ಯಾಂತ್ರಿಕ ಜೀವನದಲ್ಲಿ ನಲುಗದಿರಲಿ ಸಂಸ್ಕೃತಿ

ಇದು ಕಂಪ್ಯೂಟರ್‌ ಯುಗ. ಜೊತೆಗೆ ಯಾಂತ್ರಿಕ ಯುಗವೂ ಹೌದು, ಸಮಯವಿಲ್ಲದ ವೇಗಗತಿಯ ಜವನ. ಇರುವ ೨೪ ಗಂಟೆಗಳು ಒಂದುದಿನಕ್ಕೆ ಸಾಕಾಗುವುದಿಲ್ಲ.ಅಗತ್ಯವಿರುವ ಆಹಾರ,ನಿದ್ರೆಗಳಿಗೆ ಸಮಯವೇ ಉಳಿಯುವುದಿಲ್ಲ. ಇದರ ಮಧ್ಯೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಉಳಿಯಲು ಹೇಗೆ ಸಾಧ್ಯ? ಈ ಶರವೇಗದ ಜೀವನಕ್ಕೆ ಸಿಕ್ಕಿ ಆಚಾರ-ವಿಚಾರ, ಸಂಸ್ಕೃತಿ- ಸಂಪ್ರದಾಯಗಳೆಲ್ಲ ಧೂಳಿಪಟವಾಗಿವೆ. ಇನ್ನು ಈ ಹಬ್ಬ-ಹರಿದಿನಗಳಿಗೆ ಬಂದರೆ ಯಾವಾಗ ಬರುತ್ತದೆ ಎಂಬುದೇ ತಿಳಿಯದಂತಾ ಗಿದೆ. ಕೆಲಸದ ಒತ್ತಡದ ಮಧ್ಯೆ ಇವೆಲ್ಲಾ ಮರೆತು ಬಿಡುವುದು ಸಾಮಾನ್ಯ.ಹಬ್ಬದ ದಿನ ಅಂಗಡಿಯಲ್ಲಿ ಸಿಗುವ ಕೃತಕ ತಿನಿಸುಗಳನ್ನೆ ತಂದು ಹಬ್ಬ ಮಾಡಿದರಾಯಿತು. ಹಬ್ಬದ ಅಡುಗೆ ಮಾಡಲು ಸಮಯವೆಲ್ಲಿದೆ? ಅಲ್ಲದೆ ಶ್ರಮವಿಲ್ಲದೆ ಮಾರುಕಟ್ಟೆ ಯಲ್ಲಿ ತಯಾರಾಗಿರುವ ತಿಂಡಿ-ತಿನಿಸುಗಳನ್ನು ತಂದರಾಯಿತು,ಹಬ್ಬ ಮುಗಿದೇ ಹೋಯಿತು. ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ, ತುಂಬುಕುಟುಂಬಗಳು ವಾರಾನುಗಟ್ಟಿಲೆ ಹಬ್ಬದ ತಯಾರಿ ನಡೆಸಲಾಗುತಿತ್ತು.ಮನೆ ತುಂಬ ಜನಜಂಗುಳಿ, ಇನ್ನು ಹೆಣ್ಣು ಮಕ್ಕಳನ್ನು ತವರಿಗೆ ಕರೆತಂದು ಸಂಭ್ರಮಿಸಿ ಹಬ್ಬ ಆಚರಿಸುತ್ತಿದ್ದಂತ ಕಾಲವದು. ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ, ಮನೆಮಂದಿಯೆಲ್ಲ ಒಟ್ಟಿಗೆ ಕೂತು ಸಂತೃಪ್ತಿಯಿಂದ ಊಟಮಾಡುತ್ತಿದ್ದರು, ನಕ್ಕು ನಲಿಯುತ್ತಿದ್ದರು. ಆದ್ರೆ ಈಗ ಎಲ್ಲಾ ಚದುರಿದ ಕುಟುಂಬಗಳು. ಈ ಅಣುಕುಟುಂಬದಲ್ಲಿ ಇರುವುದೆ ಮೂರು ಮತ್ತೊಂದು ಜನ. ಇನ್ನು ಹೆಣ್ಣುಮಕ್ಕಳ ವಿಚಾರಕ್ಕೆ ಬಂದ್ರೆ ಗಂಡನ ಮನೆಗೆ ಹೋಗಿ ಆಕೆಯನ್ನು ಸಂಪ್ರದಾಯಬದ್ದವಾಗಿ ಕರೆತರಬೇಕೆಂದೇನಿಲ್ಲ, ಒಂದು ಫೋನ್‌ಕಾಲ್‌ ಮಾಡಿ ಕುಳಿತಲ್ಲೆ ಮಗಳನ್ನು ಕರೆಸಿಕೊಳ್ಳುವುದು ವಿಶೇಷ. ಇಂದಿನದು ಯಾಂತ್ರಿಕ ಜೀವನ. ಇನ್ನು ಪಟ್ಟಣ ಪ್ರದೇಶದ ಮಕ್ಕಳಿಗೆ ಹಬ್ಬ ಹರಿದಿನಗಳ ಅರಿವಿರುವುದು ಕಡಿಮೆ. ಸಂಪ್ರದಾಯ ಗಳ ಬಗ್ಗೆ ತಿಳಿಹೇಳಲು ಹಿರಿಯ ತಲೆಗಳು ಇರೋದಿಲ್ಲ, ಅಪ್ಪ-ಅಮ್ಮ ಸಂಪೂರ್ಣ ಬಿಜಿ; ಅದಕ್ಕೆ ಈ ಮಕ್ಕಳು ಭತ್ತದ ಮರ! ರಾಗಿಮರ! ಅಂತ ಕೇಳಲು ಹೇಗೆ ಸಾಧ್ಯ? ಪಟ್ಟಣ ಪ್ರದೇಶದ ಜೀವನವೇ ಇಷ್ಟು. ಹಬ್ಬದ ವಿಶೇಷತೆ, ಪ್ರಾಮುಖ್ಯತೆ ಏನು ಎಂಬುದೇ ಗೊತ್ತಿರಲ್ಲ. ಮಾವಿನ ಎಲೆಯಿಂದ ಹಿಡಿದು ಮನೆಮುಂದೆ ಹಾಕೊ ರಂಗೋಲಿಪುಡಿ ಎಲ್ಲವನ್ನು ಕಾಸುಕೊಟ್ಟು ಪಡಿಬೇಕು, ಇದು ಕೃತಕ ಜೀವನ, ರೆಡಿಮೇಡ್‌ ಲೈಫ್‌. ಗ್ರಾಮೀಣ ಪ್ರದೇಶದಲ್ಲಿ ಊರಿನವರೆಲ್ಲಾ ಊರಿನ ಪ್ರಮುಖ ಸ್ಥಳದಲ್ಲಿ ಸೇರಿ, ಶುಭ ಕೋರಿ ಕೊಂಡು ಸಂಭ್ರಮಿಸುತ್ತಾರೆ.ಅಲ್ಲಿನ ಮಕ್ಕಳಿಗಂತೂ ಸುಗ್ಗಿಯೇ ಸುಗ್ಗಿ. ಕುಣಿದು ಕುಪ್ಪಳಿಸುತ್ತಾರೆ. ಪಟ್ಟಣ ಪ್ರದೇಶದ ಜನರಿಗೆ ಪಕ್ಕದ ಮನೆಯವರೆ ಗೊತ್ತಿರಲ್ಲ, ತಾವಾಯ್ತು, ತಮ್ಮ ಕೆಲಸವಾಯ್ತು ಅಂತ ಇದ್ದು ಬಿಡ್ತಾರೆ. ಸಾಮಾನ್ಯವಾಗಿ ಉಡುಗೆ-ತೊಡುಗೆಗಳು ಹಳ್ಳಿಗಳಲ್ಲಿ ಸಂಪ್ರದಾಯಬದಟಛಿವಾಗಿರುತ್ತವೆ. ಹಿರಿಯರು ನಡೆದು ಬಂದ ಹಾದಿಯಲ್ಲೆ ಉಳಿದವರು ನಡೆಯುತ್ತಾರೆ.ಅವರ ಆಚಾರ ವಿಚಾರಗಳನ್ನೆ ಅನುಸರಿಸುತ್ತಾರೆ. ಪಟ್ಟಣದಲ್ಲಿ ಈ ರೀತಿಯ ನಿಯಮವೇನಿಲ್ಲ. ಎಲ್ಲರೂ ತಮಗಿಷ್ಟ ಬಂದ ರೀತಿಯಲ್ಲೆ ನಡೆಯುತ್ತಾರೆ, ಬಟ್ಟೆ-ಬರಿಗಳನ್ನು ನಿರ್ದಿಷ್ಟ ಹಬ್ಬಕ್ಕೆ ತೆಗೆದುಕೊಂಡು ತೊಟ್ಟು ಸಂಭ್ರಮಿಸ ಬೇಕೆಂದಿಲ್ಲ, ಶಾಪಿಂಗ್‌ ಅನ್ನೊ ಹೆಸರಿನಲ್ಲಿ ವಾರಕ್ಕೆ ಒಂದು ದಿನ ಖರೀದಿಯೇ ಆಗೋಗುತ್ತೆ. ಒಂದೊಂದು ಹಬ್ಬಕ್ಕೂ ಒಂದೊಂದು ವಿಶೇಷ ಪದಾರ್ಥ ಪ್ರಾಮುಖ್ಯತೆ ಪಡೆದಿರುತ್ತದೆ. ಯುಗಾದಿ ಹಬ್ಬಕ್ಕೆ ಬೇವು-ಬೆಲ್ಲ, ಸಂಕ್ರಾಂತಿಗೆ ಎಳ್ಳುಬೆಲ್ಲ ಗಣೇಶ ಹಬ್ಬಕ್ಕೆ ಕಡುಬು, ಒಬ್ಬಟ್ಟು, ತಂಬಿಟ್ಟು ಇತ್ಯಾದಿ ಪದಾರ್ಥಗಳ ವಿಶೇಷತೆ ಇರುತ್ತದೆ. ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದು ಕ್ಷಣ ಯೋಚಿಸಿದರೆ ಮುಂದಿನ ಪೀಳಿಗೆಗೆ ಹಬ್ಬ- ಹರಿದಿನಗಳು ಬರಿ ಮಾತಿಗೆ ಮೀಸಲಾಗಿ ಬಿಡುವವೆನೋ ಎಂಬ ಭಯ ಕೆಲವೊಮ್ಮೆ ಕಾಡುತ್ತಿರುತ್ತವೆ. ವಿಚಿತ್ರವೆಂದರೆ ನಮ್ಮ ಆಚಾರ -ವಿಚಾರಗಳನ್ನು ತೇಲಿಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ವೇಷ-ಭೂಷಣಗಳಿಂದ ಹಿಡಿದು ಭಾಷೆ, ತಿನ್ನೊ ಆಹಾರವೂ ಸಹ ಪಾಶ್ಚಾತ್ಯಮಯ ವಾಗಿದೆ. ಹಿಂದೂಗಳಿಗೆ ಯುಗಾದಿ ಹೊಸ ವರ್ಷ. ಈ ಯುಗದ ಹಾದಿಯಾಗಿರುತ್ತದೆ. ಆದ್ರೆ ನ್ಯೂಯಿಯರ್‌ ಆಚರಣೆ ವಿದೇಶಿ ಆಚರಣೆ. ಇಂದು ದೇಶಿ ಸಂಪ್ರ ದಾಯವನ್ನು ಕಡೆಗಣಿಸಿ ವಿದೇಶಿ ಆಚರಣೆಗೆ ಮನಸೋತಿದ್ದೇವೆ. ಎಂಬುವರ ಸೂಚಕವಾಗಿದೆ. ಇತ್ತೀಚೆಗೆ ಹಳ್ಳಿಗಳಲ್ಲೂ ಪಾಶ್ಚಾತೀಕರಣ ಪ್ರಭಾವ ಬೀರಿರುವುದು ಶೋಚನೀಯ. ತಿಂಗಳುಗಟ್ಟಲೆ ಹಬ್ಬಕ್ಕೆ ಅಣಿ ಮಾಡುತ್ತಿದ್ದವರು ಇಂದು ಆ ಗೋಜಿಗೆ ಹೋಗಲ್ಲ. ತಮಗನಿಸಿದ ರೀತಿಯಲ್ಲಿ ತಮ್ಮ ಕೆಲಸಕಾರ್ಯಗಳನ್ನು ಸುಲಭ ಮಾಡಿಕೊಳ್ಳು ತ್ತಾರೆ. ಇಲ್ಲಿ ಪಟ್ಟಣಕ್ಕೆ ಹೋಗಿ ಇದ್ದು ಕಲಿತು ಬಂದ ಜನತೆಯ ಪರಿಪಾಠವೇ ಈ ಬದಲಾವಣೆಗೆ ಮುಖ್ಯಕಾರಣ. ಯುವಕ-ಯುವತಿಯರಿಗೂ ಮಾಧ್ಯಮ ಗಳಿಗೂ ಎಲ್ಲಿಲ್ಲದ ನಂಟು. ಅದರಲ್ಲೂ ಟಿ.