ಅಂಗನವಾಡಿ ನೌಕರರ ಅರಣ್ಯರೋದನ…

ಹಾಸನ : ನರಿ ಕೂಗು ಗಿರಿ ಮುಟ್ಟೀತೇ? ಎಂಬ ಗಾದೆ ಮಾತಿದೆ. ಅಕ್ಷರಶಃ ಈ ಗಾದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ವಯಿಸುತ್ತದೆ. ಕಾರ್ಯಕರ್ತೆಯರ ಅರಣ್ಯ ರೋದನ ಈವರೆವಿಗೂ ಆಡಳಿತ ನಡೆಸಿದ ರಾಜಕೀಯ ಪಕ್ಷಗಳ ಅದಕ್ಷತೆಯನ್ನು ತೋರ್ಪಡಿಸುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಇವೊತ್ತಿನದೇನಲ್ಲ. ಕಳೆದ ಮೂರು ದಶಕಗಳಿಂದಲೂ ತಮ್ಮ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ. ಬೀದಿಗಿಳಿದು ಚಳುವಳಿ ರೂಪಿಸಿದ್ದಾರೆ. ಸರ್ಕಾರಗಳ ಮೇಲೆ ಒತ್ತಡವನ್ನೂ ಹೇರಿದ್ದಾರೆ. ಸಮಸ್ಯೆಗೆ ಸ್ಪಂದಿಸದ ಅಧಿ ಕಾರಿಶಾಹಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಅಂಗನವಾಡಿ ಕಾರ್ಯಕರ್ತೆ ಯರು ಬೇಡಿಕೆಗೆ ಸಂಬಂಧಿಸಿದಂತೆ ಗುರುವಾರ ಪ್ರತಿಭಟನಾ ರ್ಯಾಲಿ ನಡೆಸಿ ದರು. ನೌಕರರ ಜಿಲ್ಲಾ ಸಮ್ಮೇಳನದ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ಭಾಗ ಗಳಿಂದ ಕಾರ್ಯಕರ್ತೆಯರು ಆಗಮಿಸಿ ದ್ದರು. ಕಾರ್ಯಕರ್ತೆಯರ ಅರಣ್ಯ ರೋದನಕ್ಕೆ ಸಂಬಂಧಿಸಿಂತೆ ಪತ್ರಿಕೆ ಹಲವರನ್ನು ಸಂಪರ್ಕಿಸಿ ಅಭಿಪ್ರಾಯ ಕಲೆ ಹಾಕಿತು. ಚಂದ್ರಮ್ಮ, ಕಲ್ಲಾರೆಕೊಪ್ಪಲು. ಅಂಗನವಾಡಿ ಕಾರ್ಯಕರ್ತೆ ಯಾಗಿ ೧೫ ವರ್ಷದಿಂದಲೂ ಸೇವೆ ಮಾಡುತ್ತಿದ್ದೇನೆ. ನನಗೆ ವೇತನ ಸಿಗು ತ್ತಿರುವುದು ೧,೭೦೦ ರೂ. ಮಾತ್ರ. ಜೀವನ ನಿರ್ವಹಣೆ ಕಷ್ಟವಾಗಿದೆ. ವೇತನ ಹೆಚ್ಚಳ ಮಾಡಬೇಕು. ಹಲ ವಾರು ಬಾರಿ ಸರ್ಕಾರದ ಗಮನಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದೇವೆ. ಪ್ರಯೋಜನವಾಗಿಲ್ಲ. ಶಿವಮ್ಮ , ಶಾಂತಿಗ್ರಾಮ. ಖಾಯಮಾತಿ ಮಾಡದಿರುವುದ ರಿಂದ ಸೇವಾ ಭದ್ರತೆ ಇಲ್ಲವಾಗಿದೆ. ನಿವೃತ್ತಿಯ ನಂತರ ಪೆನ್ಷನ್ ಸೌಲಭ್ಯ ಕೊಡಬೇಕು. ಆದರೆ ಯಾವ ಸರ್ಕಾರ ಗಳು ಗಮನಿಸಲೇ ಇಲ್ಲ. ಎಸ್.ವರಲಕ್ಷ್ಮಿ ರಾಜ್ಯ ಪ್ರಧಾನ ಕಾರ್ಯದರ್ಶಿ. ನೌಕರರಿಗೆ ಕೆಲಸಗಳ ಒತ್ತಡವನ್ನು ಕಡಿಮೆ ಮಾಡುವ ನೆಪ ನೀಡಿ ಅಂಗನ ವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿವೆ. ಇದು ಜನ ವಿರೋಧಿ ನೀತಿ. ಜಾಗತೀಕರಣದ ನಂತರ ಸರ್ಕಾರದ ನೀತಿಗಳೇ ಬದ ಲಾಗುತ್ತಿವೆ. ಸರ್ಕಾರಗಳ ಕ್ರಮದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ದೊರೆತಿಲ್ಲ. ಧರ್ಮೇಶ್, ಸಿ.ಐ.ಟಿ.ಯು. ಸರ್ಕಾರದ ಆರ್ಥಿಕ ನೀತಿಗಳು ಈ ಎಲ್ಲಾ ಅವಘಡಗಳಿಗೆ ಕಾರಣವಾಗಿದೆ. ಖಾಸಗೀಕರಣ ಮಾಡುವುದು ಘನ ಘೊರ. ಅಂಗನವಾಡಿ ಕಾರ್ಯಕರ್ತೆ ಯರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವುದು ಸರ್ಕಾರದ ಕರ್ತವ್ಯ.

No Comments to “ಅಂಗನವಾಡಿ ನೌಕರರ ಅರಣ್ಯರೋದನ…”

add a comment.

Leave a Reply

You must be logged in to post a comment.