ಭಾರತ ೪ ವಿಕೆಟ್‌ಗೆ ೨೭೮

ಹ್ಯಾಮಿಲ್ಟನ್‌ : ಭಾರತ – ನ್ಯೂಜಿಲ್ಯಾಂಡ್‌ಗಳ ಪ್ರಥಮ ಟೆಸ್ಟ್‌ ಪಂದ್ಯದ ೨ ನೇ ದಿನದ ಆಟದಲ್ಲಿ ಗೌತಮ್‌ ಗಂಭೀರ್‌, ರಾಹುಲ್‌ ದ್ರಾವಿಡ್‌ ಮತ್ತು ಸಚ್ಚಿನ್‌ ತೆಂಡೂಲ್ಕರ್‌ ಅವರ ಆಕರ್ಷಕ ಅರ್ಧ ಶತಕ ನೆರವಿನಿಂದ ಭಾರತ ದಿನದ ಅಂತ್ಯಕ್ಕೆ ೪ ವಿಕೆಟ್‌ ನಷ್ಟಕ್ಕೆ ೨೭೮ ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಬುಧವಾರ ವಿಕೆಟ್‌ ನಷ್ಟವಿಲ್ಲದೆ ೨೯ ರನ್‌ ಗಳಿಸಿದ ಭಾರತ ತಂಡ ಇಂದು ಚುರುಕಿನಿಂದ ಆಟ ಮುಂದುವರೆಸಿತು. ಗೌತಮ್‌ ಗಂಭೀರ್‌-೭೨, ವೀರೇಂದ್ರ ಸೆಹ್ವಾಗ್‌-೨೪, ರಾಹುಲ್‌ ದ್ರಾವಿಡ್‌-೬೬ ಮತ್ತು ಲಕ್ಷ್ಮಣ್‌- ೩೦ ರನ್‌ ಗಳಿಸಿ ಔಟಾದರು. ೭೦ ರನ್‌ ಗಳಿಸಿರುವ ತೆಂಡೂಲ್ಕರ್‌ ಮತ್ತು ಯುವರಾಜ್‌ ಸಿಂಗ್‌ ಕ್ರೀಸ್‌ನಲ್ಲಿ ದ್ದಾರೆ. ನ್ಯೂಜಿಲ್ಯಾಂಡ್‌ ಪರ ಮಾರ್ಟಿನ್‌-೨ ಮತ್ತು ಓಬ್ರೇನ್‌-೧ ವಿಕೆಟ್‌ ಪಡೆದರು. ಮಂದ ಬೆಳಕಿನಿಂದ ಆಟವನ್ನು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಲಾಯಿತು.

No Comments to “ಭಾರತ ೪ ವಿಕೆಟ್‌ಗೆ ೨೭೮”

add a comment.

Leave a Reply

You must be logged in to post a comment.