹೇಳು ವಂತೆ, ಗಣಪತಿ ತಯಾರಿಸಲು ಶುದ್ಧವಾದ ಜೇಡಿ ಮಣ್ಣು, ನಾರು, ತಂತಿ ಹೀಗೆ ಹಲವು ಸಾಮಗ್ರಿಗಳನ್ನು ೫ ತಿಂಗಳು ಮುಂಚೆಯೇ ಸಿದ್ಧ ಮಾಡಿ ತಯಾರಿಕೆ ಪ್ರಾರಂಭ ಮಾಡಲು ಪೂಜೆ ಮಾಡಿ ಪ್ರಾರಂಭಿಸುತ್ತೇವೆ. ಮುಖ್ಯವಾಗಿ ಗಣಪತಿ ತಯಾರಿಕೆಗೆ ಶಾಸ್ತ್ರೋಕ ್ತವಾಗಿ ಗಣಪತಿ ನಿರ್ಮಿಸಿಕೊಂಡು ಬರುತ್ತಿದ್ದೇವೆ. ಇಂದು ಬಣ್ಣ ಇತರೆ ವೆಚ್ಚಗಳು ಬಹಳದುಬಾರಿ ಯಾಗಿದೆ. ಇತ್ತೀ ಚೆಗೆ ವಿವಿಧ ಭಂಗಿಯ ಗಣಪತಿಯ ಚಿತ್ರ ತಂದು ಈ ರೀತಿ ನಿರ್ಮಿಸಿ ಕೊಡಿ ಎಂದು ವ್ಯಾಪಾರಸ್ಥರು ಕೇಳಿದರೆ ಆ ಮಾದರಿಯಲ್ಲೆ ಗಣಪತಿ ವಿಗ್ರಹ ವನ್ನು ನಿರ್ಮಿಸಿ ಕೊಡು ತ್ತಾರೆ. ಈ ಗಣಪತಿಯ ತಯಾರಿಕೆ ಯಲ್ಲಿ ಮನೆ ಮಂದಿ ಎಲ್ಲರು ಸೇರಿ ಬಣ್ಣ ಹಚ್ಚುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಇಂತಹ ಕಲಾ ವಿದನಿಗೆ ಅರಸೀಕೆರೆ ತಾಲ್ಲೂಕಿನ ಅನೇಕ ಸಂಘ= ಸಂಸ್ಥೆ ಗಳು ಇವರ ಕಲಾ ಪ್ರತಿಭೆಯನ್ನು ಕಂಡು ಸನ್ಮಾನಿಸಿದೆ. ಇಂತಹ ಕಲಾವಿದನಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಿ ಎಂದು ಅರಸೀಕೆರೆ ಜನರ ಹಾರೈಕೆ. ಇಂತಹ ಕಲಾವಿದನಿಗೆ ರಾಜ್ಯ ಮಟ್ಟ ಪ್ರಶಸ್ತಿ ನೀಡಲಿ ಎಂದು ಅರಸೀಕೆರೆ ಜನತೆಯ ಆಶಯ ವಾಗಿದೆ.

No Comments to “ಮಣ್ಣಿನ ಗಣಪತಿ ತಯಾರಿಗೆ ಸಿದ್ಧ ಹಸ್ತರು..”

add a comment.

Leave a Reply

You must be logged in to post a comment.