ಪೀಟರ್ಸನ್-ಪ್ಲಿಂಟಾಫ್ಧೋನಿಗಿಂತತುಟ್ಟಿ :೭.೪೪ಕೋಟಿರೂ.ಗೆಬಿಕರಿ

ಪಣಜಿ : ಇಡೀ ವಿಶ್ವವೇ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ಐ.ಪಿ.ಎಲ್. ಆಟಗಾರರ ಖರೀದಿಗೆ ಮಾತ್ರ ಯಾವುದೇ ಕೊರತೆಯಾಗಿಲ್ಲ. ಕೋಟಿ ಕೋಟಿ ಮೊತ್ತಕ್ಕೆ ಆಟಗಾರರು ಹರಾಜಾಗಿದ್ದಾರೆ. ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಹಾಗೂ ಆ್ಯಂಡ್ರೂ ಪ್ಲಿಂಟಾಫ್ ಅತ್ಯಂತ ದುಬಾರಿಗೆ ಮಾರಾಟವಾಗಿದ್ದು, ಮಾಂತ್ರಿಕ ನಾಯಕ ಮಹೇಂದ್ರಸಿಂಗ್ ಧೋನಿ ಆವರನ್ನು ಮೀರಿಸಿದ್ದಾರೆ. ಮದ್ಯದ ದೊರೆ ವಿಜಯ ಮಲ್ಯ ರಾಯಲ್ ಚಾಲೆಂಜರ್ಸ್ಗಾಗಿ ಅತೀ ಹೆಚ್ಚು ಬಿಡ್ ಕೂಗಿ ಪೀಟರ್ ಸನ್ ಅವರನ್ನು ೭.೪೪ ಕೋಟಿ ರೂ.ಗೆ (೧.೫೫ ದಶಲಕ್ಷ ಡಾಲರ್) ಕೊಂಡರೆ, ಅದೇ ಬೆಲೆಗೆ ಆ್ಯಂಡ್ರೂ ಫ್ಲಿಂಟಾಫ್ನ್ನು ಚೆನ್ನೈನ ಸೂಪರ್ ಕಿಂಗ್ ಖರೀದಿಸಿತು. ಆಸ್ಟ್ರೇಲಿಯಾದ ವೇಗದ ಬೌಲರ್ ಶಾನ್ ಪೆಟ್ ಅವರನ್ನು ರಾಜಸ್ತಾನ ರಾಯಲ್ಸ್ ೧.೮ ಕೋಟಿ ರೂ.ಗೆ (೩,೭೫,೦೦೦ ಡಾಲರ್)ಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಜೆ.ಪಿ.ಡ್ಯುಮಿನಿ ಅವರನ್ನು ೪.೫೬ ಕೋಟಿ (೯,೫೦,೦೦೦ ಡಾಲರ್) ರೂ.ಗಳಿಗೆ ಖರೀದಿಸಿತು. ಡೆಕ್ಕನ್ ಚಾಲೆಂಜರ್ಸ್ ತಂಡವು ವೆಸ್ಟ್ ಇಂಡೀಸ್ನ ವೇಗದ ಬೌಲರ್ ಫೀಡಲ್ ಎಡ್ವರ್ಡ್ ಅವರನ್ನು ೭೨ ಲಕ್ಷ ರೂ. (೧.೫ ಲಕ್ಷ ಡಾಲರ್)ಗಳಿಗೆ ಕೊಂಡಿತು. ಇಂಗ್ಲೆಂಡಿನ ಓವೈಸ್ ಷಾ ಮತ್ತು ಪಾಲ್ ಕಾಲಿಂಗ್ವುಡ್ ಅವರು ತಲಾ ೧.೩೨ ಕೋಟಿ ರೂ. (೨.೭೫ ಲಕ್ಷ ಡಾಲರ್)ಗಳಿಗೆ ಡೆಲ್ಲಿಯ ಡೆವಿಲ್ಸ್ ತಂಡದ ಪಾಲಾದರು. ಇಂಗ್ಲೆಂಡಿನ ರವಿ ಬೋಪರಾ ೨.೧೬ ಕೋಟಿ ರೂ.ಗಳಿಗೆ, ಪಂಜಾಬ್ ಕಿಂಗ್ಸ್ ತಂಡದ ವಶವಾದರೆ, ಇಂಗ್ಲೆಂಡಿನ ಟಿ.ಆಂಡರ್ಸನ್ ೩.೧೨ ಕೋಟಿ ರೂ.ಗೆ, ರಾಜಸ್ತಾನ ರಾಯಲ್ಸ್ ಪಾಲಾದರು. ಶ್ರೀಲಂಕಾದ ತಿಲನ್ ತುಷಾರಾ ಅವರನ್ನು ೬೭ ಲಕ್ಷ ರೂ.