ದಿಲ್‌ವಾಲೇ … ೧೪ ನೇ ವರ್ಷಕ್ಕೆ

ನಿರಂತರ ಪ್ರದರ್ಶನಕ್ಕೆ ಸಂಬಂಧಿಸಿ ಶೋಲೆ ಎಂಬ ಭರ್ಜರಿ ಹಿಂದಿ ಚಿತ್ರದ ಹೆಸರಲ್ಲಿದ್ದ ದಾಖಲೆಯನ್ನು ೨೦೦೧ ರಲ್ಲೇ ನುಗ್ಗಿ ಮುಂದೋಡಿದ್ದ ಘಿ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇಘಿ’ (ಡಿಡಿಎಲ್‌ಜೆ) ಎಂಬ ಮತ್ತೊಂದು ಬಾಲಿವುಡ್‌ ಪ್ರೇಮ ಕಥಾನಕ, ಇದೀಗ ೭೦೦ ವಾರಗಳ (ಅಂದರೆ ಸುಮಾರು ಹದಿಮೂರುವರೆ ವರ್ಷ) ನಿರಂತರ ಪ್ರದರ್ಶನ ಕಂಡು ಹೊಸ ದಾಖಲೆ ಮಾಡಿದೆ. ೧೯೭೫ ರಿಂದ ೧೯೮೦ ರವರೆಗೆ ಶೋಲೆ ಚಿತ್ರವು ಮಿನರ್ವ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡು ಐದು ವರ್ಷಗಳ ದಾಖಲೆ ಸೃಷ್ಟಿಸಿದ್ದು, ಇದೀಗ ೧೯೯೫ ರ ಅಕ್ಟೋಬರ್‌ ತಿಂಗಳಲ್ಲಿ ಮುಂಬಯಿಯ ಮರಾಠ ಚಿತ್ರ ಮಂದಿರದಲ್ಲಿ ಬಿಡುಗಡೆಯಾದಂದಿನಿಂದ ಪ್ರದರ್ಶನಗೊಳ್ಳುತ್ತಿರುವ ಡಿಡಿಎಲ್‌ಜೆ ಭಾರತೀಯ ಚಲನಚಿತ್ರ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದೆ ಮತ್ತು ಇನ್ನೂ ಮುನ್ನುಗ್ಗುತ್ತಲೇ ಇದೆ. ಪ್ರತಿಭಾನ್ವಿತ ನಿರ್ದೇಶಕ ಆದಿತ್ಯ ಚೋಪ್ರಾ ಮತ್ತು ಶಾರೂಖ್‌ ಖಾನ್‌- ಕಾಜೊಲ್‌ ಅವರ ತಾರಾ ಜೋಡಿಯುಳ್ಳ ಚಿತ್ರವು ೧೯೯೫ ರ ಅಕ್ಟೋಬರ್‌ ೨೦ ರಂದು ತೆರೆ ಕಂಡಿತ್ತು. ಆ ವರ್ಷದ ಪ್ರತಿಯೊಂದು ಪ್ರಮುಖ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಡಿಡಿಎಲ್‌ಜೆ ಇದುವರೆಗಿನ ಅತ್ಯುತ್ತಮ ರೋಮ್ಯಾಂಟಿಕ್‌ ಚಿತ್ರ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

No Comments to “ದಿಲ್‌ವಾಲೇ … ೧೪ ನೇ ವರ್ಷಕ್ಕೆ”

add a comment.

Leave a Reply