ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆ

ಹಾಸನ : ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ಹಿಂತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿ ಡಿ.ವೈ.ಎಫ್.ಐ. ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಿಲ್ದಾಣದಲ್ಲಿ ಜಮಾಯಿಸಿದ್ದ ಪ್ರತಿ ಭಟನಾಕಾರರು, ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ, ಬೆಲೆ ಏರಿಕೆ ಯನ್ನು ಖಂಡಿಸಿದರು. ಸಂಸ್ಥೆಯ ಸಂಪನ್ಮೂಲ ಕ್ರೋಢೀ ಕರಣಕ್ಕೆ ದರ ಹೆಚ್ಚಳ ಮಾಡಲಾಗಿದೆ ಎಂಬುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ಪ್ರತಿಭಟನಾಕಾರರು ಟೀಕಿಸಿ ದರು. ಖಂಡನೆ : ಶಾಸಕರ ಖರೀದಿ ಪ್ರಕ್ರಿಯೆಗೆ ಬೆಲೆ ಏರಿಕೆ ಮೂಲಕ ಸಂಪನ್ಮೂಲ ಕ್ರೋಢೀಕರಿಸಲಾಗುತ್ತಿದೆ. ಕೆಲಸ ಗೊತ್ತಿಲ್ಲದ ಸಚಿವ ಆರ್. ಅಶೋಕ್ ಹಾಗೂ ಜಗ್ಗೇಶ್ ಅವ ರಂತಹವರ ಕೈಗೆ ಸಾರಿಗೆ ನಿಗಮ ಸಿಕ್ಕರೆ ಅದು ಜನಪರವಾಗಲು ಹೇಗೆ ಸಾಧ್ಯ? ಎಂದು ಸಿ.ಪಿ.ಐ.(ಎಂ) ಪ್ರಕಟಣೆಯಲ್ಲಿ ಪ್ರಶ್ನಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು ಇತ್ಯಾದಿ ಕಾರಣಗಳಿಂದಾಗಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದು, ಬಿ.ಜೆ.ಪಿ. ಸರ್ಕಾರದ ಶತದಿನೋತ್ಸವದ ಕೊಡುಗೆಯಾಗಿ ಬಸ್ ದರ ಏರಿಸ ಲಾಗಿದೆ ಜನಪರ ಆಡಳಿತದ ಭರವಸೆ ನೀಡಿ ಕೇವಲ ಶಾಸಕರ ಖರೀದಿಯಲ್ಲೇ ಬಿ.ಜೆ.ಪಿ. ಮುಳುಗಿದೆ ಎಂದು ಟೀಕಿಸಿದೆ.

No Comments to “ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆ”

add a comment.

Leave a Reply

You must be logged in to post a comment.