ಏಕದಿನಕ್ಕೂ ರೆಫರಲ್ ವ್ಯವಸ್ಥೆ : ಭಜ್ಜಿ

ಜಾಲಂಧರ್ : ತಪ್ಪು ಅಂಪೈರಿಂಗ್ ನಿರ್ಣಯ ಗಳನ್ನು ತಡೆಗಟ್ಟು ವ ಸಲುವಾಗಿ ಅಂಪೈರ್ ರೆಫರಲ್ ವ್ಯವಸ್ಥೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಗಳಲ್ಲೂ ಅಳ ವಡಿಕೆಯಾಗಬೇಕು ಎಂದು ಭಾರರತದ ಖ್ಯಾತ ಸ್ಪಿನ್ನರ್ ಹರಭಜನ್ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಇದು ಜಾರಿಗೆ ಬಂದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಾದಂಥ ಅನ್ಯಾಯ ನಿವಾರಣೆಯಾಗುತ್ತದೆ ಎಂದು ಭಜ್ಜಿ ಹೇಳಿದ್ದಾರೆ. ವಿವಾದಾತ್ಮಕ ತೀರ್ಪಿನ ವಿರುದ್ಧ ಬ್ಯಾಟ್ಸ್ಮನ್ ಅಥವಾ ಬೌಲರ್ ಮೂರನೇ ಅಂಪೈರ್ಗೆ ಮನವಿ ಸಲ್ಲಿಸಲು ಅವಕಾಶ ವಿರುವ ಅಂಪೈರ್ ರೆಫರಲ್ ವ್ಯವಸ್ಥೆ ಒಂದು ಉತ್ತಮ ಆಟಕ್ಕೆ ರಹದಾರಿ ಎಂದು ಭಜ್ಜಿ ನುಡಿದಿದ್ದಾರೆ. ಒಂದು ವೇಳೆ ಈ ನಿಯಮ ಏಕದಿನ ಪಂದ್ಯಗಳಲ್ಲೂ ಜಾರಿಗೊಡಿದ್ದರೆ ಶ್ರೀಲಂಕಾದಲ್ಲಿ ಸಚಿನ್ಎ ಪ್ರಯೋ ಜನವಾಗುತ್ತಿತ್ತು ಎಂದು ಅವರ ತಿಳಿಸಿದ್ದಾರೆ. ಭಾರತ ಇತ್ತೀಚೆಗೆ ೪-೧ ರಲ್ಲಿ ಜಯ ಗಳಿಸಿದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಿದ ಮೂರೂ ಪಂದ್ಯ ಗಳಲ್ಲಿ ಸಚಿನ್ ಅನುಮಾನಾಸ್ಪದ ತೀರ್ಪಿಗೆ ಬಲಿಯಾಗಿದ್ದರು.

No Comments to “ಏಕದಿನಕ್ಕೂ ರೆಫರಲ್ ವ್ಯವಸ್ಥೆ : ಭಜ್ಜಿ”

add a comment.

Leave a Reply

You must be logged in to post a comment.