ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ರ್ಯಾಲಿ

ಹಾಸನ : ಅಂಗನವಾಡಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಗುರು ವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಎರಡು ದಿವಸ ನಡೆಯುವ ಅಂಗನ ವಾಡಿ ನೌಕರರ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧ ಭಾಗ ಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು, ಬಸ್ ನಿಲ್ದಾಣ ಸನಿಹದ ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದರು. ಮಧ್ಯಾಹ್ನ ೧೨-೩೦ರ ವೇಳೆಯಲ್ಲಿ ಮೆರವಣಿಗೆ ಆರಂಭಿಸಿದರು. ಮೆರವಣಿ ಗೆಯು ಬಸ್ ನಿಲ್ದಾಣ ರಸ್ತೆ, ಕಸ್ತೂರಿ ಬಾ ರಸ್ತೆ, ಸುಭಾಷ್ ಚೌಕ, ಮಹಾವೀರ ವೃತ್ತ ಹಾಗೂ ಆರ್.ಸಿ.ರಸ್ತೆಯ ಮೂಲಕ ಸಮ್ಮೇಳನ ನಡೆಯುವ ಜಿಲ್ಲಾ ಸ್ಕೌಟ್್ಸ ಮತ್ತು ಗೈಡ್್ಸ ಮೈದಾನಕ್ಕೆ ಆಗಮಿಸಿ ದರು. ರ್ಯಾಲಿಯ ವೇಳೆ ಪ್ರತಿಭಟನಾ ಘೊಷಣೆಗಳನ್ನು ಕೂಗಿದರು. ಸೇವೆ ಖಾಯಮಾತಿ ಹಾಗೂ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಘೊಷಣೆಗಳು ಕೇಳಿ ಬಂದವು. ನಂತರ ೨ ದಿವಸ ನಡೆಯುವ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡ ಲಾಯಿತು.

No Comments to “ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ರ್ಯಾಲಿ”

add a comment.

Leave a Reply

You must be logged in to post a comment.