ರಾಮ್‌ಕುಮಾರ್‌, ಅಭಿಜಿತ್‌ ಈಗ ಜೋಡಿ ನಂ .೧

ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಜಮಾನ. ದಿನೇ ದಿನೇ ಒಂದಷ್ಟು ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇರುತ್ತವೆ. ಹೊಸಬರ ನಡುವೆ ಕಳೆದು ಹೋಗಿದ್ದ ಒಂದು ಸಮಯದ ಬೇಡಿಕೆಯ ನಟರಾದ ರಾಮ್‌ ಕುಮಾರ್‌ ಹಾಗೂ ಅಭಿಜಿತ್‌ ಈಗ ಘಿ‘ಜೋಡಿ ನಂ .೧ಘಿ’ ಆಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಸಂಪೂರ್ಣ ಹೊಣೆಯನ್ನು ಇದೇ ಮೊದಲ ಬಾರಿಗೆ ಅಭಿಜಿತ್‌ ವಹಿಸಿಕೊಂಡಿದ್ದಾರೆ. ಅವರೇ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಭಿಜಿತ್‌ ನಿರ್ಮಾಣದ ಕೊನೆಯ ಚಿತ್ರ ಘಿ‘ಸಮರಸಿಂಹ ನಾಯ್ಕಘಿ’ ಆದರೆ ಚಿತ್ರ ಮಾತ್ರ ಸೋತಿತ್ತು. ಈಗ ಮತ್ತೆ ಬಂದಿದ್ದಾರೆ. ಕೊಲೆಯ ರಹಸ್ಯದ ಸುತ್ತ ಘಿ‘ಜೋಡಿ ನಂ .೧ಘಿ’ ಚಿತ್ರವನ್ನು ಹೆಣೆಯಲಾಗಿದೆಯಂತೆ. ಚಿತ್ರದಲ್ಲಿ ಅಮೃತಾ ಮತ್ತು ಸಂಗೀತಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಹೊರ ಬಿದ್ದಿದೆ. ಈ ಬಾರಿಯಾದರೂ ಜನ ಈ ಚಿತ್ರವನ್ನು ಹರಸಲಿ ಎಂದು ಆಶಿಸೋಣ.

No Comments to “ರಾಮ್‌ಕುಮಾರ್‌, ಅಭಿಜಿತ್‌ ಈಗ ಜೋಡಿ ನಂ .೧”

add a comment.

Leave a Reply

You must be logged in to post a comment.