ಬೆಳವಾಡಿ ಉದ್ಭವ ಗಣಪನ ಚರಿತ್ರೆ

ಪುರಾಣ ಕಾಲದಿಂದಲೂ ಪ್ರಸಿದಿಟಛಿ ಪಡೆದಿರುವ ಏಕಚಕ್ರನಗರ ಈಗ ಬೆಳವಾಡಿ ಎಂದು ಹೆಸರು ವಾಸಿಯಾಗಿದೆ. ಮಹಾ ಭಾರತದ ಕಾಲದಲ್ಲಿ ಭೀಮನು ಭಕಾಸುರನು ಏಕಚಕ್ರನಗರ (ಬೆಳವಾಡಿ)ದಲ್ಲಿ ಕೊಂದನೆಂದು ನಂಬಿಕೆ ಇದೆ. ಹಿಂದೆ ಬಂಡೆಯ ಮೇಲೆ ಬೆಳವಾಡಿಯ ಪಟೇಲರ ಹಸುವಂದೂ ಹಾಲನ್ನು ಈ ಬಂಡೆಯ ಮೇಲೆ ಹರಿಸುತ್ತಿತ್ತು. ಗ್ರಾಮದಲ್ಲಿ ಬಂಡೆಯಿಂದ ಒಡೆದು ಮೂಡಿದ ಗಣಪತಿ ಇದೆ. ಆದ್ದರಿಂದ ಹುತ್ತದ ಗಣಪತಿ ಎಂದು ಹೆಸರು ಬಂದಿದೆ. ಹಿಂದೆ ಈ ಬಂಡೆಯ ಮೇಲೆ ಹಲವಾರು ಶತಮಾನಗಳಿಂದ ಋಷಿಗಳು ತಪಸ್ಸು ಮಾಡಿದ್ದರೆಂಬ ನಂಬಿಕೆಯು ಇದೆ. ಈ ಗಣಪತಿಯು ಇನ್ನು ಬೆಳೆಯುತ್ತಿರುವುದರಿಂದ ಹಿಂದಿನ ಕಾಲದ ಕವಚ, ವಡವೆ ಮತ್ತು ಪಾದುಕೆಗಳು ಈಗ ಗಣಪತಿಗೆ ಹಿಡಿಸುವುದಿಲ್ಲ. ಈ ಗಣಪ ಉದ್ಭವ ಗಣಪತಿಗೆ ಹುತ್ತದ ಬೆಳವಾಡಿ ಉದ್ಭವ ಗಣಪನ ಚರಿತ್ರೆ ಗಣಪತಿ ಎಂದೂ ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಭಕ್ತಿಯಿಂದ ಏನೇ ಪ್ರಾರ್ಥನೆ ಮಾಡಿಕೊಂಡರೂ ಅದು ದೊರಕುವುದರಲ್ಲಿ ಸಂದೇಹವೇ ಇಲ್ಲ. ಇದು ಬಹಳ ಸತ್ಯದ ಗಣಪತಿಯಾದ್ದರಿಂದ ವಿಘ್ನಗಳನ್ನು ನಿವಾರಿಸುತ್ತಾ ಈ ಗ್ರಾಮದಲ್ಲಿ ನೆಲೆಸಿದ್ದಾನೆ. ಇದು ಈಗ ಒಂದು ಧಾರ್ಮಿಕ ಕ್ಷೇತ್ರವಾಗಿದೆ. ಈ ಸ್ಥಳ ಕರ್ನಾಟಕದಲ್ಲಿರುವು ದರಿಂದ ಬಹಳ ಹೆಮ್ಮೆ ಎನ್ನಿಸುತ್ತದೆ. ಚಿಕ್ಕ ಮಗಳೂರು ಜಿಲ್ಲೆಗೆ ಸೇರಿದ ಈ ಗ್ರಾಮ ಶೃಂಗೇರಿ ಮಠದ ದತ್ತು ಗ್ರಾಮವಾಗಿದ್ದು, ಹಳೇಬೀಡಿನಿಂದ ಸುಮಾರು ೨ ಕಿ.ಮೀ ದೂರ ದಲ್ಲಿದ್ದು ಮೂಲ ಸೌಕರ್ಯಗಳಿಂದ ವಂಚಿತ ವಾಗಿದೆ.ಈ ದೇವಸ್ಥಾನಕ್ಕೆ ಪ್ರವಾಸಿ ಗಳ ಸಂಖ್ಯೆ ಹೆಚ್ಚಿದ್ದರೂ ಕೂಡ ಯಾವುದೇ ಸೌಲಭ್ಯಗಳು ದೊರೆಯ ದಿರುವುದು ವಿಪರ್ಯಾಸ. ಈ ಊರಿನಲ್ಲಿ ಮತ್ತೊಂದು ಹೊಯ್ಸಳರ ಕಾಲದ ದೇವಸ್ಥಾನವಿದ್ದು ಬಹಳ ಸುಂದರವಾಗಿದೆ. ಕಲಾ ಕುಸುರಿಯ ಕೆತ್ತನೆ ಬಹಳ ಅದ್ಭುತವಾಗಿದ್ದು ಹಳೇಬೀಡಿನ ಈ ದೇವಸ್ಥಾನದಲ್ಲಿರುವ ಸುಮಾರು ೧೨೦ ರಿಂದ ೧೨೮ ಕಂಬಗಳಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿ ವಿಶೇಷವಾಗಿದೆ. ಈ ದೇವಸ್ಥಾನಕ್ಕೆ ತ್ರಿಕೂಟ ಛಲ ದೇವಾಲಯ ಎಂದು ಕರೆಯುತ್ತಾರೆ. ಇಲ್ಲಿ ವೀರನಾರಾಯಣ, ಯೋಗ ನರಸಿಂಹ, ಮತ್ತು ಕೊಳಲ ಗೋಪಾಲ ದೇವರುಗಳಿದ್ದು ಬೆಳಗಿನ ಹೊತ್ತು ಸೂರ್ಯ ಉದಯವಾಗುವಾಗ ಸೂರ್ಯನ ಕಿರಣ ವೀರನಾರಾಯಣ ಸ್ವಾಮಿಯ ಮೇಲೆ ಬಿದ್ದು ಮೂರ್ತಿಯು ಬಹಳ ಸುಂದರವಾಗಿ ಬೀಳುತ್ತದೆ. ಇದು ಹೊಯ್ಸಳರ ಕಾಲದಲ್ಲಿ ಕಟ್ಟಿದ ದೇವಸ್ಥಾನ ವಾದ್ದರಿಂದ ಸ್ವರ್ಗದ ಬಾಗಿಲ ದೇವಸ್ಥಾನ ಎಂದೂ ಮತ್ತೊಂದು ಹೆಸರು ಬಂದಿದೆ. ಯಾಕೆಂದರೆ ಹೊರಗಡೆಯಿಂದ ಗರ್ಭಗುಡಿಗೆ ಹೋಗುವಾಗ ಬಾಗಿಲುಗಳು ಸಿಗುತ್ತದೆ. ಆದ್ದರಿಂದ ಸ್ವರ್ಗದ ದೇವಸ್ಥಾನವೆಂದು ಕರೆಯುತ್ತಾರೆ. ಈ ದೇವಸ್ಥಾನ ಪ್ರಾಚ್ಯ ವಸ್ತು ಸಂಶೋ ಧನ ಇಲಾಖೆಗೆ ಸೇರಿದೆ. ಇಲ್ಲಿ ಹೊಯ್ಸಳರ ಶೀಲಾ ಶಾಸನವಿದ್ದು ಅದು ಹಳಗನ್ನಡದಲ್ಲಿದೆ. ಈ ದೇವಾಲಯದ ಸುತ್ತಾ ಹುಲ್ಲು ಹಾಸಿಗೆಯಂತಿದ್ದು ಬಹಳ ರಮಣೀಯ ವಾಗಿದೆ. ಇಲ್ಲಿ ಹಲವು ಚಲನಚಿತ್ರಗಳ ಚಿತ್ರೀಕರಣಗಳು ಸಹ ನೆಡೆದಿದ್ದು ಬಹಳ ಅದ್ಭುತ ಚಿತ್ರಗಳಾಗಿ ಕಂಗೊಳಿಸುತ್ತಿವೆ. ಈ ದೇವಸ್ಥಾನ ವೀರನಾರಾಯಣ ಸ್ವಾಮಿ ರಥೋತ್ಸವವೂ ಸಹ ಚೈತ್ರ ಮಾಸದಲ್ಲಿ ಬಹಳ ಅದೂಟಛಿರಿಯಾಗಿ ನಡೆಯುತ್ತದೆ. ಇನ್ನೊಂದು ಅದ್ಭುತ ವಿಶೇಷವೆಂದರೆ ಇಲ್ಲಿ ಮೂರು ಉದ್ಭವ ದೇವರುಗಳಿವೆ. ಎರಡು ಊರಿನ ಮಧ್ಯೆ ಇರುವ ಉದ್ಭವ ಗಣಪತಿ (ಹುತ್ತದ ಗಣಪತಿ ) ಇನ್ನೊಂದು ಉದ್ಭವ ಬಿಂದಿಗೆಯಮ್ಮ, ಉದ್ಭವ ಬಿಂದಿಗೆಯಮ್ಮ ದೇವರಿಗೆ ಗುಡಿ ಇದ್ದು, ಇಲ್ಲಿಗೆ ಕಾಶಿ ಗಂಗೆ ಬರುತ್ತದೆ ಎಂಬ ನಂಬಿಕೆಯೂ ಸಹ ಗ್ರಾಮಸ್ಥರಲ್ಲಿದೆ. ಬಿಂದಿಗೆಯಮ್ಮ ಮತ್ತು ದೇವತೆ ಕರಿಯಮ್ಮ ಜಾತ್ರೆಯು ಸಹ ನಡೆಯುತ್ತಿದೆ. ಇಲ್ಲಿ ಜನರ ಮೈಮೇಲೆ ದೇವರು ಬರುತ್ತದೆ. ಇನ್ನೊಂದು ಉದ್ಭವ ಕಲ್ಲೇಶ್ವರ ಸ್ವಾಮಿ ದೇವರು ಇದು ಊರಿನಿಂದ ಸುಮಾರು ೨.ಕಿ.ಮೀ ದೂರದ ತೋಟದಲ್ಲಿದೆ. