ಮೊದಲ ಏಕದಿನ ಗೆದ್ದ ಭಾರತಕ್ಕೆ ೧-೦ ಮುನ್ನಡೆ

ನೇಷಿಯರ್ : ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ೫೩ ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಭಾರತ ಕ್ರಿಕೆಟ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯ ಪುರುಷ ಗೌರವಕ್ಕೆ ಪಾತ್ರರಾದರು. ಭಾರತದ ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯದಲ್ಲೇ ಮಳೆ ಬಾಧಿಸಿದ ಪರಿಣಾಮ ಓವರುಗಳ ಸಂಖ್ಯೆಯನ್ನು ೩೮ಕ್ಕೆ ಇಳಿಸಲಾಗತ್ತು. ನಿಗದಿತ ಓವರುಗಳಲ್ಲಿ ಭಾರತವು ನಾಲ್ಕು ವಿಕೆಟ್ ಕಳೆದುಕೊಂಡು ೨೭೩ ರನ್ಗಳ ಸವಾಲನ್ನು ನ್ಯೂಜಿಲೆಂಡ್ ತಂಡಕ್ಕೆ ನೀಡಿತ್ತು. ಆ ಬಳಿಕ ಕಿವೀಸ್ ಕೂಡ ಬ್ಯಾಟಿಂಗ್ ಆರಂಭಿಸಿದ ಬಳಿಕ ಮಳೆರಾಯ ಅಡ್ಡಿ ಬಂದ. ಆಗ ಡಕ್ವರ್ಥ್-ಲೂಯಿಸ್ ನಿಯಮ ದನ್ವಯ ನ್ಯೂಜಿಲೆಂಡ್ ಪಂದ್ಯ ಗೆಲ್ಲಲು ೨೮ ಓವರ್ಗಳಲ್ಲಿ ೨೧೬ ರನ್ಗಳ ಗುರಿಯನ್ನು ನೀಡಲಾಯಿತು. ಆದರೆ ಅದಾಗಲೇ ಕಿವೀಸ್ ದಾಂಡಿಗರಲ್ಲಿ ಬಹುತೇಕರು ಪೆವಿಲಿಯನ್ ಸೇರಿದ್ದ ರಿಂದ ಇದು ಅಸಾಧ್ಯವೇ ಆಗಿತ್ತು. ಅಂತಿಮವಾಗಿ, ನ್ಯೂಜಿಲೆಂಡ್ ೨೮ ಓವರ್ ಗಳಲ್ಲಿ ೯ ವಿಕೆಟ್ ಕಳೆದು ಕೊಂಡು ೧೭೨ ರನ್ಗಳನ್ನು ಮಾತ್ರ ಪೇರಿಸಲು ಶಕ್ತವಾಗಿ, ೫೩ ರನ್ನುಗಳ ಸೋಲೊಪ್ಪಿಕೊಂಡಿತು. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಪ್ರವೀಣ್ಕುಮಾರ್, ಬ್ರೆಡಾನ್ ಮ್ಯಾಕ್ಕುಲಮ್ (೦) ಜೈ ಸಿ ರೈಡರ್ (೧೧) ಅವರ ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿ ನ್ಯೂಜಿ ಲೆಂಡ್ ತಂಡವನ್ನು ಆರಂಭದಲ್ಲಿಯೇ ಕುಸಿಯುವಂತೆ ಮಾಡಿದರು. ನಂತರ ಬಂದ ರಾಸ್ ಟೇಲರ್ (೩೧) ಮತ್ತು