೧೭೯೦ ತೆರೆದ ಬಾವಿ ಪುನಶ್ಚೇತನಕ್ಕೆ ೭೪ ಲಕ್ಷ ರೂ. ನೆರವು

ಹಾಸನ : ಕೇಂದ್ರ ಸರ್ಕಾರದ ನೂತನ ತೆರೆದ ಬಾವಿಗಳ ಕೃತಕ ಮರುಜಲ ಪೂರಣೆ ಯೋಜನೆಯ ಅಡಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ೧೭೯೦ ತೆರೆದ ಬಾವಿಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ೭೪ ಲಕ್ಷ ರೂ.ಗಳ ನೆರವು ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಪಂಚಾ ಯತ್ ಹಾಸನ ಮತ್ತು ನಬಾಡ್ರ್, ಹಾಸನ ಇವುಗಳ ಸಂಯುಕ್ತ ಆಶ್ರಯದಲ್ಲಿಕೇಂದ್ರ ಪುರಸ್ಕೃತ ತೆರೆದ ಬಾವಿ (ಡಗ್ವೆಲ್) ಕೃತಕ ಮರು ಜಲ ಪೂರಣೆ ಯೋಜನೆಕುರಿತು ಜಿಲ್ಲೆಯ ಬ್ಯಾಂಕುಗಳ ಮತ್ತು ಅನುಷ್ಠಾನ ಇಲಾಖಾಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು. ಇದು ನೂತನವಾದ ಯೋಜನೆ ಯಾಗಿದ್ದು, ದೇಶಾದ್ಯಂತ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದಕ್ಕೆ ಕೇಂದ್ರ ಸರ್ಕಾರವು ೧೮೭೧ ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಕರ್ನಾಟಕ ರಾಜ್ಯಕ್ಕೆ ೧೯ ಕೋಟಿ ರೂ.ಗಳನ್ನು ನೀಡಿದೆ. ಈ ಯೋಜನೆಯು ದೇಶದ ೭ ರಾಜ್ಯ ಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು, ನಮ್ಮ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಂದಿದೆ ಎಂದರು. ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಹಾಸನ ತಾಲ್ಲೂಕುಗಳಲ್ಲಿ ಈ ಯೋಜನೆ ಯನ್ನು ಆರಂಭಿಸಲಾಗಿದ್ದು, ೧೭೯೦ ತೆರೆದ ಬಾವಿಗಳನ್ನು ಗುರುತಿಸಿ ಅವುಗಳ ಪುನಶ್ಚೇತನಕ್ಕಾಗಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಎಂದು ತಿಳಿಸಿದ ಅಧ್ಯಕ್ಷರು, ಜಿಲ್ಲೆಗೆ ನಿಗದಿಪಡಿಸಿ ನೀಡಿರುವ ನೆರವು ಧನ ಬಹಳಷ್ಟು ಕಡಿಮೆ ಪ್ರಮಾಣದಲ್ಲಿದ್ದು, ಅದನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿ ಸಿದ್ದ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮ ನಿಂಗಪ್ಪ ಈ ಯೋಜನೆಯನ್ನು ಯಶಸ್ಸುಗೊಳಿ ಸಲು ಅನುಷ್ಠಾನ ಅಧಿ ಕಾರಿಗಳೊಂದಿಗೆ ಕೆಳಹಂತದ ಚುನಾಯಿತ ಪ್ರತಿನಿಧಿಗಳು ಸಹಕರಿಸಿದಲ್ಲಿ ಹೆಚ್ಚಿನ ಪ್ರಯೋಜನ ಕಾಣಬಹುದೆಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಶಂಕರನಾರಾಯಣ ಅವರು, ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿರುವುದನ್ನು ತಡೆಗಟ್ಟಲು ಈ ಯೋಜನೆಯು ಬಹಳ ಉಪಕಾರಿಯಾಗಲಿದ್ದು, ಕೇಂದ್ರ ಸರ್ಕಾರವು ಜಿಲ್ಲೆಗೆ ನೀಡಿರುವ ನೆರವು ಧನವನ್ನು ಸದುಪ ಯೋಗವಾಗುವಂತೆ ನೋಡಿ ಕೊಳ್ಳುವ ಜವಾಬ್ದಾರಿ ಅನುಷ್ಠಾನ ಅಧಿಕಾರಿಗಳ ದ್ದಾಗಿರುವುದರಿಂದ ಈ ದಿಸೆಯಲ್ಲಿ ಆದ್ಯತೆನೀಡುವಂತೆ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಾಗಾರದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ನಬಾಡ್ರ್ನ ಸಹಾಯಕ ಮಹಾಪ್ರಬಂದಕ ರಾಜಶೇಖರ್, ಈ ಯೋಜನೆ ಯನ್ನು ಅಳವಡಿಸಿ ಕೊಳ್ಳುವ ರೈತರಿಗೆ ಕೆಲಸ ಆರಂಭಿಸುವ ಮುನ್ನವೇ ಅದಕ್ಕೆ ತಗಲುವ ವೆಚ್ಚ ಪೂರ್ಣ ಮೊತ್ತದ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು ಎಂದರು. ಈ ಯೋಜನೆ ಮೂಲಕ ಕೃಷಿ ಉತ್ಪಾದನೆಯನ್ನು ದುಪ್ಪಟ್ಟುಗೊಳಿ ಸುವುದು ಹಾಗೂ ಅಂತರ್ಜಲದ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಈ ಯೋಜನೆಯಡಿ ಕ್ರಮ ಕೈಗೊಳ್ಳಲು ತಡಮಾಡದೆ ಸಾಲವನ್ನು ನೀಡುವಂತೆ ಕಾರ್ಯಾಗಾರ ದಲ್ಲಿ ಉಪಸ್ಥಿತರಿದ್ದ ಬ್ಯಾಂಕ್ ಅಧಿ ಕಾರಿಗಳಿಗೆ ಸೂಚಿಸಿದರು. ವಿವಿಧ ಬ್ಯಾಂಕುಗಳ ಅಧಿಕಾರಿ ಗಳು, ಅನುಷ್ಠಾನ ಇಲಾಖಾಧಿ ಕಾರಿಗಳು ಉಪಸ್ಥಿತರಿದ್ದರು. ವೀಡಿಯೋ ಚಿತ್ರ ಪ್ರದರ್ಶನದ ಮೂಲಕ ಅಂತರ್ಜಲ ಮಂಡಳಿಯ ಬಿ.ಜಿ. ಜೋಯಿಷ್ ಮೈಸೂರು ಜಲಾನಯನ ಅಭಿವೃದ್ಧಿ ಇಲಾಖೆ ತರಬೇತಿ ಕೇಂದ್ರದ ಟಿ.ಎಸ್. ಉಮೇಶ ಚಂದ್ರ ಹಾಗು ಕಂದಲಿಯ ಮುಖ್ಯಸ್ಥ ಕೆ.ಸಿ. ಶಶಿಧರ್ ಸಂಪನ್ಮೂಲ ಅಧಿಕಾರಿಗಳಾಗಿ ಭಾಗವಹಿಸಿದ್ದರು. ಕೇಂದ್ರೀಯ ಅಂತರ್ಜಲ ಮಂಡಳಿ ನೈಋತ್ಯ ವಲಯ ಪ್ರಾಂತೀಯ ನಿರ್ದೇಶಕ ಟಿ.ಎಂ. ಸುಣಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪ ಕಾರ್ಯದಶಿರ ಕರಿಯಪ್ಪ ಸ್ವಾಗತಿಸಿದರು.

No Comments to “೧೭೯೦ ತೆರೆದ ಬಾವಿ ಪುನಶ್ಚೇತನಕ್ಕೆ ೭೪ ಲಕ್ಷ ರೂ. ನೆರವು”

add a comment.

Leave a Reply

You must be logged in to post a comment.