ಸಚಿನ್‌ ೪೨ ನೇ ಶತಕ : ಗೆಲುವಿನತ್ತ ಭಾರತ

ಹ್ಯಾಮಿಲ್ಟನ್‌ : ಸಚಿನ್‌ ತೆಂಡೂಲ್ಕರ್‌ ಅಮೋಘ ಶತಕದ (೧೬೦) ನೆರವಿನಿಂದ ಭಾರತ ೫೨೦ ರನ್‌ ಪೇರಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ೨೪೧ ರನ್‌ಗಳ ಮುನ್ನಡೆ ಸಾಧಿಸಿದೆ. ಜಹೀರ್‌ ಕಾನ್‌ ಅಜೇಯ ಅರ್ಧಶತಕ (೫೧) ಮತ್ತು ನಾಯಕ ಮಹೇಂದ್ರ ಸಿಂಗ್‌ ಧೋನಿ (೪೭) ಟೀಮ್‌ ಇಂಡಿಯಾ ಬೃಹತ್‌ ಮೊತ್ತದತ್ತ ಸಾಗಲು ಸಹಕಾರಿ ಯಾದರು. ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲ್ಯಾಂಡ್‌ ದಿನದ ಆಟ ಮುಗಿದಾಗ ೩ ವಿಕೆಟ್‌ ಕಳೆದುಕೊಂಡು ೭೫ ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ೨೭೯ ಕ್ಕೆ ಸರ್ವಪತನ ಕಂಡಿದ್ದರೆ, ಭಾರತ ೫೨೦ ರನ್‌ ದಾಖಲಿಸಿ ೨೪೧ ರನ್‌ಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ನಿನ್ನೆ ಅರ್ಥಶತಕ (೭೦) ದಾಖಲಿಸಿದ್ದ ಸಚಿನ್‌ ತೆಂಡೂಲ್ಕರ್‌ ಹಾಗೂ ಯುವರಾಜ್‌ ಸಿಂಗ್‌ (೬) ಜೋಡಿ ದಿನದಂತ್ಯಕ್ಕೆ ಭಾರತ ೨೭೮ ರನ್‌ ದಾಖಲಿಸಲು ದಹಾಯ ಮಾಡಿತ್ತು. ಆದರೆ ಈ ಜೋಡಿ ಇಂದು ಬಹಳ ಹೊತ್ತು ಮುಂದು ವರಿಯಲು ಕ್ರಿಸ್‌ ಮಾರ್ಟಿನ್‌ ಬಿಡಲಿಲ್ಲ. ಯುವರಾಜ್‌ ೨೨ ರನ ಗಳಿಸಿದ್ದಾಗ ವಿಕೆಟ್‌ ಒಪ್ಪಿಸಿದರು. ನಂತರ ಧೋನಿ ಅರ್ಧಶತಕ ದಂಚಿನಲ್ಲಿ (೪೭) ಓಬ್ರಿಯಾನ್‌ಗೆ ಬಲಿಯಾದರು. ಸಚಿನ್‌ ತೆಂಡೂಲ್ಕರ್‌ ತನ್ನ ಟೆಸ್ಟ್‌ ಜೀವನದ ೪೨ ನೇ ಅಮೋಘ ಶತಕ ದಾಖಲಿಸಿ ಟೀಮ್‌ ಇಂಡಿಯಾ ಮುನ್ನಡೆ ದಾಖಲಿಸಲು ಮಹತ್ವದ ಸಹಕಾರ ನೀಡಿದರು. ಅವರು ೨೬೦ ಎಸೆತಗಳಿಂದ ೨೬ ಬೌಂಡರಿ ಸಹಿತ ೧೬೦ ರನ್‌ ಗಳಿಸಿದ್ದಾಗ ಓಬ್ರಿಯಾನ್‌ ಎಸೆತವನ್ನು ಟೇಲರ್‌ ಕೈಗಿತ್ತು ಮರಳಿದಾಗ ಭಾರತ ೭ ವಿಕೆಟ್‌ ನಷ್ಟಕ್ಕೆ ೪೪೩ ರನ್‌ ಪೇರಿಸಿತ್ತು. ಹರಭಜನ್‌ (೧೬), ಇಶಾಂತ್‌ (೬), ಮುನಾಫ್‌ (೯) ಅಲ್ಪಮೊತ್ತಕ್ಕೆ ಶರಣಾದರೆ ಕೇವಲ ೪೫ ಎಸೆತಗಳಿಂದ ಜಹೀರ್‌ ಖಾನ್‌ ಅರ್ಧಶತಕ (೫೧) ದಾಖಲಿಸಿ ಅಜೇಯರಾಗುಳಿದರು. ಒಟ್ಟಾರೆ ಭಾರತ ೧೫೨.