ಗುಪ್ಪಿಲ್ ೪೯ ಎಸೆತಗಳನ್ನು ಎದುರಿಸಿ ೫೮ ರನ್ಗಳನ್ನು ಕಲೆ ಹಾಕಿ ತಂಡವನ್ನು ಕೊಂಚಮಟ್ಟಿಗೆ ಚೇತರಿಸಿಕೊಳ್ಳಲು ಸಹಕಾರಿಯಾ ದರು. ನಾಯಕ ಧೋನಿ ಬೌಲಿಂಗ್ನಲ್ಲಿ ಪರಿವರ್ತನೆ ತಂದು ಯುಸುಫ್ ಪಠಾಣ್ಗೆ ಬೌಲಿಂಗ್ ನೀಡಿದಾಗ, ಯುಸೂಫ್ ನಾಯಕನ ವಿಶ್ವಾಸಕ್ಕೆ ಕುಂದು ಬಾರದಂತೆ ಉತ್ತಮ ಬೌಲಿಂಗ್ ಪ್ರದರ್ಶಿಸಿ ಟೇಲರ್ ಬಲಿ ತೆಗೆದುಕೊಂಡರು. ಟೇಲರ್ ನಿರ್ಗಮನದ ನಂತರ ಬಂದ ಇಲಿಯಟ್ ಮತ್ತು ಗುಪ್ಪಿಲ್ ನಡುವೆ ತಪ್ಪು ಗ್ರಹಿಕೆಯುಂಟಾಗಿ, ಎರಡನೇ ರನ್ ತೆಗೆದುಕೊಳ್ಳುವ ಸಮಯದಲ್ಲಿ ಕ್ಷೇತ್ರ ರಕ್ಷಕರಾಗಿದ್ದ ರೈನಾ ನೇರವಾಗಿ ಎಸೆದ ಬಾಲ್ ವಿಕೆಟ್ಗೆ ಅಪ್ಪಳಿಸಿದ್ದರಿಂದ ಇಲಿಯಟ್ (೧೧) ಪೆವಿಲಿಯನ್ ಮರಳಿದರು. ಲೆಗ್ಸ್ಪಿನ್ನರ್ ಹರಭಜನ್ಸಿಂಗ್ ಒಂದೇ ಓವರ್ನಲ್ಲಿ ಮೂರು ವಿಕೆಟ್ಗಳನ್ನು ಪಡೆದು ಭಾರತ ತಂಡವನ್ನು ಗೆಲುವಿನ ಹತ್ತಿರಕ್ಕೆ ಕರೆ ತಂದರು. ಮುಂದಿನ ಓವರ್ನಲ್ಲಿ ವೇಗಿ ಜಹೀರ್ಖಾನ್ ಬಟ್ಲರ್ ಅವರನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ನಾಯಕ ಡೇನಿಯಲ್ ವೆಟ್ಟೋರಿ (೨೬) ರನ್ಗಳ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರಾದರೂ ವಿಫಲರಾದರು. ಪಂದ್ಯದ ಆರಂಭದಲ್ಲಿಯೇ ಮಳೆ ಕಾಡಿದ ಕಾರಣದಿಂದ ೫೦ ಓವರು ಬದಲು ೨೮ ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಆರಂಭಿಕ ಆಟಗಾರರಾದ ಸಚನ್ ತೆಂಡೂಲ್ಕರ್ ಮತ್ತುವೀರೇಂದ್ರ ಸೆಹ್ವಾಗ್ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾಗಿ ಮೊದಲ ವಿಕೆಟ್ಗೆ ೬೯ ರನ್ಗಳನ್ನು ಪೇರಿಸಿದರು. ಸಚಿನ್ ೨೦ ರನ್ಗಳ ಮೊತ್ತ ಗಳಿಸಿದ್ದಾಗ ಇಯಾಸ್ ಬಟ್ಲರ್ ಬೌಲಿಂಗ್ನಲ್ಲಿ ಮ್ಯಾಕ್ ಮಿಲನ್ಗೆ ಕ್ಯಾಚ್ ನೀಡಿ, ಪೆವಿಲಿಯನ್ಗೆ ಮರಳಿದರು. ಸಚಿನ್ ಔಟಾದ ನಂತರವೂ ಸೆಹ್ವಾಗ್ ಭರ್ಜರಿ ಹೊಡೆತಗಳ ಸುರಿಮಳೆ ಸುರಿಸಿ ತಮ್ಮ ಅರ್ಧ ಶತಕವನ್ನು ಪೂರೈಸಿದರು. ಸಚಿನ್ ನಂತರ ಬಂದ ತಂಡದ ನಾಯಕ ಧೋನಿಯವರೊಂದಿಗೆ ಸೆಹ್ವಾಗ್ ಅವರು ರಾಸ್ ಟೇಲರ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿ ಯಾದರು. ಸೆಹ್ವಾಗ್ ೫೬ ಬಾಲ್ಗಳನ್ನು ಎದುರಿಸಿ ೭೭ ರನ್ ಗಳಿಸಿದರು. ನಂತರ ಬಂದ ಯುವರಾಜ್ ಸಿಂಗ್ ನಾಯಕ ಧೋನಿಯವ ರೊಂದಿಗೆ ತಮ್ಮ ಕ್ರಿಕೆಟ್ ಪಯಣ ವನ್ನು ಮುಂದುವರಿಸಿದರು. ಯುವರಾಜ್ ಸಿಂಗ್ ಕೇವಲ ೨ ರನ್ಗಳಿಸಿದ್ದಾಗ ತಪ್ಪು ಗ್ರಹಿಕೆ ಯಿಂದಾಗಿ ರನ್ ಔಟಾಗಿ ಪೆವಿಲಿಯನ್ಗೆ ಮರಳಿದರು. ಬಳಿಕ ಸುರೇಶ್ ರೈನಾ ಜೊತೆಯಲ್ಲಿ ಧೋನಿ ಉತ್ತಮ ಆಟವನ್ನು ಪ್ರದರ್ಶಿಸಿ ತಮ್ಮ ಅರ್ಧ ಶತಕವನ್ನು ಪೂರೈಸಿದರು. ರೈನಾ ವೇಗದ ಆಟವನ್ನು ಪ್ರದರ್ಶಿಸಿ, ೩೯ ಬೌಲ್ಗಳಲ್ಲಿ ೬೬ ರನ್ಗಳಲ್ಲಿ ೬೬ ರನ್ಗಳನ್ನು ಬಾರಿಸಿ ಅರ್ಧ ಶತಕದ ಗಡಿಯನ್ನು ದಾಟಿದರು. ಇಲಿ ಯಟ್ ಬೌಲಿಂಗ್ನಲ್ಲಿ ಹೊಡೆತ ವನ್ನು ಬಾರಿಸಲು ಹೋದ ರೈನಾ ಔಟಾದರು. ಪಂದ್ಯದ ಅಂತಿಮ ಓವರ್ ಗಳಲ್ಲಿ ಯುಸುಫ್ ಪಠಾಣ್ ೧೦ ಬೌಲ್ಗಳನ್ನು ಎದುರಿಸಿ ೨೦ ರನಗಳನ್ನು ಪೇರಿಸಿದರು. ಧೋನಿ ಪಂದ್ಯದ ಮುಕ್ತಾಯಕ್ಕೆ ಔಟಾಗದೆ ೮೪ ರನ್ಗಳನ್ನು ಗಳಿಸಿ ೨೭೩ ರನ್ಗಳನ್ನು ಪೇರಿಸಿದರು. ಧೋನಿ ಪಂದ್ಯದ ಮುಕ್ತಾಯಕ್ಕೆ ಔಟಾಗದೆ ೮೪ ರನ್ಗಳನ್ನು ಗಳಿಸಿ, ೨೭೩ ರನ್ಗಳ ಗುರಿಯನ್ನು ನ್ಯೂಜಿ ಲೆಂಡ್ ತಂಡಕ್ಕೆ ನೀಡಿದರು

No Comments to “ಮೊದಲ ಏಕದಿನ ಗೆದ್ದ ಭಾರತಕ್ಕೆ ೧-೦ ಮುನ್ನಡೆ”

add a comment.

Leave a Reply

You must be logged in to post a comment.