ಜಿಲ್ಲೆಗೆ ೧೩೬೦ ಕೋಟಿ ರೂ. ಸಾಲ ಯೋಜನೆ

ಹಾಸನ : ೨೦೦೯-೧೦ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕುಗಳ ಮೂಲಕ ಸಾಲ ವಿತರಿಸಲು ೧೩೬೦ .೦೪ ಕೋಟಿ ರೂ. ವಾರ್ಷಿಕ ಸಾಲ ಯೋಜನೆಯನ್ನು ಮಾರ್ಗದರ್ಶಿ ಬ್ಯಾಂಕ್‌ ಕೆನರಾ ಬ್ಯಾಂಕ್‌ ಸಿದಟಛಿಪಡಿಸಿದೆ. ಆದ್ಯತಾ ಕ್ಷೇತ್ರಗಳಾದ ಕೃಷಿ, ವ್ಯಾಪಾರ ಹಾಗೂ ಕೈಗಾರಿಕೆಗಳಿಗೆ ೧೧೬೩.೯೮ ಕೋಟಿ ರೂ., ಆದ್ಯತಾ ರಹಿತ ಕ್ಷೇತ್ರಕ್ಕೆ ೧೯೬.೦೬ ಕೋಟಿ ರೂ. ಮೀಸಲಿಡಲಾಗಿದೆ. ಎಲ್ಲ ಶಾಖಾ ಬ್ಯಾಂಕುಗಳೂ ಸಿದಟಛಿಪಡಿಸಿದ ಸಾಲ ಯೋಜನೆಯನ್ನು ತಾಲ್ಲೂಕು ಮಟ್ಟ , ಆನಂತರ ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಿ ಜಿಲ್ಲೆಯ ವಾರ್ಷಿಕ ಸಾಲ ಯೋಜನೆಯನ್ನು ರೂಪಿಸಲಾಗಿದೆ. ನಗರದ ಕೆನರಾ ಬ್ಯಾಂಕ್‌ ವಿಭಾಗೀಯ ಕಚೇರಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಶಂಕರ್‌ನಾರಾಯಣ್‌ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು. ಆದ್ಯತಾ ಕ್ಷೇತ್ರದಲ್ಲಿ ಮೊದಲ ಸ್ಥಾನ ಕೃಷಿಗೆ ಸಿಕ್ಕಿದೆ. ೭೮೯.೬೦ ಕೋಟಿ ರೂ. ಸಾಲದ ಗುರಿ ನಿಗದಿಪಡಿಸಲಾಗಿದೆ. ನಂತರದ ಸ್ಥಾನ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಲಭಿಸಿದ್ದು , ೩೩೨.೮೧ ಕೋಟಿ ರೂ. ಹಾಗೂ ಕೈಗಾರಿಕೆಗೆ ೪೧.೫೭ ಕೋಟಿ ರೂ. ಸಾಲ ಕಾಯ್ದಿರಿಸಲಾಗಿದೆ. ಠೇವಣಿ ಹಾಗೂ ಸಂಪನ್ಮೂಲಕ್ಕನು ಗುಣವಾಗಿ ಬ್ಯಾಂಕುಗಳಿಗೆ ಸಾಲದ ಗುರಿ ನೀಡಲಾಗಿದೆ. ೭ ಬ್ಯಾಂಕುಗಳು, ತಲಾ ೫೦ ಕೋಟಿಗೂ ಹೆಚ್ಚಿನ ಸಾಲವನ್ನು ವಿತರಿಸಲಿವೆ. ಸಾಲ ಯೋಜನೆಯಲ್ಲಿ ಕೆನರಾ ಬ್ಯಾಂಕ್‌ ಶೇ. ೨೩.೭೩ ಪಾಲು ಹೊಂದಿದ್ದು, ೩೨೨.೬೭ ಕೋಟಿ ರೂ. ಸಾಲ ಹಂಚುವ ಗುರಿ ಕೊಡಲಾಗಿದೆ. ಜಿಲ್ಲಾ ಸಹಕಾರಿ ಬ್ಯಾಂಕ್‌ ಶೇ. ೧೮.೨೨ ರಷ್ಟು ಪಾಲು ಪಡೆದಿದ್ದು, ೨೪೭.೭೮ ಕೋಟಿ ರೂ. ಸಾಲ ಹಂಚುವ ಹೊಣೆ ವಹಿಸಲಾಗಿದೆ. ನಂತರದ ಸ್ಥಾನಗಳಲ್ಲಿರುವ ಸ್ಟೇಟ್‌ ಬ್ಯಾಂಕ್‌ ಮೈಸೂರು ೨೦೬.೪೧ ಕೋಟಿ ರೂ. (ಶೇ. ೧೫.೧೮), ಕಾರ್ಪೊರೇಶನ್‌ ಬ್ಯಾಂಕ್‌ ೧೧೩.೬೧ ಕೋಟಿ ರೂ. (ಶೇ. ೮.೩೫), ಕಾವೇರಿ ಕಲ್ಪತರು ಬ್ಯಾಂಕ್‌ ೧೧೫.೦೬ ಕೋಟಿ ರೂ. (ಶೇ. ೮.೪೧), ಕರ್ನಾಟಕ ಬ್ಯಾಂಕ್‌ ೮೫.೧೯ ಕೋಟಿ ರೂ. (ಶೇ. ೬.೨೬), ವಿಜಯ ಬ್ಯಾಂಕ್‌ ೭೭.೨೯ ಕೋಟಿ ರೂ. (ಶೇ. ೫.೬೮), ಸಿಂಡಿಕೇಟ್‌ ಬ್ಯಾಂಕ್‌ ೪೮.೫೫ ಕೋಟಿ ರೂ. (ಶೇ. ೩.೫೭.), ಭಾರತೀಯ ಸ್ಟೇಟ್‌ ಬ್ಯಾಂಕ್‌ ೫೨.೮೪ ಕೋಟಿ ರೂ. (ಶೇ. ೩.೮೯), ಭೂ ಅಭಿವೃದಿಟಛಿ ಬ್ಯಾಂಕ್‌ ೧೩.೯೬ ಕೋಟಿ ರೂ. (ಶೇ. ೧.೦೨) ಹಾಗೂ ಕೆ.ಎಸ್‌.ಎಫ್‌.ಸಿ. ೭ ಕೋಟಿ ರೂ. (ಶೇ. ೦.೫೧) ಸಾಲ ವಿತರಿಸಲಿವೆ. ನಬಾರ್ಡ್‌ ನೆರವನ್ನು ಆಧರಿಸಿ ಸಾಲ ಯೋಜನೆ ತಯಾರಿಸಲಾಗಿದೆ. ಆದ್ಯತಾ ವಲಯಕ್ಕೆ ಅದು ೧೧೭೦.೫೧ ಕೋಟಿ ರೂ. ಸಹಾಯ ನೀಡಲಿದೆ. ಕಳೆದ ಸಾಲಿನ ಯೋಜನೆಗಿಂತ ಈ ಬಾರಿ ಶೇ. ೧೬ ರಷ್ಟು ಅಧಿಕ ಸಾಲವನ್ನು ಆದ್ಯತಾ ಕ್ಷೇತ್ರಕ್ಕೆ ಒದಗಿಸಲಾಗುತ್ತಿದೆ. ೨೫೩೯೧೬ ಫಲಾನುಭವಿಗಳಿಗೆ ಸಾಲ ನೀಡುವ ಗುರಿ ಇದೆ. ಇವರಲ್ಲಿ ೧೭೪೪೪೧ ರೈತರಿಗೆ ೭೮೯.೬೧ ಕೋಟಿ ರೂ. ಕೃಷಿ ಸಾಲ, ೫೭೦.೮೯ ಕೋಟಿ ರೂ. ಬೆಳೆ ಸಾಲ ಕೊಡಲಿದೆ. ನೀರಾವರಿಗೆ ೨೧.೯೫ ಕೋಟಿ ರೂ., ಭೂ ಅಭಿವೃದಿಟಛಿಗೆ ೩೨.೧೪ ಕೋಟಿ ರೂ., ಕೃಷಿ ಯಂತ್ರೋಪಕರಣಗಳಿಗೆ ೫೭.೮೬ ಕೋಟಿ ರೂ., ತೋಟಗಾರಿಕೆಗೆ ೬೩.