ಸಚಿನ್ ಆರ್ಭಟಕ್ಕೆ ನ್ಯೂಜಿಲ್ಯಾಂಡ್ ತತ್ತರ

ನ್ಯೂಜಿಲ್ಯಾಂಡ್ : ಕ್ರೆೃಸ್ಟ್ ಚರ್ಚ್ನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿ ಲ್ಯಾಂಡ್ ವಿರುದ್ಧ ಐದು ಏಕದಿನ ಸರಣಿಯ ಮೂರನೇ ಪಂದ್ಯವು ಭಾರತದ ಬ್ಯಾಟಿಂಗ್ ಆರ್ಭಟಕ್ಕೆ ಸಾಕ್ಷಿಯಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡಲು ಮುಂದಾದ ಕಿವೀಸ್ ಗಳನ್ನು ಮಣಿಸಿದ್ದು ಧೋನಿ ಪಡೆ ೫೮ ರನ್ಗಳ ಗೆಲುವು ಸಾಧಿಸಿ ಮತ್ತೊಮ್ಮೆ ವಿಜಯದ ನಗು ಬೀರಿದ್ದು ೨-೦ ಅಂತರದ ಮುನ್ನಡೆ ಸಾಧಿಸಿದೆ. ಸಚಿನ್ ತೆಂಡೂಲ್ಕರ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನ ರಾದರು. ಸಚಿನ್, ಯುವರಾಜ್, ಧೋನಿ ಅವರುಗಳ ಸಂಘಟಿತ ಆಟದ ಪರಿಣಾಮ ೩೯೨ ರನ್ಗಳ ಮೊತ್ತದ ಸವಾಲನ್ನು ಪ್ರವಾಸಿಗಳು ಅತಿಥೇಯರಿಗೆ ಒಡ್ಡಿದರು. ಕಿವೀಸ್ ತನ್ನೆಲ್ಲ ವಿಕೆಟ್ಗಳನ್ನು ಕಳೆದು ಕೊಂಡು ೩೩೪ ರನ್ಗಳಿಸಲಷ್ಟೇ ಶಕ್ತವಾಯಿತು. ಭಾರತಕ್ಕೆ ದಿಟ್ಟ ಉತ್ತರ ನೀಡಲು ಮುಂದಾದಾಗ ನ್ಯೂಜಿಲ್ಯಾಂಡ್ ೧೬೬ ರನ್ ಗಳಿ ಸುವ ತನಕ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ನ್ಯೂಜಿ ಲ್ಯಾಂಡಿನ ಆರಂಭಿಕ ಮತ್ತು ಕೊನೆಯ ಬ್ಯಾಟ್ಸ್ಮನ್ ಗಳು ಆಕರ್ಷಕ ಪ್ರದರ್ಶನ ನೀಡಿದರಾದರೂ ಅವರ ಪ್ರಯತ್ನ ಗೆಲುವಿಗೆ ಹಾದಿಯಾಗಲಿಲ್ಲ. ಜೆಸ್ಸೀರೈಡರ್ ಅವರ ಸೊ–ಟಕ ಶತಕ, ಕೈಲೇ ಮಿಲ್ಸ್ ಬಾರಿಸಿದ ಅರ್ಧ ಶತಕ ಎಲ್ಲವೂ ವ್ಯರ್ಥ ಎಂಬಂತಾ-ಯಿತು. ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಭಾರ-ತ-ವನ್ನು ಬ್ಯಾಟಿಂಗ್ಗೆ ಇಳಿ-ಸಿತು. ಅವ-ಕಾ-ಶ-ವ-ನ್ನು ಉತ್ತ-ಮ-ವಾಗಿ ಭಾರತ ಬಳಸಿಕೊಂಡಿತು. ತನ್ನ ರಟ್ಟೆಯಲ್ಲಿನ್ನೂ ಕಸುವು ಇದೆ ಎಂಬುದನ್ನು ವಿಶ್ವಕ್ಕೆ ತೋರುತ್ತಾ, ಟೀಕಾಕಾರರ ಬಾಯಿ ಮುಚ್ಚಿಸುವಂತೆ ಆರ್ಭಟಿಸಿದ ಬ್ಯಾಟಿಂಗ್ ಮಾಂತ್ರಿಕ ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್, ಸಿಡಿದ ಯುವಿ, ರೈನಾ ಹಾಗೂ ಎಂದಿನಂತೆ ತನ್ನ ಫಾರ್ಮ್ ಕಾಯ್ದುಕೊಂಡ ಧೋನಿ ಹೀಗೆ ಸಾಗುತ್ತದೆ ಭಾರತದ ಬ್ಯಾಟಿಂಗ್ ಬಲ. ಟಾಸ್ ಗೆದ್ದ ನ್ಯೂಜಿ ಲ್ಯಾಂಡ್ ಫೀಲ್ಡಿಂಗ್ನ್ನು ಆಯ್ಕೆ ಮಾಡಿತು. ಕಳೆದ ಎರಡು ಪಂದ್ಯಗಳಲ್ಲಿ ಸೊ–ಟಕ ಬ್ಯಾಟಿಂಗ್ ಮಾಡಿದ ಸೆಹ್ವಾಗ್ ಇಂದು ಕೇವಲ ೩ ರನ್ ಗಳಿಸಿ ನಿರ್ಗಮಿ ಸಿದರು. ಎರಡನೇ ವಿಕೆಟ್ಗೆ ಬಂದಿಳಿದ ಗೌತಮ್ ಗಂಭೀರ್ ಸಹ ಪ್ರಭಾವಿಯಾಗಲಿಲ್ಲ. ೨೭ ಎಸೆತಗಳನ್ನ ಎದುರಿಸಿದ ಗೌತಮ್ ೧೫ ರನ್ ಗಳಿಸಿ ಔಟಾದರು. ನಂತರ ಕ್ರೀಸ್ಗಿಳಿದ ಯುವಿ ಬ್ಯಾಟಿಂಗ್ ಪವರ್ ಪ್ಲೇಯಲ್ಲಿ ರನ್ನ ಸುರಿಮಳೆಗೈದರು. ಸಚಿನ್ – ಯುವಿ ಜೋಡಿ ಬ್ಯಾಟಿಂಗ್ ಪವರ ಪ್ಲೇಯಲ್ಲಿ ೫ ಓವರ್ಗಳಲ್ಲಿ ೫೬ ರನ್ ಚಚ್ಚಿದರು. ಸಚಿನ್ಗೆ ಉತ್ತಮ ಸಾಥ್ ನೀಡಿದ ಯುವಿ ೬೦ ಎಸೆತಗಳಲ್ಲಿ ೮೭ ರನ್ ಬಾರಿಸಿದರು. ಇದರಲ್ಲಿ ೬ ಭರ್ಜರಿ ಸಿಕ್ಸರ್ ಹಾಗೂ ೧೦ ಬೌಂಡರಿಗಳು ಸೇರಿವೆ. ನಂತರ ಬಂದ ನಾಯಕ ಧೋನಿ ಎಂದಿನಂತೆ ತನ್ನ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಸಚಿನ್ಗೆ ಉತ್ತಮ ಬೆಂಬಲ ನೀಡಿದರು. ಈ ಹಂತದಲ್ಲಿ ಸಚಿನ್ ತನ್ನ ಶತಕವನ್ನು ಪೂರ್ತಿ ಗೊಳಿಸಿದರು. ಶತಕದ ನಂತರ ಬಿರುಸಿನ ಆಟಕ್ಕಿಳಿದ ಸಚಿನ್ ೧೬೩ ರನ್ ಗಳಿಸಿ ನಿವೃತ್ತಿಯಾದರು. ೧೩೩ ಎಸೆತಗಳನ್ನು ಎದುರಿಸಿದ ಸಚಿನ್ ಇದರಲ್ಲಿ ೧೬ ಬೌಂಡರಿ ಹಾಗೂ ೫ ಸಿಕ್ಸರ್ಗಳು ಸೇರಿದ್ದವು. ನಾಯಕ ಧೋನಿ ೫೮ ರನ್ ಬಾರಿಸಿದರು. ಸ್ಲಾಗ ಓವರ್ಗಳಲ್ಲಿ ರೈನಾ ಸೊ–ಟಕ ಬ್ಯಾಟ್ ಬೀಸಿದರು. ಕೇವಲ ೧೮ ಎಸೆತಗಳಲ್ಲಿ ೫ ಭರ್ಜರಿ ಸಿಕ್ಸರ್ ಸಹಿತ ೩೮ ರನ್ ಗಳಿಸಿ ಅಜೇಯರಾಗಿಳಿದರು. ಭಾರತ ಬೃತಹ್ ರನ್ ಸವಾಲಿಗೆ ನ್ಯೂಜಿಲ್ಯಾಂಡ್ ಆರಂಭದಲ್ಲಿಯೇ ದಿಟ್ಟ ಉತ್ತರವನ್ನು ನೀಡಿತು. ರೈಡರ್ ಹಾಗೂ ಮೆಕಲಮ್ ಸೇರಿದ ಮೊದಲ ವಿಕೆಟ್ಗೆ ಕೇವಲ ೨೨ ಓವರ್ಗಳಲ್ಲಿ ೧೬೬ ರನ್ ಸೇರಿಸಿದರು. ಮೆಕಲಮ್ ೭೧ ರನ್ಗಳಿಸಿ ಸುರೇನಾ ರೈನಾರ ಅದ್ಭುತ ಫೀಲ್ಡಿಂಗ್ಗೆ ಬಲಿಯಾದರು. ರೈಡರ್ ೮೦ ಎಸೆತಗಳಲ್ಲಿ ೧೦೫ ರನ್ ಗಳಿಸಿದ್ದಾಗ ಹರ್ಭಜನ್ಸಿಂಗ್ ಬೌಲಿಂಗ್ನಲ್ಲಿ ಜಹೀರ್ ಕ್ಯಾಚಿತ್ತರು. ಅವರಈಇನ್ನಿಂಗ್ಸ್ನಲ್ಲಿ ೧೨ ಬೌಂಡರಿ ಹಾಗೂ ೪ ಸಿಕ್ಸರ್ಗಳು ಸೇರಿದ್ದವು. ಈಲಿಯಟ್ (೧೮) ಬಿಟ್ಟರೆ ನಂತರದ ಬ್ಯಾಟ್ಸ್ಮನ್ಗಳು ಏಕಂಕಿ ಗಳಿಸಿ ಮಾರ್ಚ್ಫಾಸ್ಟ್ ಮಾಡಿದರು. ಆದರೆ ಕೊನೆಯಲ್ಲಿ ಬಂದ ಐ.