ಜನತಾಧ್ವನಿ : ಆಯುರ್ವೇದ ಪದಟಛಿತಿ ಉಳಿಸಿ

ಮಾನ್ಯರೆ, ಜೀವ ಜಗತ್ತು ಸೃಷ್ಟಿಯಾದಾಗಿನಿಂದ ರೋಗ, ರುಜಿನಗಳು ಸಹ ಈ ಭೂಮಿಯ ಎಲ್ಲಾ ಪ್ರದೇಶಗಳಲ್ಲಿಯೂ ವ್ಯಾಪಿಸಿದೆ. ಅಂದರೇ ಘಿ‘ಜಲಚರ ಪ್ರಾಣಿ ಸಂಕುಲ ಸಹಿತಘಿ’ ಪೂರ್ವದಲ್ಲಿ ವ್ಯಾಧಿಗಳ ಯಾದಿ ಅಷ್ಟಾಗಿ ಮಾನವರನ್ನು ಆತಂಕಕ್ಕೆ ಸಿಲುಕಿಸಿದ್ದರೂ, ಸೃಷ್ಟಿ ನಿಯಮದಂತೆ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಿಕ್ಕುವಂತಹ ಗಿಡಮೂಲಿಕೆ ಔಷಧಿಗಳನ್ನೇ ಉಪಯೋಗಿಸಿ ರೋಗ ನಿವಾರಣೆ ಮಾಡಿಕೊಳ್ಳುತ್ತಿದ್ದರು ಎಂಬುದಾಗಿ ಹಿರಿಯ ನಾಗರಿಕರು ಹೇಳುವುದನ್ನು ಕೇಳಿದ್ದೇವೆ. ಗಿಡಮೂಲಿಕೆಗಳ ವಿಚಾರವನ್ನು ಗಾಂಧೀಜಿಯವರು ಆತ್ಮಪೂರ್ವಕವಾಗಿ ಒಪ್ಪಿ ಸ್ವತಃ ತಾವೂ ಅದನ್ನು ಪಾಲಿಸಿ ತೋರಿಸಿರುವ ಅನೇಕ ನಿದರ್ಶನಗಳಿವೆ. ಈಗಲೂ ಸಹ ಶೀತ, ನೆಗಡಿ, ಕೆಮ್ಮು, ವಾಂತಿ, ಕೆಲವು ಸ್ತ್ರೀರೋಗ ಸಮಸ್ಯೆಗಳು, ಜಾಂಡೀಸ್‌, ಬಂಜೆತನ ಮುಂತಾದ ಚಿಕ್ಕ-ಪುಟ್ಟ ರೋಗಗಳಿಗೆ ಗಿಡ ಮೂಲಿಕೆಗಳನ್ನು ಬಳಸಿಕೊಂಡು ನಿವಾರಣೆ ಮಾಡಿಕೊಳ್ಳುತ್ತಾ ಬರಲಾಗಿದೆ. ಅಲೋಪತಿ ವೈದ್ಯಪದಟಛಿತಿಯ ಆಗಮನದ ನಂತರ ಪೂರ್ವಕಾಲದ (ಋಷಿಮುನಿಗಳು ಕಂಡುಹಿಡಿದ ಔಷಧಿಗಳು) ಆಯುರ್ವೇದ ವೈದ್ಯ ಪದಟಛಿತಿಯು ಕಣ್ಮರೆಯಾಗಿ ಹೋದಂತಿದ್ದರು. ಈಗ ಪುನಶ್ಚೇತನಗೊಂಡಿದೆ. ಈ ಗಿಡಮೂಲಿಕೆಯು ರೋಗಗಳ ಮೇಲೆ ಬೀರುವ ಪ್ರಭಾವವನ್ನು ಮತ್ತು ಅದರ ಚಮತ್ಕಾರ ಗಮನಿಸಿದ ಸರಕಾರವೇ ಪುನಃ ಆಯುರ್ವೇದ ಪದಟಛಿತಿ, ಯುನಾನಿ ಪದಟಛಿತಿ ಇವುಗಳಿಂದಲೂ ರೋಗಗಳನ್ನು ನಿವಾರಿಸಬಹುದೆಂಬ ತೀರ್ಮಾನಕ್ಕೆ ಬಂದು, ಇದಕ್ಕೆ ಸಂಬಂಧಪಟ್ಟಂತೆ ಆಯುರ್ವೇದದ ಕಾಲೇಜುಗಳನ್ನು ಸರಕಾರವೇ ತೆರೆದು, ಅಧ್ಯಯನ ಮಾಡಿ, ಪರಿಣಿತಿ ಪಡೆದು, ಜನಸೇವೆ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆಧುನಿಕ ವೈದ್ಯ ಪದಟಛಿತಿ, ಆಯುರ್ವೇದ ವೈದ್ಯ ಪದಟಛಿತಿ ಹಾಗೂ ಹೋಮಿಯೋಪತಿ ಇವುಗಳೆಲ್ಲದರ ಮೂಲ ಉದ್ದೇಶ ಸಾರ್ವಜನಿಕರ ರೋಗ ನಿವಾರಣೆ ಗುರಿಯೆ ವಿನಾಃ ಬೇರೆ ಉದ್ದೇಶವಿರುವುದಿಲ್ಲ. ಸರಕಾರದ ಉದ್ದೇಶಕ್ಕನುಗುಣವಾಗಿ ವಿದ್ಯಾರ್ಥಿಗಳು ಲಕ್ಷಾಂತರ ರೂ. ಗಳನ್ನು ವ್ಯಯ ಮಾಡಿ ವಿದ್ಯಾರ್ಜನೆ ಮಾಡಿ ಪಾಂಡಿತ್ಯವನ್ನು ಸಹ ಸಂಪಾದಿಸಿಕೊಂಡಿರುತ್ತಾರೆ. ದೇಶ ವಿದೇಶಗಳಲ್ಲಿಯೂ ಆಯುರ್ವೇದ ವೈದ್ಯ ಪದಟಛಿತಿಯನ್ನು ಅನುಸರಿಸಬೇಕೆಂಬ ಆತ್ಮಸಾಕ್ಷಿಯ ಪ್ರೇರಣೆಯಿಂದಲೂ ಸಾರ್ವಜನಿಕರು ಆಯುರ್ವೇದ ಔಷಧಗಳನ್ನು ಬಳಸುತ್ತಿದ್ದಾರೆ. ಆಯುರ್ವೇದ ಔಷಧ ಪಡೆಯಬೇಕೆಂದು ಹಳ್ಳಿ ಪಟ್ಟಣಗಳಿಂದಲೂ ದವಾಖಾನೆಗೆ ರೋಗಿಗಳು ಬರುತ್ತಿದ್ದಾರೆ. ಆದರೆ ಎಲ್ಲಿಯೂ ಸಮರ್ಪಕವಾಗಿ ಆಯುರ್ವೇದ ಔಷಧಿಗಳು ಲಭ್ಯವಿಲ್ಲದೇ ನಿರಾಸೆಯಿಂದ ಹಿಂದಿರುಗಿ ಇಂಗ್ಲೀಷ್‌ ಔಷಧಿಗಳನ್ನು ಬಳಸುವಂತಾಗಿದೆ. ಸರಕಾರ ರೋಗಿಗಳ ಮೇಲೆ ಕಾಳಜಿಯಿಟ್ಟು, ದೇಶೀಯ ವೈದ್ಯ ಪದಟಛಿತಿಯಿಂದ ಕಡಿಮೆ ವೆಚ್ಚದಲ್ಲಿ ವ್ಯಾಧಿ ಯನ್ನು ನಿವಾರಿಸಿಕೊಂಡು ಬದುಕಲಿ ಎಂಬ ಉದ್ದೇಶವನ್ನಿಟ್ಟು ಆಯುರ್ವೇದ ಪದಟಛಿತಿಯನ್ನು ಮತ್ತಷ್ಟು ಪ್ರಚುರಪಡಿಸಬೇಕಿದೆ. ೧೦-೧೫ ವರ್ಷಗಳಾದರೂ ಕೆಲವು ಹಳ್ಳಿ ಆಸ್ಪತ್ರೆಗಳಲ್ಲಿ ಆಯುರ್ವೇದ ವೈದ್ಯರನ್ನು ನೇಮಿಸಿದ್ದಾರೆಯೇ ವಿನಾಃ ಆಯುರ್ವೇದ ಔಷಧಿಗಳನ್ನು ಸಂಬಂಧಪಟ್ಟ ಇಲಾಖೆಯವರು ಕಳುಹಿಸುತ್ತಿಲ್ಲ ಹಾಗೂ ಹೊಸದಾಗಿ ನೇಮಕಗೊಂಡಿರುವ ಆಯುಷ್‌ ವೈದ್ಯರು ಕೈಕಟ್ಟಿಕೂರುವಂತೆ ಆಗಿದೆ. ಸರ್ಕಾರವು ಆಯುರ್ವೇದ ಕಾಲೇಜುಗಳನ್ನು ತೆರೆಯುವುದು, ಆಯುರ್ವೇದ ವೈದ್ಯರುಗಳನ್ನು ತಯಾರು ಮಾಡುವುದು, ಸರಕಾರವೇ ಅವರನ್ನು ಕೆಲಸಕ್ಕೆ ಕರೆದು ವೃತ್ತಿಯನ್ನು ನೀಡುವುದು. ಪುನಃ ಕೆಲಸದಿಂದ ತೆಗೆದು ಅಲೋಪತಿ ವೈದ್ಯರನ್ನು ಆ ಜಾಗಕ್ಕೆ ನೇಮಿಸುವುದು. ಈ ರೀತಿಯ ನಡವಳಿಕೆಗಳು ನಡೆಯುತ್ತಾ ಹೋದಲ್ಲಿ ಸಮಸ್ಯೆಗಳ ಉಗಮಕ್ಕೆ ಎಲ್ಲೆ ಇಲ್ಲದಂತಾಗುತ್ತದೆ. – ರಂಗಸ್ವಾಮಿ, ಹಾಸನ

No Comments to “ಜನತಾಧ್ವನಿ : ಆಯುರ್ವೇದ ಪದಟಛಿತಿ ಉಳಿಸಿ”

add a comment.

Leave a Reply

You must be logged in to post a comment.