ಯುಗಾದಿ ತರಲಿ ಹೊಸ ಹರುಷ

ಯುಗಾದಿ ಹಬ್ಬವು ಹಿಂದೂಗಳು ಆಚರಿಸುವ ಒಂದು ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದು ಶಾಲಿವಾಹನ ಶಕ ಸಂವತ್ಸರದ ಪ್ರಪ್ರಥಮ ಹಬ್ಬವಾಗಿದೆ. ಘಿ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆಘಿ’ ಎಂಬ ವರಕವಿ ಅಂಬಿಕಾತನಯದತ್ತ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ಅವರ ಕವನದ ಸಾಲುಗಳು ಪ್ರಕೃತಿಯ ಚಮತ್ಕಾರ ವನ್ನು ತಲಸ್ಪರ್ಶಿಯಾಗಿ ಬಣ್ಣಿಸುತ್ತವೆ. ಯುಗಾದಿ ಹಬ್ಬದ ದಿನವು ತ್ರಿಮೂರ್ತಿಗಳಲ್ಲಿ ಒಬ್ಬನೂ, ಸೃಷ್ಟಿಕರ್ತನೂ ಆದ ಬ್ರಹ್ಮದೇವನು ಜಗತ್ತನ್ನು ಸೃಷ್ಟಿ ಮಾಡಿದ ದಿನ.ಅಯೋಧ್ಯಾ ನಗರದಲ್ಲಿ ಶ್ರೀರಾಮಚಂದ್ರನು ಪಟ್ಟಾಭಿಷಿಕ್ತನಾದ ದಿನ. ಶಾಲಿವಾಹನ ಶಕೆ ಪ್ರಾರಂಭವಾದ ದಿನ ಎಂಬುದಾಗಿ ನಂಬಲಾಗಿದೆ. ಎಲ್ಲವೂ ಚೈತ್ರ ಶುದಟಛಿ ಪ್ರಥಮ ದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವವಿದೆ. ಹಿಂದೂ ಜ್ಯೋತಿಷ್ಯ ಶಾಸ್ತ್ರ, ಧರ್ಮಶಾಸ್ತ್ರ ಹಾಗೂ ಋತುಧರ್ಮಗಳನ್ನು ಅನುಸರಿಸಿ ಚೈತ್ರ ಶುದ್ದ ಪಾಡ್ಯಮಿಯನ್ನು ದಕ್ಷಿಣ ಭಾರತದವರು ಅದರಲ್ಲಿಯೂ ನಮ್ಮ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಜನರು ಯುಗಾದಿಯನ್ನು ವರ್ಷದ ಆರಂಭದ ದಿನವಾಗಿಯೂ, ಹಬ್ಬವಾಗಿಯೂ ಆಚರಿಸುತ್ತಾರೆ. ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಪ್ರಾರಂಭ ಎಂಬುದಾಗಿ ಹೇಳಬಹುದು. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ ಹಬ್ಬಗಳಲ್ಲಿ ಯುಗಾದಿಯು ಪ್ರಪ್ರಥಮ ಹಬ್ಬವಾಗಿ ಆಚರಿಸಲ್ಪಡುವುದು. ಭಾಸ್ಕರಾಚಾರ್ಯ ಎಂಬ ಸುಪ್ರಸಿದಟಛಿ ಹಿಂದೂ ಜ್ಯೋತಿಷ್ಯ ಶಾಸ್ತ್ರಜ್ಞನು ಘಿ‘ಯುಗಾದಿಕಾನಾಯ ಯುಗ ಪತ್ರವೃತ್ತಿಃಘಿ’ ಎಂದು ಹೇಳಿದ್ದಾನೆ. ಅಂದರೆ ಸೂರ್ಯನ ಚೈತ್ರ ಶುದಟಛಿ ಪಾಡ್ಯಮಿಯ ದಿನ ಭೂಮಧ್ಯ ರೇಖೆಯ ಮೇಲೆ ಇರುವುದರಿಂದ ಆ ದಿನವೇ ಯುಗಾದಿ ಎಂದರ್ಥ. ಯುಗಾದಿ ಬರುವ ಸಂದರ್ಭದಲ್ಲಿನ ಭೌಗೋಳಿಕ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಹಿಂಗಾರು ಬೆಳೆ ಸಂಪೂರ್ಣವಾಗಿ ಜನರ ಕೈಸೇರಿರುತ್ತದೆ. ಸುಗ್ಗಿಯ ದಿನಗಳನ್ನು ಜನ ಅನುಭವಿಸುತ್ತಿರುತ್ತಾರೆ. ಮುಂದಿನ ವರ್ಷದ ಆರಂಭದ ದಿನಕ್ಕಾಗಿ ಜನರಲ್ಲಿ ಹೆಚ್ಚಿನ ತುಡಿತವಿರುತ್ತದೆ. ಮರಗಿಡ ಬಳ್ಳಿಗಳಲ್ಲಿ ಎಲ್ಲೆಲ್ಲಿಯೂ ಹಳೆಯ ಎಲೆಗಳು ಉದುರಿಹೊಸ ಚಿಗುರು ಹಚ್ಚ ಹಸಿರು ಗೋಚರಿಸುತ್ತಿರುತ್ತದೆ. ಹೊಂಗೆ ಮೊದಲಾದ ಸಸ್ಯಗಳ ಹೂವುಗಳಲ್ಲಿ ದುಂಬಿಗಳ ಝೇಂಕಾರ ಕೇಳಿ ಬರುತ್ತದೆ.ಕಹಿ ಬೇವಿನಲ್ಲಿ ಹೂವಿನ ನಸುಕಂಪು ಕಂಡು ಬರುತ್ತದೆ. ಮಾವು, ಬೇವು ಮೊದಲಾದವು ಗಳಲ್ಲಿ ಚಿಗುರು ಎಲೆಗಳ ನಡುವೆ ಹೊಸ ಹೂವು ಕಾಣಿಸಿಕೊಂಡು ಪ್ರಕೃತಿ ಎಲ್ಲೆಲ್ಲಿಯೂ ಒಂದು ವಿಶೇಷತೆಯಿಂದ ವಿಜೃಂಭಿಸುತ್ತಿರು ತ್ತದೆ, ವಸಂತ ಋತುವಿನ ಆರಂಭದ ಹಂತ ಇದಾಗಿರುವುದರಿಂದ ಪ್ರತಿಯೊಂದು ಜೀವಿಗೂ ಹೊಸ ಕಳೆ, ಹೊಸತನ ಮತ್ತು ಹೊಸಜೀವ ಬಂದಂತೆ ಗೋಚರಿಸುತ್ತಿರುತ್ತದೆ. ಪ್ರಕೃತಿಯ ಸೌಂದರ್ಯ ಎಲ್ಲೆಲ್ಲಿಯೂ ಅಧಿ ಕಗೊಂಡಿರುವುದು ಎದ್ದು ಕಾಣುತ್ತದೆ. ವರ್ಷದ ಅವಧಿಯಲ್ಲಿ ಯುಗಾದಿ ಹಬ್ಬದ ದಿನವು ಶುಭ ದಿನವೆಂದು ಪರಿಗಣಿಸಲ್ಪಟ್ಟಿ ರುತ್ತದೆ. ಆ ದಿನ ಯಾವುದೇ ಮಂಗಳ ಕಾರ್ಯವನ್ನು ಪ್ರಾರಂಭಿಸಬಹುದು, ನೂತನ ಯೋಜನೆಯನ್ನು ಆರಂಭಿಸ ಬಹುದು, ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ. ಆ ದಿನದಿಂದ ಸುಖಸೌಖ್ಯಗಳು ಪ್ರಾಪ್ತವಾಗುತ್ತವೆ ಹಾಗೂ ಮುಂದಿನ ಬಾಳಿನಲ್ಲಿ ಬೆಂಬತ್ತಿ ಬರುತ್ತವೆ ಎಂಬುದಾಗಿ ಭಾವಿಸಲಾಗಿದೆ. ರೈತರು, ವ್ಯಾಪಾರಿಗಳು, ಯುಗಾದಿ ಹಬ್ಬದ ದಿನ ಶುಭಕಾರ್ಯಗಳನ್ನು ಆಚರಿಸುವರು. ಅನೇಕರು ವರ್ಷದ ಹೊಸ ಲೆಕ್ಕವನ್ನು ಆರಂಭಿಸುವರು.

No Comments to “ಯುಗಾದಿ ತರಲಿ ಹೊಸ ಹರುಷ”

add a comment.

Leave a Reply