ವೆಟ್ಟೋರಿ, ರೈಡರ್‌ ಶತಕ : ನ್ಯೂಜಿಲೆಂಡ್‌ ೨೭೯ಕ್ಕೆ ಆಲೌಟ್‌

ಹ್ಯಾಮಿಲ್ಟನ್‌ : ಭಾರತೀಯ ಬೌಲರುಗಳೆದುರು ನ್ಯೂಜಿ ಲೆಂಡ್‌ನ ದಾಂಡಿಗರು ನಿರಂತರ ಪೆವಿಲಿಯನ್‌ ಯಾತ್ರೆ ಮಾಡುತ್ತಿದ್ದರೂ ದಿಟ್ಟ ಪ್ರದರ್ಶನ ತೋರಿಸಿದ ಡೇನಿಯಲ್‌ ವೆಟ್ಟೋರಿ (೧೧೮) ಮತ್ತು ಜೆಸ್ಸಿ ರೈಡರ್‌ (೧೦೨) ಶತಕ ದಾಖಲಿಸಿ ಭಾರೀ ಕುಸಿತವನ್ನು ತಪ್ಪಿಸಿದರು. ಆದರೂ ಬೃಹತ್‌ ಮೊತ್ತದತ್ತ ತಂಡವನ್ನು ಕೊಂಡೊಯ್ಯುವಲ್ಲಿ ಅವರು ವಿಫಲರಾದರು. ಇಲ್ಲಿನ ಸೆಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ಗಳ ಮೊದಲ ಪಂದ್ಯ ಆರಂಭವಾಗಿದ್ದು, ಟಾಸ್‌ ಗೆದ್ದ ಭಾರತ μಲ್ಡಿಂಗ್‌ ಆಯ್ದುಕೊಂಡಿತ್ತು. ಮೊದಲ ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ ೨೭೯ ರನ್‌ ಗಳಿಸಿ ಸರ್ವಪತನ ಕಂಡಿದೆ. ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ ೨೯ ರನ್‌ಗಳಿಸಿದೆ. ಇಶಾಂತ್‌ ಶರ್ಮ, ಮುನಾಫ್‌ ಪಟೇಲ್‌ ಮತ್ತು ಜಹೀರ್‌ಖಾನ್‌ರೆದುರು ಬ್ಯಾಟಿಂಗ್‌ ಮಾಡಲು ಹಿಂದೆ ನೋಡಿದ ಬಹುತೇಕ ಕಿವೀಸ್‌ ದಾಂಡಿಗರು ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಇದಕ್ಕೆ ಇಲ್ಲಿನ ಪಿಚ್‌ ಕೂಡ ಕಾರಣವಾದರೂ ಬೌಲಿಂಗ್‌ ಕಠಿಣವಾಗಿತ್ತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಟಿಮ್‌ ಮೆಕಿಂತೋಶ್‌ ಮತ್ತು ಮಾರ್ಟಿನ್‌ ಗುಪ್ತಿಲ್‌ ಅಲ್ಪ ಮೊತ್ತಕ್ಕೆ ಆರಂಭದಲ್ಲೇ ವಿಕೆಟ್‌ ಒಪ್ಪಿಸಿದರು. ಗುಪ್ತಿಲ್‌ ೧೪ ರನ್‌ ಗಳಿಸಿದ್ದಾಗ ಜಹೀರ್‌ಖಾನ್‌ಗೆ ಮೊದಲ ಬಲಿಯಾದರೆ, ಡೇನಿಯಲ್‌ ಪ್ಲೈನ್‌ ಶೂನ್ಯಕ್ಕೆ ಎರಡನೇ ಬಲಿಯಾದರು. ಎಂಟು ಓವರುಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡ ಕಿವೀಸ್‌ ಕೇವಲ ೧೭ ರನ್‌ ಮಾತ್ರ ಗಳಿಸಿತ್ತು. ಮತ್ತೊಬ್ಬ ಆರಂಭಿಕ ಆಟಗಾರ ಮೆಕಿಂತೋಶ್‌ ಅವರು ೧೨ ರನ್‌ ಗಳಿಸಿದ್ದಾಗ ಇಶಾಂತ್‌ ಶರ್ಮ ಖಾತೆ ತೆರೆಯಲು ಸಹಕರಿಸಿದರು. ರೋಸ್‌ ಟೇಲರ್‌ ೧೮ ಹಾಗೂ ಜೇಮ್ಸ್‌ ಶೂನ್ಯದಲ್ಲಿದ್ದಾಗ ಮತ್ತೆ ಇಶಾಂತ್‌ ಎಸೆತಗಳಿಗೆ ಬಲಿಯಾದರು. ಟ್ರೆಂಡನ್‌ ಮೆಕಲಮ್‌ ೩ ರಲ್ಲಿದ್ದಾಗ ಮುನಾಫ್‌ ಪಟೇಲ್‌ ಪೆವಿಲಿಯನ್‌ಗೆ ಕಳುಹಿಸಿ ಅಪಾಯವನ್ನು ಜಾರಿಸಿಕೊಂಡರು. ಆರು ವಿಕೆಟ್‌ ಕಳೆದುಕೊಂಡ ನ್ಯೂಜಿಲೆಂಡ್‌ ೨೩.೧ ಓವರುಗಳಲ್ಲಿ ೬೦ ರನ್‌ ಗಳಿಸಿತ್ತು. ನಂತರ ಗಟ್ಟಿಯಾಗಿ ಕ್ರೀಸಿನಲ್ಲಿ ನಿಂತವರು ಜೆಸ್ಸಿ ರೈಡರ್‌ ಮತ್ತು ನಾಯಕ ಡೇನಿಯಲ್‌ ವೆಟ್ಟೋರಿ. ಇವರಿಬ್ಬರೂ ಕಿವೀಸ್‌ಗೆ ಅಗತ್ಯವಾಗಿದ್ದ ಸ್ಥಿರ ಆಟವನ್ನು ನೀಡಿದರು. ವೆಟ್ಟೋರಿ ತನ್ನ ಟೆಸ್ಟ್‌ ಜೀವನದ ಮೂರನೇ ಆಕರ್ಷಕ ಶತಕ (೧೧೮) ದಾಖಲಿಸಿದ್ದಾಗ ಮುನಾಫ್‌ ಪಟೇಲ್‌ಗೆ ಬಲಿಯಾದರು. ನಂತರ ಬಂದ ಕೈಯ್ಸ್‌ ಮಿಲ್ಸ್‌ ಒಂದೇ ಎಸೆತಕ್ಕೆ ಉಸ್ಸೆಂದಿದ್ದಾರೆ. ಇಯಾನ್‌ ಓಬ್ರಿಯಾನ್‌ ೮ ರನ್‌ ಗಳಿಸಿದ್ದಾಗ ಹರಭಜನ್‌ ಎಸೆತಕ್ಕೆ ತತ್ತರಿಸಿದರು. ಚೊಚ್ಚಲ ಶತಕ ಪೂರೈಸುವಲ್ಲಿ ಕಷ್ಟಪಟ್ಟು ಕೊನೆಯ ಹಂತದಲ್ಲಿ ಬ್ಯಾಟ್‌ ಬೀಸುತ್ತಿದ್ದ ಜೆಸ್ಸಿ ರೈಡರ್‌ ಕೊನೆಗೂ ಯಶಸ್ಸು ಕಂಡರು. ಅವರು ೧೬೨ ಎಸೆತಗಳಿಮದ ೧೦೨ ರನ್‌ ಗಳಿಸಿದ್ದಾಗ ಇಶಾಂತ್‌ಗೆ ವಿಕೆಟ್‌ ಕೊಟ್ಟಾಗ ಕಿವೀಸ್‌ ಮೊದಲ ಇನ್ನಿಂಗ್ಸ್‌ ಹೋರಾಟ ಮುಗಿದಿತ್ತು. ಭಾರತದ ಪರ ಇಶಾಂತ್‌ ಶರ್ಮ ೭೦ ರನ್ನುಗಳಿಗೆ ನಾಲ್ಕು ವಿಕೆಟ್‌ ಕಿತ್ತು ಮಿಂಚಿದರು. ಮುನಾಫ್‌ ಪಟೇಲ್‌ ಮೂರು ಹಾಗೂ ಜಹೀರ್‌ ಖಾನ್‌ ಎರಡು ವಿಕೆಟ್‌ ಪಡೆದರು. ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಭಾರತ ದಿನದಂತ್ಯಕ್ಕೆ ಏಳು ಓವರ್‌ಗಳ ಆಟವಾಡಿದೆ. ಆರಂಭಿಕ ಆಟಗಾರರಾದ ಗೌತಮ್‌ ಗಂಭೀರ್‌ ಮತ್ತು ವೀರೇಂದ್ರ ಸೆಹ್ವಾಗ್‌ ನೆರವಿನಿಂದ ಭಾರತ ೨೯ ರನ್‌ ಗಳಿಸಿದೆ. ಸೆಹ್ವಾಗ್‌ ೧೮ ಎಸೆತಗಳಿಂದ ೫ ಬೌಂಡರಿ ಸಹಿತ ೨೨ ರನ್‌ ದಾಖಲಿಸಿದ್ದರೆ, ಗಂಭೀರ್‌ ೨೪ ಎಸೆತಗಳಿಂದ ೬ರನ್‌ ಗಳಿಸಿದ್ದಾರೆ. ಸ್ಕೋರ್‌ ಪಟ್ಟಿ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ ೨೭೯ ಬ್ಯಾಟಿಂಗ್‌ : ಟಿಮ್‌ ಮೆಕಿಂತೋಶ್‌ ೧೨, ಮಾರ್ಟಿನ್‌ ಗುಪ್ತಿಲ್‌ ೧೪, ಡೇನಿಯಲ್‌ ಫ್ಲೈನ್‌ ೦, ರೋಸ್‌ ಟೇಲರ್‌ ೧೮, ಜೆಸ್ಸಿ ರೈಡರ್‌ ೧೦೨, ಜೇಮ್ಸ್‌ ಫ್ರಾಂಕ್ಲಿನ್‌ ೦, ಡೇನಿಯಲ್‌ ವೆಟ್ಟೋರಿ ೧೧೮, ಕೈಲ್‌ ಮಿಲ್ಸ್‌ ೦, ಇಯಾನ್‌ ಓಬ್ರಿಯಾನ್‌ ೮, ಕ್ರಿಸ್‌ ಮಾರ್ಟಿನ್‌ ೦* ವಿಕೆಟ್‌ ಪತನ : ೧-೧೭ (ಗುಪ್ತಿಲ್‌, ೬.೫ ಓವರ್‌), ೨-೧೭ (ಪ್ಲೈನ್‌, ೮.೨ ಓವರ್‌), ೩-೪೦ (ಮೆಕಿಂತೋಶ್‌ ೧೬.೨ ಓವರ್‌), ೪-೫೧ (ಟೇಲರ್‌, ೨೦.೪ ಓವರ್‌), ೫-೫೧ (ಫ್ರಾಂಕಿನ್‌, ೨೧ ಓವರ್‌), ೬-೬೦ (ಮೆಕಲಮ್‌, ೨೩.೧ ಓವರ್‌), ೭-೨೪೬ (ವೆಟ್ಟೋರಿ, ೭೦.೨ ಓವರ್‌), ೮-೨೪೬ (ಮಿಲ್ಸ್‌ ೭೦.೩ ಓವರ್‌), ೯-೨೭೫ (ಓಬ್ರಿಯಾನ್‌ ೭೭.೧ ಓವರ್‌), ೧೦-೨೭೯ (ರೈಡರ್‌ ೭೮.೨ ಓವರ್‌). ಬೌಲಿಂಗ್‌ : ಜಹೀರ್‌ ಖಾನ್‌ ೧೬-೩-೭೦-೨, ಇಶಾಂತ್‌ ಶರ್ಮ ೧೯.೨-೪-೭೩-೪, ಮುನಾಫ್‌ ಪಟೇಲ್‌ ೧೮-೪-೬೦-೩, ಹರಭಜನ್‌ ಸಿಂಗ್‌ ೨೨-೭-೫೭-೧, ವೀರೇಂದ್ರ ಸೆಹ್ವಾಗ್‌ ೩-೦-೧೮-೦.

No Comments to “ವೆಟ್ಟೋರಿ, ರೈಡರ್‌ ಶತಕ : ನ್ಯೂಜಿಲೆಂಡ್‌ ೨೭೯ಕ್ಕೆ ಆಲೌಟ್‌”

add a comment.

Leave a Reply

You must be logged in to post a comment.