ಗಳಿಗೆ,ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿತು. ನ್ಯೂಜಿಲೆಂಡ್ನ ಜೆಸ್ಸಿ ರೈಡರ್ ಅವರನ್ನು ೭೬.೮ ಲಕ್ಷ ರೂ.ಗಳಿಗೆ ರಾಯಲ್ ಚಾಲೆಂಜರ್ಸ್ , ವೆಸ್ಟ್ ಇಂಡೀಸ್ನ ಗ್ರೆಮ್ ಸ್ಮಿತ್ ಅವರನ್ನು ಡೆಕ್ಕನ್ ಚಾರ್ಜಸ್ ತಂಡ ೪೮ ಲಕ್ಷ ರೂ.ಗಳಿಗೆ ಕೊಂಡಿತು. ಶ್ರೀಲಂಕಾದ ಚಾಮುರಾ ಕಪು ಗೆದರ ಹಾಗೂ ಬ್ರಾಡ್ ಹೆಡ್ಡಿನ್ಸ್, ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್ ಅವರನ್ನು ಖರೀದಿಸಲು ಯಾರೂ ಆಸಕ್ತಿ ತೋರಲಿಲ್ಲ. ನ್ಯೂಜಿಲೆಂಡ್ನ ಕೇಲ್ ಮಿಲ್ಸ್ ಅವರು ೭೨ ಲಕ್ಷ ರೂ.ಗಳಿಗೆ ಇಂಡಿ ಯನ್ಸ್ ತಂಡಕ್ಕೆ ಬಿಕರಿಯಾದರು. ಇಲ್ಲಿ ನಡೆದ ಹರಾಜಿನಲ್ಲಿ ೮ ಪ್ರೀಮಿಯರ್ ಲೀಗ್ ಪಾಂಚೈಸಿಗಳು ಪಾಲ್ಗೊಂಡು ೧೩.೫೯ ಮಿಲಿಯನ್ ಡಾಲರ್ ಹಣ ತೊಡಗಿಸಿ, ೧೭ ಆಟಗಾರರನ್ನು ಖರೀ ದಿಸಿದವು. ಆಸ್ಟ್ರೇಲಿಯಾದ ೧೮, ಇಂಗ್ಲೆಂಡ್ನ ೭, ಶ್ರೀಲಂಕಾದ ೫, ನ್ಯೂಜಿಲೆಂಡ್ನ ೨, ದಕ್ಷಿಣ ಆಫ್ರಿಕಾದ ೭, ವೆಸ್ಟ್ ಇಂಡೀಸ್ ೬, ಬಾಂಗ್ಲಾ ದೇಶದ ೪ ಆಟ ಗಾರರು ಹರಾಜಿನಲ್ಲಿ ಪಾಲ್ಗೊಂಡಿ ದ್ದರು. ಹರಾಜುಗಳು ಒಟ್ಟು ಮೂರು ಸುತ್ತಿ ನಲ್ಲಿ ನಡೆದವು. ಕಳೆದ ಐ.ಪಿ.ಎಲ್. ಋತುಗಿಂತ ಈಬಾರಿ ಹರಾಜಿನಲ್ಲಿ ಡಾಲರ್ ಸುರಿ ಮಳೆಯೇ ಆಯಿತು. ಪಾಕಿಸ್ತಾನದ ಆಟಗಾರರು ಐ.ಪಿ.ಎಲ್.ನಲ್ಲಿ ಪಾಲ್ಗೊಳ್ಳದ ಹಿನ್ನಲೆಯಲ್ಲಿ ಇತರ ದೇಶದ ಆಟಗಾರರಿಗೆ ಬೇಡಿಕೆ ಅತಿ ಯಾಗಿತ್ತು. ಕಳೆದ ಐ.ಪಿ.ಎಲ್.ನಲ್ಲಿ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿ ದಾಖಲೆ ಸ್ಥಾಪಿಸಿದ್ದರು.

No Comments to “ಪೀಟರ್ಸನ್-ಪ್ಲಿಂಟಾಫ್ಧೋನಿಗಿಂತತುಟ್ಟಿ :೭.೪೪ಕೋಟಿರೂ.ಗೆಬಿಕರಿ”

add a comment.

Leave a Reply

You must be logged in to post a comment.