ವಿ. ಪ್ರಭಾವ ಅಪಾರ. ಪ್ಯಾಷನ್‌ ಹೆಸರಿನಲ್ಲಿ ತಮ್ಮ ಆಚಾರ-ವಿಚಾರಗಳನ್ನು ಬದಿಗೊತ್ತಿದ್ದಾರೆ. ಯಾವುದೇ ಹೊಸವಸ್ತು ಮಾರಿಕಟ್ಟೆಗೆ ಬಂದರೂ ಅದನ್ನು ತಾವು ಪಡೆಯಬೇಕೆಂಬ ಹಂಬಲ ಇವರದು. ಈಚೆಗೆ ಶ್ರಮವಹಿಸಿ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಹಬ್ಬಗಳ ಆಗಮನಕ್ಕೆ ತಯಾರಿ ನಡೆಸುವ ವಿಧಾನ ಜನರಿಗೆ ಮರೆತು ಹೋಗಿದೆ. ಸಿದಟಛಿವಸ್ತುಗಳೇ ಕೈಗೆ ಸಿಗುವಾಗ ಕಷ್ಟಪಡುವಲ್ಲಿ ಅರ್ಥವಿಲ್ಲ ವೇನೋ. ಮೊನ್ನೆ-ಮೊನ್ನೆ ತಾನೆ ಯುಗಾದಿ ಹಬ್ಬ ಮುಗಿದಿದೆ. ಸೂಕ್ಷ್ಮವಾಗಿ ಗಮನಿಸಿದರೆ ಎಷ್ಟರ ಮಟ್ಟಿಗೆ ನಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಅನುಸರಿಸಿ ಹಬ್ಬ ಆಚರಸಿದ್ದೇವೆ ಎಂಬುದನ್ನು ನಾವೇ ಯೋಚಿಸ ಬೇಕಾಗಿದೆ. ಕೆಲವು ವೇಳೆ ಅದ್ದೂರಿ ಆಡಂಬರವನ್ನು ತೋರಿಸಿಕೊಳ್ಳಲು ತರತರದ ಆಚರಣೆಯನ್ನು ಅನುಸರಿಸ ಬಹುದು. ಆದರದು ಎಷ್ಟರಮಟ್ಟಿಗೆ ಸೂಕ್ತವಾದುದು. ಈ ರೀತಿ ಬದ ಲಾಗದಿದ್ರೆ ಸಮಾಜದಲ್ಲಿ ಗೌರವ ಲಭ್ಯವಾಗದೆಂಬ ವಾದಗಳನ್ನು ಕೇಳಿಯೇ ಇರುತ್ತೇವೆ. ಸಂಸ್ಕೃತಿ ಬದಲಾವಣೆಯಿಂದಲೂ ಮುಂದು ಬರಬೇಕೆಂಬು ದಾಗಲಿ ಹೆಸರು ಗಳಿಬೇಕೆಂಬುದೇನಿಲ್ಲ. ಅದನ್ನೇ ವಿಜ್ಞಾನ -ತಂತ್ರಜ್ಞಾನದ ಕಡೆಗೆ ಹೆಚ್ಚಿನ ಗಮನ ಹರಿಸಿ ಈ ಕ್ಷೇತ್ರಗಳಲ್ಲಿ ಬದಲಾಗೋಣ. ಹೊಸ ಆವಿಷ್ಕಾರಗಳನ್ನು ಅನುಸರಿಸೋಣ ಇದು ದೇಶಕ್ಕೂ ಒಳ್ಳೆಯದು ನಮಗೂ ಒಳ್ಳೆಯದು. ನಮ್ಮ ಜೀವನದಲ್ಲಿ ಕುಟುಂಬದ ಸಂಸ್ಕೃತಿಯನ್ನು ಅಳವಡಿಕೊಂಡರೂ ಸಹ ಮೂಲ ಸಂಸ್ಕೃತಿಗೆ ಧಕ್ಕೆ ಬಾರದಿರಲಿ. ನಮ್ಮತನವನ್ನು ನಾವು ಎಂದಿಗೂ ಸಡಿಲಿಸಬಾರದು. ಒಳಿತು ನಮಗೂ ಇರಲಿ ನಮ್ಮ ಪೀಳಿಗೆಗೂ ಇರಲಿ. ಆರೋಗ್ಯದ ವಾತಾವರಣ ಸೃಷ್ಟಿಸುವುದು ನಮ್ಮ ಕೈಯಲ್ಲಿದೆ. ನವ ಯುಗಾದಿ ತೆರೆಯಲಿ ಜೀವನದ ಹೊಸ ಹಾದಿ.

No Comments to “ಯಾಂತ್ರಿಕ ಜೀವನದಲ್ಲಿ ನಲುಗದಿರಲಿ ಸಂಸ್ಕೃತಿ”

add a comment.

Leave a Reply

You must be logged in to post a comment.