ಅಮಿಷಾ ಪಟೇಲ್‌ ಕನ್ನಡ ಚಿತ್ರಕ್ಕೆ

ಕನ್ನಡ ಚಿತ್ರವೊಂದರಲ್ಲಿ ಅಮಿಷಾ ಪಟೇಲ್‌ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ ಘಿ‘ಆಥನೊಕ್ಕಡೆಘಿ’ ಯನ್ನು ನವೀನ್‌ ಎಂಬುವರು ಕನ್ನಡದಲ್ಲಿ ರೀಮೇಕ್‌ ಮಾಡಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಮಿಷಾ ಪಟೇಲ್‌ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರಕ್ಕೆ ಯುಗಾದಿ ದಿನದಂದು ಮುಹೂರ್ತ ಇಡಲಾಗಿದೆ. ಚಿತ್ರದ ಶೂಟಿಂಗ ಮಾತ್ರ ಏಪ್ರಿಲ್‌ನಲ್ಲಿ ನಡೆಯಲಿದೆ. ಚಿತ್ರದ ಇತರ ತಾರಾಬಳಗದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಆದರೆ ಈ ಸುದ್ದಿ ಕನ್ನಡದ ಅನೇಕ ನಾಯಕಿಯರ ನಿದ್ದೆಗೆಡಿಸಿದೆಯಂತೆ. ಈಗಾಗಿಲೇ ಬಾಲಿವುಡ್‌ನ ಹಲವು ಬಾಂಬ್‌ಗಳನ್ನು ತಂದು ಕನ್ನಡದಲ್ಲಿ ಸಿಡಿಸಿದ್ದಾರೆ. ಈಗ ಅಮಿಷಾ ಸರದಿ. ಈ ಬಾಂಬ್‌ ಸಿಡಿದರೆ ಏನಾಗುತ್ತದೋ ನೋಡಬೇಕು. ಕಳೆದ ವರ್ಷ ಘಿ‘ಪ್ರೀತಿ ಏಕೆ ಭೂಮಿ ಮೇಲಿದೆಘಿ’ ಚಿತ್ರದಲ್ಲಿ ಸೆಕ್ಸಿ ಬಾಂಬ್‌ ಮಲ್ಲಿಕಾ ಶೆರಾವತ್‌ ಹೆಜ್ಜೆ ಹಾಕಿದರೂ ಪ್ರೇಕ್ಷಕ ಮಾತ್ರ ಚಿತ್ರವನ್ನು ಜಾಡಿಸಿ ಒದ್ದಿದ್ದ. ಆದರೆ ಲೋಕಸಭಾ ಚುನಾವಣೆಯಲ್ಲಿ ಅಮಿಷಾ ಗುಜರಾತ್‌ನಿಂದ ಕಣಕ್ಕಿಳಿದಿದ್ದಾರೆ. ಈಗವರು ರಾಜಕೀಯದಲ್ಲಿ ಬ್ಯುಸಿ ಎಂಬ ಸುದ್ದಿಯೊಂದಿಗೆ ಈ ಸುದ್ದಿ ಎಷ್ಟು ನಿಜವೋ ಗೊತ್ತಿಲ್ಲ.

No Comments to “ಅಮಿಷಾ ಪಟೇಲ್‌ ಕನ್ನಡ ಚಿತ್ರಕ್ಕೆ”

add a comment.

Leave a Reply

You must be logged in to post a comment.