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು ಬಹಳ ಸುಂದರವಾದ ಈಶ್ವರ ಲಿಂಗ ಉದ್ಭವವಾಗಿದೆ. ಈ ದೇವಸ್ಥಾನಕ್ಕೆ ಕೆಲವು ತಿಂಗಳ ಹಿಂದೆ ಜೀರ್ಣೋದಾಟಛಿರ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನಡೆಯಿತು. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಇರುವ ಒಂದು ನಾಗರಕಲ್ಲು ಎಂಥ ಡಿಜಿಟಲ್‌ಕ್ಯಾಮೆರಾ ಕಣ್ಣಿಗೂ ಸಿಗವುದಿಲ್ಲ. ಇದು ಬಹಳ ಸತ್ಯವಾಗಿದೆ ಎಂಬ ಪ್ರತೀತಿ ತಿಳಿದುಕೊಂಡಿದೆ. ಈ ನಾಗರ ಕಲ್ಲಿನ ಪೋಟೋ ತೆಗೆಯಲು ಹೋದರೆ ನಾಗರ ಕಲ್ಲು ಅಲ್ಲಾಡುತ್ತದೆ ಎಂಬ ನಂಬಿಕೆಯಿದೆ. ಕೆಲವು ತಿಂಗಳ ಹಿಂದೆ ನಡೆದ ಉದ್ಭವ ಗಣಪತಿ ದೇವಸ್ಥಾನದ ಚಂಡಿಯಾಗಕ್ಕೆ ಶೃಂಗೇರಿಯಿಂದ ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳು ಆಗಮಿಸಿ ದ್ದರು. ಈ ಕಾರ್ಯಕ್ರಮವೂ ಸಹ ಬಹಳ ಯಶಸ್ವಿಯಾಯಿತು. ಇಂತಹ ಪ್ರವಾಸಿ ತಾಣ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ಪ್ರವಾಸಿಗರಿಗೆ ಬಹಳ ತೊಂದರೆಯಾಗುತ್ತಿದೆ. ಗಣಪತಿ ದೇವಸ್ಥಾನದ ಪಕ್ಕ ಒಂದು ದೊಡ್ಡ ಕೆರೆಯಿದ್ದು ಅದನ್ನು ದನಕರಾಯ ಕಟ್ಟಿದನೆಂದು ಪ್ರತೀತಿ ಇದೆ. ಈ ಕೆರೆಯಲ್ಲಿ ಸ್ವಲ್ಪವಾದರೂ ನೀರು ಇದ್ದೇ ಇರುತ್ತದೆ. ಇದೇ ಈ ಕೆರೆಯ ವಿಶೇಷ. ಈ ಪ್ರವಾಸಿ ಕ್ಷೇತ್ರವನ್ನು ಅಭಿವೃದಿಟಛಿಪಡಿಸಿ ಪ್ರವಾಸಿಗರು ಹೆಚ್ಚು-ಹೆಚ್ಚು ಆಗಮಿಸುವಂತೆ ಗಮನ ಹರಿಸಬೇಕಿದೆ. ಈ ಊರಿನ ಮೌಲಿಕ ಜನಪದ ಕಲೆ ಯಕ್ಷಗಾನ. ಇದು ಬಯಲು ಸೀಮೆ ಯಕ್ಷಗಾನ ಎಂದೇ ಬಹಳ ಪ್ರಖ್ಯಾತಿ ಪಡೆದಿದೆ. ಎರಡು ಊರಿನ ಮಧ್ಯೆ ಈ ಕಲೆಯು ನಶಿಸುತ್ತಿರುವುದರಿಂದ ಇದನ್ನು ಉಳಿಸಲು ಹಾಸನದಲ್ಲಿರುವ ಸತ್ಯನಾರಾಯಣ ಮತ್ತು ಸಹೋದರರು ಬಹಳ ಪ್ರಯತ್ನ ಪಡುತ್ತಿದ್ದಾರೆ. ಬೆಳವಾಡಿಯು ನಮ್ಮ ರಾಜ್ಯದ ಸಂಪತ್ತು ಅದನ್ನು ಉಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

No Comments to “ಬೆಳವಾಡಿ ಉದ್ಭವ ಗಣಪನ ಚರಿತ್ರೆ”

add a comment.

Leave a Reply

You must be logged in to post a comment.