ಮಹಿಳಾ ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಜಯ

ಆಸ್ಟ್ರೇಲಿಯಾ : ಮಹಿಳಾ ವಿಶ್ವಕಪ್ ಕ್ರಿಕೆಟ್ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ ೧೦ ವಿಕೆಟ್ಗಳಿಂದ ಸೋಲಿಸಿ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದರು. ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ಗಳ ಪ್ರಚಂಡ ಪ್ರದರ್ಶನದಿಂದ ಪಾಕಿಸ್ತಾನವನ್ನು ಕೇವಲ ೫೭ ರನ್ಗಳಿಗೆ ಆಲೌಟ್ ಮಾಡಿತು. ರುಮೇಲಿ ಧರ್ ೩, ಅಮಿತಾ ಶರ್ಮಾ ಮತ್ತು ಪ್ರಿಯಾಂಕ ರಾಯ್ ತಲಾ ಎರಡು ವಿಕೆಟ್ ಪಡೆದರೆ ಜುಲಾನ್ ಗೋಸ್ವಾಮಿ ಮತ್ತು ಗೌಹರ್ ಸುಲ್ತಾನ ತಲಾ ಒಂದೊಂದು ವಿಕೆಟ್ ಪಡೆದರು. ೫೮ರನ್ಗಳಗುರಿಬೆನ್ನಟ್ಟಿದಭಾರತ, ಹತ್ತು ಒವರ್ಗಳ ಒಳಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯ ಸಾಧಿಸಿತು. ತಂಡದಪರವಾಗಿಅನಘಾದೇಶಪಾಂಡೆ ೨೬ಮತ್ತುಅಂಜುಂಚೋಪ್ರಾ೧೭ರನ್ ಗಳಿಸಿದರು.

No Comments to “ಮಹಿಳಾ ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಜಯ”

add a comment.

Leave a Reply

You must be logged in to post a comment.