ಕುಳುವಾರು ಪಟ್ಟಿಯಂತೆ ಅಂದಾಜಿಗೆ ಆದೇಶ

ಹಾಸನ : ನೆರೆ ಹಾಗೂ ಅಂಗ ಮಾರಿ ರೋಗಕ್ಕೆ ತುತ್ತಾದ ಆಲೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಸದಸ್ಯ ಹೆಚ್.ಡಿ.ದೇವೇ ಗೌಡ ಪ್ರವಾಸ ನಡೆಸಿ, ಹಾನಿ ವೀಕ್ಷಿಸಿದರು. ಹಳೆ ಆಲೂರು ಸಮೀಪದ ವಾಟೆ ಹೊಳೆ ನಾಲೆಯ ೩೬ನೇ ಕಿಲೋ ಮೀಟರ್ನಲ್ಲಿ ನಾಲೆ ಒಡೆದು ಕಿಗ್ಗಟ್ಟದ ಕೆರೆವರೆಗೂ ಸುಮಾರು ೫೦೦ ಎಕರೆ ಗದ್ದೆಗಳಿಗೆ ನೀರು ನುಗ್ಗಿ ಭತ್ತ ಹಾಗೂ ಶುಂಠಿ ಬೆಳೆಯನ್ನು ನಿರ್ನಾಮ ಮಾಡಿದ್ದು, ದೇವೇಗೌಡ ಸ್ಥಳ ಪರಿ ಶೀಲನೆ ನಡೆಸಿ, ನೊಂದ ರೈತರ ಅಹ ವಾಲು ಆಲಿಸಿದರು. ಒಡೆದ ನಾಲೆಯ ಬದುವನ್ನು ಮರಳು ಮೂಟೆಗಳಿಂದ ಅಡ್ಡಗಟ್ಟ ಲಾಗಿತ್ತು. ಪ್ರವಾಹದೊಂದಿಗೆ ಕೊಚ್ಚಿ ಕೊಂಡು ಬಂದ ಮಣ್ಣು, ಸುತ್ತಮುತ್ತಲ ಗದ್ದೆಗಳನ್ನು ಆವರಿಸಿ ಬೆಳೆಯನ್ನು ನಾಶ ಮಾಡಿತ್ತು. ಕುಳುವಾರು ಪಟ್ಟಿಯಂತೆ ನಷ್ಟದ ಅಂದಾಜನ್ನು ಸಿದ್ಧಪಡಿಸುವಂತೆ ದೇವೇ ಗೌಡ ಅವರು ತಮ್ಮೊಂದಿಗಿದ್ದ ತಹಸೀ ಲ್ದಾರ್ ಪ್ರಸಾದ್ ಅವರಿಗೆ ಸೂಚಿಸಿದರು. ಅಲ್ಲಿಂದ ಮರಸು ಹೊಸಹಳ್ಳಿಗೆ ತೆರಳಿದ ದೇವೇಗೌಡರು, ರಘುನಾಥ್ ಎಂಬುವವರ ಹೊಲದಲ್ಲಿ ಅಂಗ ಮಾರಿಗೆ ತುತ್ತಾಗಿ ದುರ್ವಾಸನೆ ಬೀರು ತ್ತಿದ್ದ ಆಲೂಗೆಡ್ಡೆ ಬೆಳೆಯನ್ನು ವೀಕ್ಷಿಸಿದರು. ರೈತರಾದ ರಘುನಾಥ್, ರಾಜೇ ಗೌಡ, ಮಂಜುನಾಥ್ ಎಂಬುವವರ ತಲಾ ೫ ಎಕರೆ, ಶ್ರೀನಿವಾಸ್ ಎಂಬು ವವರ ೬ ಎಕರೆ, ಶಾಂತರಾಜ್ ಎಂಬು ವವರ ೩ ಎಕರೆ ಜಮೀನಿನಲ್ಲಿ ಬಿತ್ತಿದ್ದ ಆಲೂಗೆಡ್ಡೆ, ಸಂಪೂರ್ಣ ಕರಗಿದ್ದು, ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ಅರಕಲಗೂಡು : ಅಂಗಮಾರಿ ರೋಗದಿಂದಾಗಿ ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರಿಗೆ ಹೆಕ್ಟೇರ್ಗೆ ೨೫,೦೦೦ ರೂ. ಪರಿಹಾರ ನೀಡಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮತ್ತೊಮ್ಮೆ ಒತ್ತಾಯ ಮಾಡಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿ ಯಲ್ಲಿ ಆಲೂಗೆಡ್ಡೆ ಬೆಳೆ ಹಾನಿಗೀಡಾದ ಪ್ರದೇಶಗಳಿಗೆ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದ ಅವರು, ಪರಿಹಾರ ಕ್ಕಾಗಿ ತಾವು ಸರ್ಕಾರವನ್ನು ಒತ್ತಾಯಿಸು ವುದಾಗಿಯೂ, ರೈತರು ದ್ವಿದಳ ಧಾನ್ಯ ಗಳನ್ನು ಹೆಚ್ಚಾಗಿ ಬೆಳೆಯಬೇಕೆಂದೂ ಸಲಹೆ ನೀಡಿದರು. ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಒದಗಿಸಬೇಕೆಂದು ದೇವೇಗೌಡರು, ಅರಕಲಗೂಡು ತಹ ಸೀಲ್ದಾರ್ ಮಧುಕೇಶ್ವರ್ ಅವರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ತಾಲ್ಲೂಕು ಜನತಾ ದಳ (ಎಸ್) ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹಾಜರಿದ್ದರು.

No Comments to “ಕುಳುವಾರು ಪಟ್ಟಿಯಂತೆ ಅಂದಾಜಿಗೆ ಆದೇಶ”

add a comment.

Leave a Reply

You must be logged in to post a comment.