ಶಾಹಿದ್‌, ಪ್ರಿಯಾಂಕ ಇನ್‌ ಕಮೀನೆ

ಹರ್ಮಾನ್‌ ಬೇವಾಜಾ ಎಂಬ ತನ್ನ ಆತ್ಮೀಯ ಗೆಳೆಯನೊಂದಿಗೆ ಲವ್‌ ಸ್ಟೋರಿ-೨೦೫೦ ಸಿನಿಮಾದಲ್ಲಿ ತುಟಿಗೆ ತುಟಿ ಸೇರಿಸಿ ಕಿಸ್‌ ಮಾಡಲು ಹಿಂದೇಟು ಹಾಕಿದ್ದ ಪ್ರಿಯಾಂಕಾ ಈಗ ಘಿ‘ಕಮೀನೆಘಿ’ ಯಲ್ಲಿ ಶಾಹಿದ್‌ ಜತೆ ಮಾಡಿದ್ದಾಳಂತೆ ಎಂಬುದೇ ಬಾಲಿವುಡ್‌ನಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿತ್ತು. ಲವ್‌ ಸ್ಟೋರಿ-೨೦೫೦ ಸಿನಿಮಾದಲ್ಲಿ ಕಿಸ್‌ ಮಾಡುವ ಅಗತ್ಯ ಚಿತ್ರಕಥೆಗಿಲ್ಲ ಎಂದು ಪ್ರಿಯಾಂಕಾ ಸಾರಾಸಗಟಾಗಿ ಹೇಳಿಬಿಟ್ಟಿದ್ದಳು. ಪ್ರಿಯಾಂಕ ತುಂಬ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸಲು ಸ್ವಲ್ಪ ಹಿಂದೆಯೇ ಎಂಬ ಕಳಂಕ (?) ವೂ ಆಕೆಗಿತ್ತು. ಫ್ಯಾಷನ್‌ ಚಿತ್ರದಲ್ಲಿ ನಿರ್ದೇಶಕ ಮಧುರ್‌ ಭಂಡಾರ್ಕರ್‌ ಆಕೆಯನ್ನು ಇದಕ್ಕಾಗಿ ಸಾಕಷ್ಟು ತಿದ್ದಿ ತೀಡಿದ್ದರಂತೆ. ಆದರೆ ಘಿ‘ಕಮೀನೆಘಿ’ ಯಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಿಯಾಂಕಾ ಸುಧಾರಿಸಿದ್ದಾಳೆ. ಶಾಹಿದ್‌ ಜತೆಗಿನ ಹಲವು ಹಾಟ್‌ ಸೀನ್‌ಗಳಲ್ಲೂ ನಟಿಸಿದ್ದಾಳೆ ಎಂಬ ಗುಲ್ಲೂ ಈಗ ಹಬ್ಬಿದೆ. ಅಂದಹಾಗೆ, ಹುಡುಗಿಯರ ಆರಾಧ್ಯ ದೈವ ಶಾಹಿದ್‌ ಕಪೂರ್‌ ಕಿಸ್ಮತ್‌ ಕನೆಕ್ಷನ್‌ನಲ್ಲೇ ತುಂಬ ಚೆನ್ನಾಗಿ ಕಾಣಿಸಿದ್ದ. ಈಗ ಘಿ‘ಕಮೀನೆಘಿ’ ಯಲ್ಲಿ ಇನ್ನೂ ತೆಳ್ಳಗಾಗಿ ವಿಶೇಷ ಲುಕ್‌ನೊಂದಿಗೆ ಕಾಣಿಸಿದ್ದಾನಂತೆ. ಒಟ್ಟಿನಲ್ಲಿ ಹಲವು ಕುತೂಹಲಗಳ ಸರಣಿಯಲ್ಲೇ ಸುದ್ದಿ ಮಾಡಿರುವ ಘಿ‘ಕಮೀನೇಘಿ’ ನೋಡಲು ಜೂನ್‌ವರೆಗೂ ಕಾಯಬೇಕು.

No Comments to “ಶಾಹಿದ್‌, ಪ್ರಿಯಾಂಕ ಇನ್‌ ಕಮೀನೆ”

add a comment.

Leave a Reply

You must be logged in to post a comment.