೭೫ ಕೋಟಿ ರೂ. ಆಲೂ ಪರಿಹಾರಕ್ಕೆ ದೇವೇಗೌಡ ಒತ್ತಡ

ಹಾಸನ : ನಷ್ಟಕ್ಕೊಳಗಾಗಿ ರುವ ಜಿಲ್ಲೆಯ ಆಲೂಗೆಡ್ಡೆ ರೈತ ರಿಗೆ ೭೫ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕೆಂದು ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಅವರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ನೆರೆ ಹಾಗೂ ಬೆಳೆ ಹಾನಿ ಸಮೀಕ್ಷೆ ನಡೆಸಿದ ದೇವೇ ಗೌಡರು, ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ, ರೋಗಕ್ಕೀಡಾಗಿರುವ ಆಲೂಗೆಡ್ಡೆ ಗಿಡ ವನ್ನು ಪ್ರದರ್ಶಿಸಿದರು. ಅಮೇರಿಕಾದಲ್ಲಿರುವ ಮುಖ್ಯ ಮಂತ್ರಿ ಸೆಪ್ಟೆಂಬರ್ ೬ರಂದು ಬೆಂಗ ಳೂರಿಗೆ ವಾಪಸ್ಸಾಗಲಿದ್ದು, ಅವ ರೊಂದಿಗೆ ಪರಿಹಾರ ಕುರಿತು ಚರ್ಚಿಸಿ ಅವರಿಂದ ಸಿಗುವ ಭರವಸೆ ಮೇಲೆ ಹೋರಾಟ ನಿರ್ಧಾರವಾಗಲಿದೆ ಎಂದರು. ನೆರೆ ಹಾವಳಿ ಹಾಗೂ ಬೆಳೆ ನಷ್ಟದಿಂದ ರಾಜ್ಯ ತತ್ತರಿಸುತ್ತಿದ್ದರೂ ಶಾಸಕರು, ಸಚಿವರು ಹಾಗೂ ಅಧಿ ಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಅಮೇರಿಕಾಕ್ಕೆ ತೆರಳಿದ್ದಾರೆ ಎಂದು ೨ ಸಾವಿರ ರೂ. ಕೊಟ್ಟರೂ ಪ್ರಯೋ ಜನವಿಲ್ಲ. ಹೆಕ್ಟೇರ್ಗೆ ೨೫ ಸಾವಿರ ರೂ. ಪರಿಹಾರ ನೀಡಲೇಬೇಕು ಎಂದು ಒತ್ತಾ ಯಿಸಿದರು. ಸ್ವಚ್ಛಗೊಳಿಸಬೇಕಿದೆ. ವೈಜ್ಞಾನಿಕ ವಾಗಿ ಸ್ವಚ್ಛಗೊಳಿಸಲು ರೈತರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಸೂಚಿಸಿದ ಅವರು, ಮುಂದಿನ ಬೆಳೆಗೆ ಅನುಕೂಲ ವಾಗುವಂತೆ ರೈತರಿಗೆ ಉಚಿತ ವಾಗಿ ಬಿತ್ತನೆ ಬೀಜ ಹಾಗೂ ಗೊಬ್ಬರ ನೀಡ ಬೇಕು. ಜಿಲ್ಲಾ ಸಹಕಾರ ಬ್ಯಾಂಕುಗಳು ಕನಿಷ್ಠ ಸಾವಿರ ರೂ. ಸಾಲವನ್ನು ತಕ್ಷಣ ವಿತರಿಸಬೇಕು ಎಂದು ತಮ್ಮೊಂದಿಗಿದ್ದ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವರಾಂ ಅವರಿಗೆ ತಿಳಿಸಿ ದರು. ಜಿಲ್ಲೆಯಲ್ಲಿ ೬೮ ಸಾವಿರ ರೈತರು ಆಲೂಗೆಡ್ಡೆ ಬಿತ್ತಿದ್ದು, ಇವರಲ್ಲಿ ೩ ಸಾವಿರ ಮಂದಿ ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಇವರಿಗೆ ನೆರವಾಗಲು ವಿಮೆ ಮಾಡಿಸುವ ಅವಧಿಯನ್ನು ಸೆಪ್ಟೆಂಬರ್ವರೆಗೂ ವಿಸ್ತರಿಸಬೇಕು ಎಂದರು. ಹೊಸ ಬೆಳೆಗಾಗಿ ರಾಗಿ, ಜೋಳ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಗಳನ್ನು ದಾಸ್ತಾನಿಡುವಂತೆ ಅಧಿಕಾರಿ ಗಳಿಗೆ ಆದೇಶಿಸಿದ ಅವರು, ಕಳೆದ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿ ಬಿದ್ದ ಮಳೆಯಿಂದ ಕೆರೆ, ಕಟ್ಟೆ , ನಾಲೆ ಒಡೆದಿದ್ದು, ರೈತರಿಗೆ ಅಪಾರ ನಷ್ಟ ಉಂಟು ಮಾಡಿವೆ. ಪ್ರವಾಹ ನಿಂತ ನಂತರ ಸ್ಥಳ ಸಮೀಕ್ಷೆ ನಡೆಸಿ ನಷ್ಟದ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರನಾರಾಯಣ್ ಅವರಿಗೆ ಸೂಚಿಸಿ ದರು. ಕೆರೆ ಕಟ್ಟೆ ಒಡೆದು ನುಗ್ಗುತ್ತಿರುವ ಪ್ರವಾಹವನ್ನು ತಡೆಗಟ್ಟಲು ರಿಂಗ್ ಬದುಗಳನ್ನು ನಿರ್ಮಿಸುವಂತೆ ಅವರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಅಭಿವೃದ್ದಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಂತೆ ಹುನ್ನಾರ ನಡೆಯುತ್ತಿದೆ. ಮುಖ್ಯಮಂತ್ರಿಗಳು ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸದೆ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರೆ ಅಭಿವೃದ್ಧಿ ಕೆಲಸ ಗಳಿಗೆ ಅಡ್ಡಿಯಾಗದು ಎಂದು ದೇವೇ ಗೌಡ ಕಿವಿಮಾತು ಹೇಳಿದರು. ಬಿಹಾರದ ಪ್ರವಾಹಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ೧ ಸಾವಿರ ಕೋಟಿ ರೂ. ಪರಿಹಾರ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ರಾಜ್ಯದ ಅತಿವೃಷ್ಟಿ ಹಾನಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ನೆರವು ಪಡೆಯುವಂತೆ ಅವರು ಸಲಹೆ ನೀಡಿ ದರು. ನಗರದ ವಿಮಾನ ನಿಲ್ದಾಣ ಕಾಮ ಗಾರಿ ಶೀಘ್ರದಲ್ಲೇ ಆರಂಭಗೊಳ್ಳ ಲಿದ್ದು, ಹಾಸನ-ಬೆಂಗಳೂರು ರೈಲು ಮಾರ್ಗ ಕುರಿತು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವ ರೊಂದಿಗೆ ಚರ್ಚಿಸಿದ್ದಾಗಿ ಅವರು ತಿಳಿಸಿದರು.

No Comments to “೭೫ ಕೋಟಿ ರೂ. ಆಲೂ ಪರಿಹಾರಕ್ಕೆ ದೇವೇಗೌಡ ಒತ್ತಡ”

add a comment.

Leave a Reply

You must be logged in to post a comment.