ಜನತಾಧ್ವನಿ : ಗ್ರಾಮರ್‌ ತುಂಬ ಉಪಯುಕ್ತವಾಗಿದ

ಮಾನ್ಯರೆ, ಜನತಾ ಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಆಂಗ್ಲ ಭಾಷೆಯ ಗ್ರಾಮರ್‌ ನನಗೆ ತುಂಬಾ ಇಷ್ಟವಾಗಿದೆ. ಇದರಿಂದ ನನಗೆ ಹಾಗೂ ನನ್ನಂತಹ ಸಾವಿರಾರು ಹೈಸ್ಕೂಲ್‌ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅತ್ಯಂತ ಸರಳವಾದ ವಿಧಾನದಲ್ಲಿ ಅರ್ಥವಾಗುವಂತೆ ಬರೆಯುತ್ತಿರುವ ಶ್ರೀಯುತ ರವಿ ಹಾಗೂ ನಯನ ತಾರಾಮಣಿಯವರಿಗೆ ನನ್ನ ಧನ್ಯವಾದಗಳು. ಇಂತಹ ಉಪಯುಕ್ತ ಗ್ರಾಮರ್‌ ಅನ್ನು ಪ್ರಕಟಿಸುತ್ತಿರುವ ಜನತಾ ಮಾಧ್ಯಮ ಪತ್ರಿಕೆಗೂ ನನ್ನ ಕೃತಜ್ಞತೆಗಳು. ಹೈಸ್ಕೂಲ್‌ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪರೀಕ್ಷೆಯ ಸಮಯದಲ್ಲಿ ಅತ್ಯಂತ ಕ್ಲಿಷ್ಟವೆನಿಸುವ ಇಂಗ್ಲೀಷ್‌ ಗ್ರಾಮರ್‌ ಅನ್ನು ಸುಲಭವಾಗಿ ಅರ್ಥವಾಗಿಸಿ ಸಂತೋಷದಿಂದ ವಿದ್ಯಾರ್ಥಿಗಳೆಲ್ಲ ಪ್ರತಿದಿನವೂ ನಿಮ್ಮ ಪತ್ರಿಕೆಗಾಗಿ ಕಾಯುವಂತೆ ಮಾಡಿದೆ. ಇದೇ ರೀತಿ ಮುಂದೆಯೂ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಹೆಚ್ಚಾಗಿ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ. – ಎಂ.ಜಿ. ಗ್ರೀಷ್ಮಾ ೮ ನೇ ತರಗತಿ, ವಿಜಯ ಶಾಲೆ, ಹಾಸನ.

No Comments to “ಜನತಾಧ್ವನಿ : ಗ್ರಾಮರ್‌ ತುಂಬ ಉಪಯುಕ್ತವಾಗಿದ”

add a comment.

Leave a Reply