ಟ್ವೆಂಟಿ-೨೦ಪಂದ್ಯ:ಭಾರತಕ್ಕೆ ಗೆಲುವು

ಕೊಲಂಬೋ : ಭಾರತ- ಶ್ರೀಲಂಕಾ ಏಕದಿನ ಸರಣಿಯಲ್ಲಿ ಗೆಲುವಿನ ನಗೆ ಬೀರಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಲಂಕಾ ವಿರುದ್ಧ ಟ್ವೆಂಟಿ-೨೦ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-೨೦ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು ಬಗ್ಗು ಬಡಿಯಿತು. ಟಾಸ್ ಗೆದ್ದ ಶ್ರೀಲಂಕಾ, ನಿಗದಿತ ೨೦ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೭೧ ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಭಾರತ, ೭ ವಿಕೆಟ್ ನಷ್ಟಕ್ಕೆ ೧೭೪ ರನ್ ಗಳಿಸಿ ತನ್ನ ಜಯ ದಾಖಲಿಸಿತು. ಭಾರತದ ಪರ ಯುವರಾಜ್ ಸಿಂಗ್ ೩೨ ರನ್ಗಳನ್ನು ಕಲೆ ಹಾಕಿ ಗೆಲುವಿಗೆ ಶ್ರಮಪಟ್ಟರೆ, ವೇಗದ ಬೌಲರ್ ಯೂಸೂಫ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶ್ರೀಲಂಕಾ ತಂಡ ಭಾರೀ ರನ್ ಗಳನ್ನು ಪೇರಿಸಿತಾದರೂ ಭಾರತದ ಭರ್ಜರಿ ಬ್ಯಾಟಿಂಗ್ಗೆ ಶರಣಾಗ ಬೇಕಾಯಿತು.

No Comments to “ಟ್ವೆಂಟಿ-೨೦ಪಂದ್ಯ:ಭಾರತಕ್ಕೆ ಗೆಲುವು”

add a comment.

Leave a Reply