೪ ಓವರ್‌ಗಳಲ್ಲಿ ೫೨೦ ರನ್‌ ಗಳಿಸಿ ಸರ್ವಪತನ ಕಂಡಿತು. ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ೨೪೧ ರನ್‌ ಮುನ್ನಡೆ ದಾಖಲಿಸಿತು. ನ್ಯೂಜಿಲೆಂಡ್‌ ಪರ ಕ್ರಿಸ್‌ ಮಾರ್ಟಿನ್‌ ಮತ್ತು ಇಯಾನ್‌ ಓಬ್ರಿಯಾನ್‌ ತಲಾ ಮೂರು ವಿಕೆಟ್‌ ಪಡೆದಿದ್ದಾರೆ. ಡೇನಿಯರ್‌ ವೆಟ್ಟೋರಿ ೨ ಹಾಗೂ ಕೈಲ್‌ ಮೀಲ್‌-೧ ವಿಕೆಟ್‌ ಕಿತ್ತರು. ಎರಡನೇ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಆರಂಭಿಕ ಆಟಗಾರ ಟೆಮ್‌ ಮೆಕಿಂತೋಶ್‌ರನ್ನು ಶೂನ್ಯದಲ್ಲೇ ಕಳೆದುಕೊಂಡಿತು. ಜಹೀರ್‌ ಖಾನ್‌ ಎಸೆತಕ್ಕೆ ಬಲಿಯಾದರು. ಎಂಜೆಗಪ್ಪಿಲ್‌ ೪೮ ರನ್‌ ಗಳಿಸಿದ್ದಾಗ ಹರಭಜನ್‌ ಬೌಲಿಂಗ್‌ನಲ್ಲಿ ವೀರೇಂದ್ರ ಸೆಹ್ವಾಗ್‌ಗೆ ಕ್ಯಾಚ್‌ ಇತ್ತರು. ನಂತರ ಬಂದ ಕೆ.ಡಿ. ಮಿಲ್ಸ್‌ ಹೆಚ್ಚು ಹೊತ್ತು ನಿಲ್ಲದೆ ಎರಡು ರನ್‌ ಅಗಿದ್ದಾಗ ಮುನಾಫ್‌ ಪಟೇಲ್‌ಗೆ ಎಲ್‌.ಬಿ. ಆದರು. ನ್ಯೂಜಿಲೆಂಡ್‌ ಇನ್ನಿಂಗ್ಸ್‌ ೨೭೯. ಎರಡನೇ ಇನ್ನಿಂಗ್ಸ್‌ಗೆ ೭೫/೩ (೩೧ ಓವರ್‌) ಭಾರತ ಮೊದಲ ಇನ್ನಿಂಗ್ಸ್‌ ೫೨೦ : ಬ್ಯಾಟಿಂಗ್‌- ಗೌತಮ್‌ ಗಂಭೀರ್‌ ೭೨, ವೀರೇಂದ್ರ ಸೆಹ್ವಾಗ್‌ ೨೪, ರಾಹುಲ್‌ ದ್ರಾವಿಡ್‌ ೬೬, ಸಚಿನ್‌ ತೆಂಡೂಲ್ಕರ್‌ ೧೬೦, ವಿವಿಎಸ್‌ ಲಕ್ಷ್ಮಣ್‌-೩೦, ಯುವ ರಾಜ್‌ ಸಿಂಗ್‌- ೨೨, ಮಹೇಂದ್ರ ಸಿಂಗ್‌ ಧೋನಿ-೪೭, ಹರಭಜನ್‌ ಸಿಂಗ್‌- ೧೬, ಜಹೀರ್‌ ಖಾನ್‌- ೫೧*, ಇಶಾಂತ್‌ ಶರ್ಮಾ-೬, ಮುನಾಫ್‌ ಪಟೇಲ್‌-೯. ಬೌಲಿಂಗ್‌ : ಕ್ರಿಸ್‌ ಮಾರ್ಟಿನ್‌ ೩೦-೯-೯೮-೩, ಕೈಲ್‌ ಮಿಲ್ಸ್‌ ೨೨-೪-೯೮-೧, ಇಯಾನ್‌ ಓಬ್ರಿ ಯಾನ್‌ ೩೩-೭-೧೦೩-೩, ಜೇಮ್ಸ್‌ ಫ್ರಾಂಕ್ಲಿನ್‌ ೨೩-೧-೯೮-೦, ಡೇನಿ ಯಲ್‌ ವೆಟ್ಟೋರಿ ೩೫.೪-೮- ೯೦-೨,

No Comments to “ಸಚಿನ್‌ ೪೨ ನೇ ಶತಕ : ಗೆಲುವಿನತ್ತ ಭಾರತ”

add a comment.

Leave a Reply

You must be logged in to post a comment.