ಶ್ರೀಲಂಕಾ ಆಟಗಾರರ ಮೇಲೆ ಗುಂಡು

ಲಾಹೋರ್: ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ವಾಡಲು ಲಾಹೋರ್ನಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಮಂಗಳವಾರ ಬೆಳಿಗ್ಗೆ ಶೂಟಿಂಗ್ ನಡೆದ ಘಟನೆ ಉಪಖಂಡದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಸುವ ನಿರ್ಧಾರದ ಮೇಲೆ ಬೆದರಿಕೆಯ ಕಾರ್ಮೋಡ ಕವಿದಿದೆ. ಉಗ್ರರು ನಡೆಸಿದ ಈ ಗುಂಡಿನ ದಾಳಿಗೆ ಆರು ಆಟಗಾರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಲಂಕಾ ಕ್ರೀಡಾ ಸಚಿವರು ದೃಢಪಡಿಸಿದ್ದಾರೆ. ತಿಲನ್ ಸಮರವೀರ, ತರಂಗಾ ಪರನವಿಟಾನಾ, ತಿಲನ್ ತುಷಾರಾ, ಕುಮಾರ್ ಸಂಗಕ್ಕರಾ ಮತ್ತು ಅಜಂತಾ ಮೆಂಡಿಸ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ತಂಡದ ನಾಯಕ ಮಹೇಲಾ ಜಯವರ್ಧನ್ ಕೂಡ ಗಾಯಗೊಂಡಿದ್ದಾರೆಂದು ತಿಳಿಸಲಾಗಿದೆ. ಪಾಕಿಸ್ತಾನದ ಪೊಲೀಸರು ದುಷ್ಕರ್ಮಿಗಳ ರೇಖಾಚಿತ್ರವನ್ನು ಬಿಡಿಸುತ್ತಿದ್ದು, ಅವರ ಬಳಿ ಸ್ವಯಂ ಚಾಲಿತ ಬಂದೂಕುಗಳು ಇದ್ದವೆಂದು ದೃಢಪಟ್ಟಿದೆ. ಗಢಾಪಿ ಸ್ಟೇಡಿಯಂ ಹೊರಗೆ ಈ ದಾಳಿ ನಡೆದಿದ್ದು, ಶ್ರೀಲಂಕಾ ಆಟಗಾರರ ಬೆಂಗಾವಲು ಪಡೆ ಮೇಲೆ ಎರಡು ಗ್ರೆನೇಡ್ಗಳನ್ನು ಎಸೆದ ಬಂದೂಕುಧಾರಿಗಳು ಬಳಿಕ ಎಡಬಿಡದೇ ಗುಂಡಿನ ಮಳೆ ಸುರಿಸಿದರೆಂದು ತಿಳಿದುಬಂದಿದೆ. ಆರಂಭಿಕ ವರದಿಗಳ ಪ್ರಕಾರ ಶ್ರೀಲಂಕಾ ತಂಡವು ಲಿಬರ್ಟಿ ಚೌಕ್ನಿಂದ ಪೊಲೊ ಮೈದಾನದ ರಸ್ತೆ ಕಡೆ ಗಡಾಫಿ ಸ್ಟೇಡಿಯಂನತ್ತ ಬಸ್ಸಿನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದ್ದಕ್ಕಿ ದ್ದಂತೆ ಎರಡು ಗ್ರೆನೇಡ್ಗಳು ಬಸ್ನತ್ತ ತೂರಿ ಬಂತೆಂದು ಬಳಿಕ ಎಡಬಿಡದೇ ಗುಂಡಿನ ಸುರಿಮಳೆಯಾಯಿತೆಂದು ತಿಳಿದು ಬಂದಿದೆ. ಈ ದುರ್ಘಟನೆಯಲ್ಲಿ ಐವರು ಪೊಲೀಸರು ಜೀವ ಕಳೆದುಕೊಂಡಿದ್ದು, ಮೂವರಿಗೆ ಗಾಯಗಳಾಗಿವೆ.

No Comments to “ಶ್ರೀಲಂಕಾ ಆಟಗಾರರ ಮೇಲೆ ಗುಂಡು”

add a comment.

Leave a Reply

You must be logged in to post a comment.