೭೩ ಕೋಟಿ ರೂ. ಸಾಲ ನಿಗದಿಯಾಗಿದೆ. ಹೈನುಗಾರಿಕೆಗೆ ೧೭.೬೮ ಕೋಟಿ ರೂ., ಕೃಷಿ ಗೋದಾಮು ಹಾಗೂ ಮಾರುಕಟ್ಟೆ ವ್ಯವಸ್ಥೆಗೆ ೨.೭೧ ಕೋಟಿ ರೂ., ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹಾಗೂ ಸರ್ಕಾರದ ಇತರೆ ಪ್ರಾಯೋ ಜಿತ ನಿಯೋಜನೆಗಳಿಗೆ ೪೨೪.೬೮ ಕೋಟಿ ರೂ., ತೆಗೆದಿರಿಸಲಾಗಿದೆ. ಕಳೆದ ಬಾರಿಗಿಂತ ಈ ವರ್ಷ ಕೈಗಾರಿಕಾ ಕ್ಷೇತ್ರಕ್ಕೆ ಶೇ. ೧೮ ಹಾಗೂ ವ್ಯಾಪಾರ-ಉದ್ದಿಮೆಗಳಿಗೆ ಶೇ. ೩೦ ರಷ್ಟು ಹೆಚ್ಚಿನ ನೆರವು ದೊರೆತಿದೆ. ಕಳೆದ ಸಾಲಿನ ಸಾಧನೆ ೨೦೦೮-೦೯ರಲ್ಲಿ ೧೧೮೦ ಕೋಟಿ ರೂ. ಸಾಲ ಯೋಜನೆ ಸಿದ್ದಪಡಿಸಿ ಕಳೆದ ಡಿಸೆಂಬರ್‌ ಅಂತ್ಯದವರೆಗೆ ೭೭೨ ಕೋಟಿ ರೂ. ಪ್ರಗತಿ ಸಾಧಿಸಲಾಗಿದೆ (ಶೇ. ೬೫). ಮಾರ್ಚ್‌ ಅಂತ್ಯಕ್ಕೆ ನಿಗದಿತ ಗುರಿ ಸಾಧನೆಯಾಗಲಿದೆ. ಸರ್ಕಾರಿ ಯೋಜನೆಗಳ ಫಲಾನು ಭವಿಗಳಿಗೆ ಸುಲಭವಾಗಿ ಹಣ ಪಾವತಿಸಲು ೨೯೩೩೦೮ ಖಾತೆಗಳನ್ನು ಅತಿ ಕಡಿಮೆ ಮೊತ್ತದಲ್ಲಿ ತೆರೆದು ಬ್ಯಾಂಕ್‌ ಸೇವೆ ಒದಗಿಸಲಾಗಿದೆ. ಕೃಷಿ ಕ್ಲಿನಿಕ್‌ ಹಾಗೂ ಕೃಷಿ ವ್ಯಾಪಾರ ಕೇಂದ್ರ ಸ್ಥಾಪನೆಗೆ ಕೃಷಿ ಹಾಗೂ ಪಶು ವೈದ್ಯಕೀಯ ಪದವೀಧರರಿಗೆ ಸಾಲ ನೀಡಲಾಗಿದೆ. ೨೧೬ ಸ್ವಸಹಾಯ ಸಂಘಗಳು ನೆರವು ಪಡೆದಿವೆ. ಜಿಲ್ಲೆಯಲ್ಲಿ ವಿವಿಧ ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳ ೨೧೧ ಶಾಖೆಗಳಿದ್ದು, ಅವುಗಳಲ್ಲಿ ೧೨೫ ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿವೆ.

No Comments to “ಜಿಲ್ಲೆಗೆ ೧೩೬೦ ಕೋಟಿ ರೂ. ಸಾಲ ಯೋಜನೆ”

add a comment.

Leave a Reply

You must be logged in to post a comment.