ಜಿ. ಬಟ್ಲರ್ ತಂಡಕ್ಕೆ ತಿರುವು ನೀಡುವ ಆಟವಾಡಿ ೧೯ ಬಾಲ್ಗಳಲ್ಲಿ ೨೪ ರನ್ ಗಳಿಸಿದರು. ಕೈಲ್ ಡಿ ಮಿಲ್ಲ ಅತ್ಯದ್ಭುತವಾಗಿ ಬ್ಯಾಟ್ ಬೀಸಿ ೩೨ ರನ್ಗಳಲ್ಲಿ ೫೪ ರನ್ ಗಳಿಸಿದರು. ಇದರಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ಗಳು ಸೇರಿವೆ. ಟಿಮ್ ಸೌತೀ ಅವರೂ ಸಹ ಕೊನೆಯ ಹೋರಾಟ ನೀಡಿದರು. ೨೦ ಬಾಲುಗಳಿಗೆ ೩೨ ರನ್ ದಾಖಲಿಸಿ ದ್ದಾರೆ. ಇದರಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸೇರಿತ್ತು, ಉಭಯ ತಂಡಗಳು ವೀಕ್ಷಕ ರಿಗೆ ರೋಚಕ ಪ್ರದರ್ಶನ ನೀಡಿದರು. ಏಳುಬೀಳುಗಳನ್ನು ಕಂಡ ಪಂದ್ಯ ಅಂತಿಮವಾಗಿ ಭಾರತಕ್ಕೆ ಒಲಿಯಿತು. ಸಂಕ್ಷಿಪ್ತ ಸ್ಕೋರ್ ಪಟ್ಟಿ : ಭಾರತ ೫೦ ಓವರ್ಗಳಲ್ಲಿ ೩೯೨/೪ ಬ್ಯಾಟಿಂಗ್ : ಸೆಹ್ವಾಗ್(೩), ಸಚಿನ್ ನಿವೃತ್ತಿ (೧೬೩), ಗಂಭೀರ್ (೧೫), ಯುವರಾಜ್ (೮೭), ಧೋನಿ (೬೮), ರೈನಾ (೩೮*), ಯುಸುಫ್ (೧*). ಬೌಲಿಂಗ್ : ಮಿಲ್ಸ್ ೧೦-೦- ೫೮, ಸೌಥಿ ೧೦-೦-೧೦೫-೦, ಬಟ್ಲರ್ ೫-೦೩೭-೧, ಓರಮ್ ೮-೧-೩೪-೦, ಜಿತೇನ್ ಪಟೇಲ್ ೫-೦-೩೭-೦, ರೈಡರ್ ೫-೦೫೬-೦, ಎಲ್ಲಿಯಟ್ ೭-೦೬೦-೦ ನ್ಯೂಜಿಲ್ಯಾಂಡ್ ೪೫.೧ ಓವರ್ಗಳಲ್ಲಿ ೩೩೪ ಆಲೌಟ್. ಬ್ಯಾಟಿಂಗ್ : ರೈಡರ್ (೧೦೫), ಮೆಕಲಮ್ (೭೧), ಟೇಲರ್ (೭), ಗುಪ್ಟಿಲ್ (೧), ಎಲ್ಲಿಯಟ್ (೧೮), ಒರಮ್ (೭), ಮೆಕ್ಲೇಶನ್ (೭), ಬಟ್ಲರ್ (೨೪), ಮಿಲ್ಸ್ (೫೪), ಸೌಥಿ (೩೨), ಪಟೇಲ್ (೨*). ಬೌಲಿಂಗ್ : ಜಹೀರ್ ೯-೦- ೬೫-೨, ಪ್ರವೀಣ್ ೮.೧-೦-೬೦-೧, ಪಟೇಲ್ ೭.೨-೦-೭೯-೦, ಯುವರಾಜ್ ೧೦-೦-೭೧-೨, ಹರ್ಭಜನ್ ೧೦-೦-೫೬-೨, ಯುಸುಫ್ ೦.೪-೦-೧-೧.

No Comments to “ಸಚಿನ್ ಆರ್ಭಟಕ್ಕೆ ನ್ಯೂಜಿಲ್ಯಾಂಡ್ ತತ್ತರ”

add a comment.

Leave a Reply

You must be logged in to post a comment.