logo
Last updated: 2009-03-05 11:39:54
E-Paper
Archives
March 2009
M T W T F S S
« Feb   Apr »
 1
2345678
9101112131415
16171819202122
23242526272829
3031  

ಕಿಸ್ಸರ್ ಬಾಯ್ಗೆ ಕಪಾಳಮೋಕ್ಷ !

ಬಾಲಿವುಡ್ನ ಚಂದದ ನಟೀಮಣಿಯರ ತುಟಿಗೆ ತುಟಿ ಸೇರಿಸಿ ಲೊಚಲೊಚನೆ ಕಿಸ್ಸು ಕೊಟ್ಟು ಬಾಲಿವುಡ್ ಅಂಗಳದಲ್ಲಿ ತನ್ನ ತುಟಿಗಳ ಸಾಮರ್ಥ್ಯ ಪ್ರದರ್ಶಿಸಿದ, ಪ್ರದರ್ಶಿಸುತ್ತಿರುವ ನಟ ಯಾರೆಂದರೆ ಪ್ರೆೃಮರಿ ಶಾಲೆಯ ಹುಡುಗನೂ ಉತ್ತರ ಕೊಟ್ಟಾನು. ಅಂತಹ ಕಿಸ್ವೀರ, ಸೀರಿಯಲ್ ಕಿಸ್ಸರ್ ಬಾಯ್ ಎಂದೇ ಕರೆಯಲ್ಪಡುವ ಇಮ್ರಾನ್ ಹಶ್ಮಿ ಎಂದು. ಪ್ರ (ಕು) ಖ್ಯಾತಿಯ ಉತ್ತುಂಗಕ್ಕೇರಿದ ಇಂತಿಪ್ಪ ಇಮ್ರಾನ್ ಹಶ್ಮಿಯ ಭಾಗ್ಯ ಕಂಡು ಉಳಿದವರೆಲ್ಲ ಯಾರಿಗುಂಟು ಯಾರಿಗಿಲ್ಲ ಎಂದು ಅರ್ಧರಾತ್ರಿಗಳಲ್ಲಿ ಪಿಟೀಲು ಬಾರಿಸುತ್ತಿದ್ದರೆ, ಪಾಪ ಅತ್ತ ಹಶ್ಮಿ ತನ್ನ ಪತ್ನಿ ಪರ್ವೀಸ್ ಕೈಯಿಂದ ಪೆಟ್ಟು ತಿಂದಿದ್ದಾನಂತೆ ! ಬಾಪ್ರೇ ! ಅಂತ ನೀವು ಹುಬ್ಬೇರಿಸಿದರೆ ಇದು ಪಕ್ಕಾ ಸತ್ಯವೆಂದು ಬಾಲಿವುಡ್ ಅಂಗಳದಲ್ಲೆಲ್ಲಾ ಗುಲ್ಲೇ ಗುಲ್ಲು. ಜತೆಗೆ ತಾನು ಪೆಟ್ಟು ಕೊಟ್ಟಿದ್ದನ್ನು ಹಶ್ಮಿಯ ಎದುರಲ್ಲೇ ಪತ್ನಿ ಪರ್ವೀನ್ ಒಪ್ಪಿಕೊಂಡಿದ್ದಾಳಂತೆ. ಮೊದಲಿನಿಂದಲೂ ತುಟಿಗೆ ತುಟಿ ಸೇರಿಸಿ ಚಪ್ಪರಿಸಿ ಕಿಸ್ಸು ಕೊಟ್ಟೂ ಅಭ್ಯಾಸವಾಗಿ ಹೋದ ಇಮ್ರಾನ್ ಜತೆಗೆ ಅಭಿನಯಕ್ಕೆ ನಟೀಮಣಿಯರ ದಂಡೇ ಇತ್ತು. ಹೀಗೆ ಹ್ಯಾಪಿ ಆಗಿದ್ದ ಸೀರಿಯಲ್ ಕಿಸ್ಸರ್ ಬಾಯ್ ಕೆಲ ಸಮಯಗಳ ಹಿಂದೆಯೇ ಮದುವೆಯ ನಂತರ ಯಾರಿಗೂ ಕಿಸ್ ಕೊಡುವುದಿಲ್ಲ. ಅದೇನಿದ್ದರೂ ತನ್ನ ಹೆಂಡತಿಗೆ ಮಾತ್ರವೇ ಸೀಮಿತ ಅಂತ ಘಂಟಾಷೋಷವಾಗಿ ಹೇಳಿದ್ದ. ಆದರೆ, ಹುಟ್ಟು ಗುಣ ಘಟ್ಟ ಹತ್ತಿದ್ದರೂ ಬಿಡುವುದಿಲ್ಲ ಅಂತಾರಲ್ಲ, ಹಾಗೆ ಇಮ್ರಾನ್ ಪರ್ವೀನಳನ್ನು ಕಟ್ಟಿಕೊಂಡು ಮೇಲೂ ಮೇಲಿಂದ ಮೇಲೆ ಕಿಸ್ಸು ಕೊಡುತ್ತಲೇ ಬಂದ. ಪರಿಣಾಮ ಹೆಂಡತಿಯಿಂದ ತುಟಿಗೆ ಬಿಡಿ, ಕೆನ್ನೆಗೂ ಕಿಸ್ಸು ಸಿಗಲಿಲ್ಲವಂತೆ, ಬದಲಾಗಿ ಹಲವಾರು ಬಾರಿ ಕಪಾಳಮೋಕ್ಷವಾಗಿದೆಯಂತೆ.


Thursday, March 5th, 2009 at 11:39 am

SocialTwist Tell-a-Friend

Be the first to write to Editor

Write to the Editor